Skip to main content
ವಿಡಿಯೋ
1/2
crime

ಅಮ್ರೋಹಾ ಚಿಕನ್ ಕಲಹ: ಸಸ್ಯಹಾರಿ ರೀನಾ ಆತ್ಮಹತ್ಯೆ; ಗಂಗೆಯಲ್ಲಿ ಶವ ಮುಳುಗಿಸಿ ನಾಪತ್ತೆ ದೂರು..!

By Vinutha U
ಅಮ್ರೋಹಾ ಚಿಕನ್ ಕಲಹ: ಸಸ್ಯಹಾರಿ ರೀನಾ ಆತ್ಮಹತ್ಯೆ; ಗಂಗೆಯಲ್ಲಿ ಶವ ಮುಳುಗಿಸಿ ನಾಪತ್ತೆ ದೂರು..!

ಆದರೆ ನಿಗಮ್‌ರ ತಂದೆ ಸುರೇಶ್ ಮತ್ತು ತಾಯಿ ಕುಂಟಾ ನಾಪತ್ತೆಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪೊಲೀಸರು ರೀನಾಳದ್ದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಖಚಿತಪಡಿಸಲು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಇನ್ನೂ ಹುಡುಕಲಾಗುತ್ತಿದ್ದು, ನಿಗಮ್ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ.

ಜಗಳದ ಹಿನ್ನೆಲೆ: 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಅಮ್ರೋಹಾ ಜಿಲ್ಲೆಯ ಅದಂಪುರದ ಕೊಕಾಪುರದ ನಿವಾಸಿ ರೀನಾ, 10 ತಿಂಗಳ ಹಿಂದಷ್ಟೇ ನಿಗಮ್ ಸಿಂಗ್‌ನೊಂದಿಗೆ ಮದುವೆಯಾಗಿದ್ದಳು. ಆಗಸ್ಟ್ 20ರಂದು ನಿಗಮ್ ಮದ್ಯ ಸೇವಿಸಿ ಮನೆಗೆ ಕೋಳಿ ಮಾಂಸ ತಂದಿದ್ದನು. ಸಸ್ಯಹಾರಿಯಾದ ರೀನಾ ಇದಕ್ಕೆ ಒಪ್ಪುವುದಿಲ್ಲ, ಚಿಕನ್ ಸಾಂಬಾರ್ ಮಾಡುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಸಣ್ಣದಾಗಿ ಶುರುವಾದ  ಜಗಳ ತೀವ್ರವಾದ ವಿಕೋಪಕ್ಕೆ ತಿರುಗಿದೆ, ನಂತರ ರೀನಾ ಕೋಪದಿಂದ ನೇಣು ಬಿಗಿದುಕೊಂಡು ಸತ್ತಿದ್ದಾಳೆ ಎಂದು ನಿಗಮ್ ಹೇಳಿಕೆ ನೀಡಿದ್ದಾನೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ನಿಗಮ್ ಆ ರಾತ್ರಿ ಮದ್ಯ ಸೇವನೆ ಮಾಡಿದ್ದನು ಮತ್ತು ರೀನಾ ಅಡುಗೆ ಮಾಡಲು ಒಪ್ಪದಿದ್ದಕ್ಕೆ ಹಲ್ಲೆ ನಡೆಸಿದ್ದನು. ಇದರಿಂದ ಭಯಭೀತಳಾದ ರೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ರೀನಾ ಅಮ್ಮ ಕೌಶಲ್ಯಾ ದೇವಿ ದೂರು ನೀಡಿ, ವರದಕ್ಷಿಣೆಗಾಗಿ ಕಿರುಕುಳ ಮಾಡಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಶವವನ್ನು ಗಂಗೆಗೆ ಎಸೆದು ನಾಪತ್ತೆಯಾಗಿದ್ದಾರೆ.

ಕುಟುಂಬ ಜಗಳದ ನಂತರ ರೀನಾ ಸತ್ತಿದ್ದನ್ನು ತಿಳಿದ ನಿಗಮ್, ತನ್ನ ಸಹೋದರ ಮಹ್ಕರ್ ಮತ್ತು ಬಂಡೆ ಜಿಜೇಂದ್ರ ಸಿಂಗ್‌ರ ಸಹಾಯದಿಂದ ಶವವನ್ನು ಬಟ್ಟೆಯಲ್ಲಿ ಹಾಕಿ, ಸುಮಾರು 3 ಕಿ.ಮೀ. ದೂರದ ಗಂಗಾ ನದಿಗೆ ಎಸೆದಿದ್ದಾರೆ.

PURVAJA Women’s Bodycon Midi Dress(Ruby-001-to-008)

ಇದರ ನಂತರ ಪೊಲೀಸ್ ಠಾಣೆಗೆ ತೆರಳಿ, "ನನ್ನ ಪತ್ನಿ ರೀನಾ ಓಡಿ ಹೋಗಿದ್ದಾಳೆ, ಆಕೆಯನ್ನು ಹುಡುಕಿಕೊಡಿ" ಎಂದು ನಾಪತ್ತೆ ದೂರು ದಾಖಲಿಸಿದ್ದು. ಈ ಮೂಲಕ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ತನಿಖೆಯಲ್ಲಿ ಗಂಗಾ ನದಿಯಲ್ಲಿ ರೀನಾ ಬಟ್ಟೆ  ಪತ್ತೆಯಾಗಿತ್ತು. ಇದರಿಂದ ಶಂಕೆಯನ್ನು ಹೆಚ್ಚಿಸಿಕೊಂಡ ಪೊಲೀಸರು ನಿಗಮ್‌ರ ಚಲನವಲನಗಳನ್ನು ಗಮನಿಸಿ, ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ವಿಚಾರಣೆಯಲ್ಲಿ ನಿಗಮ್ ಸತ್ಯವನ್ನು ಬಾಯ್ಬಿಟ್ಟು, "ಜಗಳದಿಂದ ರೀನಾ ನೇಣು ಬಿಗಿದುಕೊಂಡಳು. ಸಂಬಂಧಿಕರ ಸಹಾಯದಿಂದ ಶವವನ್ನು ನದಿಗೆ ಎಸೆದೆ" ಎಂದು ಒಪ್ಪಿಕೊಂಡಿದ್ದಾನೆ.

ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಮಹಾ ದುರಂತ...ಕ್ಯಾಂಟರ್ ಡಿಕ್ಕಿ, 9 ಮಂದಿ ದುರ್ಮರಣ!

ಇಬ್ಬರು ತಪ್ಪಿಸಿಕೊಂಡಿದ್ದಾರೆ ನಿಗಮ್ ಹೇಳಿಕೆ ಆಧಾರದಲ್ಲಿ ಪೊಲೀಸರು ಆತನ ಸಹೋದರ ಮಹ್ಕರ್ ಮತ್ತು ಬಂಡೆ ಜಿಜೇಂದ್ರ ಸಿಂಗ್‌ರನ್ನು ಬಂಧಿಸಿದ್ದಾರೆ. ಆದರೆ ನಿಗಮ್‌ರ ತಂದೆ ಸುರೇಶ್ ಮತ್ತು ತಾಯಿ ಕುಂಟಾ ನಾಪತ್ತೆಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪೊಲೀಸರು ರೀನಾಳದ್ದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಖಚಿತಪಡಿಸಲು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಇನ್ನೂ ಹುಡುಕಲಾಗುತ್ತಿದ್ದು, ನಿಗಮ್ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ.