Skip to main content
ವಿಡಿಯೋ
1/2
metro

ಜಾಲಹಳ್ಳಿ ಕ್ರಾಸ್‌–ಮಾದನಾಯಕನಹಳ್ಳಿ ನಡುವೆ ಬಿಎಂಟಿಸಿ ಹೊಸ ಬಸ್ ಸೇವೆ: ಪ್ರಯಾಣಿಕರಿಗೆ ನೇರ ಸಂಪರ್ಕದ ಸೌಲಭ್ಯ!

By Gireesh Vasishta
ಜಾಲಹಳ್ಳಿ ಕ್ರಾಸ್‌–ಮಾದನಾಯಕನಹಳ್ಳಿ ನಡುವೆ ಬಿಎಂಟಿಸಿ ಹೊಸ ಬಸ್ ಸೇವೆ: ಪ್ರಯಾಣಿಕರಿಗೆ ನೇರ ಸಂಪರ್ಕದ ಸೌಲಭ್ಯ!

ಬೆಂಗಳೂರು ಬಿಎಂಟಿಸಿ ಜಾಲಹಳ್ಳಿ ಕ್ರಾಸ್‌ನಿಂದ ಮಾದನಾಯಕನಹಳ್ಳಿ ನಡುವೆ ಹೊಸ ಬಸ್ ಮಾರ್ಗವನ್ನು ಪ್ರಾರಂಭಿಸಿದ್ದು, ಮಧ್ಯದಲ್ಲಿನ ಪ್ರಮುಖ ಪ್ರದೇಶಗಳಲ್ಲಿನ ಪ್ರಯಾಣಿಕರಿಗೆ ನೇರ ಸಂಪರ್ಕ ಕಲ್ಪಿಸಿದೆ. ವಿವಿಧ ಸಮಯಗಳಲ್ಲಿ ಬಸ್‌ಗಳು ಸಂಚರಿಸಲಿದ್ದು, ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಒದಗಲಿದೆ.

ಬೆಂಗಳೂರು ಬಿಎಂಟಿಸಿ ಜಾಲಹಳ್ಳಿ ಕ್ರಾಸ್ನಿಂದ ಮಾದನಾಯಕನಹಳ್ಳಿ ನಡುವೆ ಹೊಸ ಬಸ್ ಮಾರ್ಗವನ್ನು ಪ್ರಾರಂಭಿಸಿದ್ದು, ಮಧ್ಯದಲ್ಲಿನ ಪ್ರಮುಖ ಪ್ರದೇಶಗಳಲ್ಲಿನ ಪ್ರಯಾಣಿಕರಿಗೆ ನೇರ ಸಂಪರ್ಕ ಕಲ್ಪಿಸಿದೆ. ವಿವಿಧ ಸಮಯಗಳಲ್ಲಿ ಬಸ್ಗಳು ಸಂಚರಿಸಲಿದ್ದು, ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಒದಗಲಿದೆ.

 

ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತೊಮ್ಮೆ ತನ್ನ ಸೇವೆಗಳನ್ನು ವಿಸ್ತರಿಸಿದೆ. ಜಾಲಹಳ್ಳಿ ಕ್ರಾಸ್ನಿಂದ ಮಾದನಾಯಕನಹಳ್ಳಿ ನಡುವೆ ಹೊಸ ಮಾರ್ಗವನ್ನು ಪರಿಚಯಿಸಿದ್ದು, ಇದರಿಂದ ಭಾಗದ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹವಾನಿಯಂತ್ರಣ ರಹಿತ ಹೊಸ ಸೇವೆ ಮಾದನಾಯಕನಹಳ್ಳಿ, ರಾವುತನಹಳ್ಳಿ ಕ್ರಾಸ್, ವಡ್ಡರಹಳ್ಳಿ, ಕಡಬಗೆರೆ ಕ್ರಾಸ್, ಸುಂಕದಕಟ್ಟೆ ಮತ್ತು ಗೊರಗುಂಟೆಪಾಳ್ಯ ಮಾರ್ಗಗಳಲ್ಲಿ ಸಂಚರಿಸಲಿದೆ. ಇದು ಪ್ರದೇಶಗಳಲ್ಲಿನ ಪ್ರಯಾಣಿಕರಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.

 

ಜಾಲಹಳ್ಳಿ ಕ್ರಾಸ್ನಿಂದ ಮಾದನಾಯಕನಹಳ್ಳಿ ಕಡೆಗೆ ಮೊದಲ ಮಾರ್ಗ ಸಂಖ್ಯೆ 2ರಲ್ಲಿ ಬಸ್ಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 06:30, 08:00, 08:30, 10:30, 11:15, ಮಧ್ಯಾಹ್ನ 01:00, 01:35, 03:25, 04:00, ಮತ್ತು ಸಂಜೆ 06:25.ಧರ್ಮವನ್ನು ಅಣಕಿಸುವ ಸಿನಿಮಾಗೆ ಜಾತ್ಯತೀತ ಸಮಾಜದಲ್ಲಿ ಆಸ್ಪದ ಇರದು: ಪ್ರಾಣಿ ಹತ್ಯೆಯಲ್ಲಿ ತೊಡಗಿರುವ ಕಟುಕರನ್ನು ಹ* ಮಾಡುವ ಮಾಸೂಮ್ ಕಾತಿಲ್ ಬಗ್ಗೆ ದೆಹಲಿ ಹೈಕೋರ್ಟ್ ತೀರ್ಪು

 

ಇದೇ ಮಾರ್ಗದಲ್ಲಿ, ಎರಡನೇ ಬಸ್ ಸೇವೆಯಾದ ಮಾರ್ಗ ಸಂಖ್ಯೆ 2 ಬೆಳಿಗ್ಗೆ 07:30, 09:00, 09:40, 11:50, ಮಧ್ಯಾಹ್ನ 12:25, 02:10, 02:45, 04:35, 05:10, ಮತ್ತು ಸಂಜೆ 07:30ಕ್ಕೆ ಜಾಲಹಳ್ಳಿ ಕ್ರಾಸ್ನಿಂದ ಹೊರಡಲಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

 

ಪ್ರಯಾಣಿಕರು ಹೊಸ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿಸ್ತರಣೆಯು ನಾಗರಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಬಿಎಂಟಿಸಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.