Skip to main content
ವಿಡಿಯೋ
1/2
cinema

'ಬಾಂಬೆ' ಅಲ್ಲ 'ಮುಂಬೈ'..ಕಪಿಲ್ ಶರ್ಮಾ ವಿರುದ್ಧ ಆಕ್ರೋಶ! ಖಂಡಿಸಿದವರ ಹೆಸರು ಕೇಳಿ ಇಡಿ ತಂಡ ಶಾಕ್!

By Ram Chethan
 'ಬಾಂಬೆ' ಅಲ್ಲ 'ಮುಂಬೈ'..ಕಪಿಲ್ ಶರ್ಮಾ ವಿರುದ್ಧ ಆಕ್ರೋಶ! ಖಂಡಿಸಿದವರ ಹೆಸರು ಕೇಳಿ ಇಡಿ ತಂಡ ಶಾಕ್!

ನೆಟ್‌ಫ್ಲಿಕ್ಸ್‌ನ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ‘ಮುಂಬೈ’ ಬದಲು ‘ಬಾಂಬೆ’ ಪದ ಬಳಕೆ ಮಾಡಿದಕ್ಕಾಗಿ ಎಂಎನ್‌ಎಸ್ ನಾಯಕ ಅಮೇ ಖೋಪ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರೆದರೆ ಸೆಟ್‌ಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಾಸ್ಯನಟ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಚಿತ್ರಪತ್ ಸೇನಾ ಮುಖ್ಯಸ್ಥ ಅಮೇ ಖೋಪ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪಿಲ್ ಶರ್ಮಾ ತಮ್ಮ ಕಾರ್ಯಕ್ರಮದಲ್ಲಿ ಮುಂಬೈ ನಗರವನ್ನು 'ಬಾಂಬೆ' ಎಂದು ಉಲ್ಲೇಖಿಸಿದ್ದಕ್ಕೆ ಈ ವಿವಾದ ಭುಗಿಲೆದ್ದಿದೆ.

ಮುಂಬೈಗೆ ಅಧಿಕೃತವಾಗಿ ಮರುನಾಮಕರಣಗೊಂಡು ಮೂವತ್ತು ವರ್ಷಗಳ ನಂತರವೂ, ಕಪಿಲ್ ಅವರ ಶೋನಲ್ಲಿ ಅದನ್ನು ಬಾಂಬೆ ಎಂದು ಕರೆಯಲಾಗುತ್ತಿದೆ ಎಂದು ಅಮೇ ಖೋಪ್ಕರ್ ಟ್ವಿಟರ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮದಲ್ಲಿ, ಅತಿಥಿಗಳು ಮತ್ತು ಕಪಿಲ್ ಸ್ವತಃ ಮುಂಬೈ ಬದಲಿಗೆ ಪದೇ ಪದೇ 'ಬಾಂಬೆ' ಎಂದು ಹೇಳುವುದನ್ನು ಖೋಪ್ಕರ್ ಖಂಡಿಸಿದ್ದಾರೆ.

ಅವರು ತಮ್ಮ ಪೋಸ್ಟ್‌ನಲ್ಲಿ, "ಬಾಂಬೆಯನ್ನು ಅಧಿಕೃತವಾಗಿ ಮುಂಬೈ ಎಂದು ಮರುನಾಮಕರಣ ಮಾಡಿ 30 ವರ್ಷಗಳ ನಂತರವೂ, 'ಕಪಿಲ್ ಶರ್ಮಾ ಶೋ'ನಲ್ಲಿ ಸೆಲೆಬ್ರಿಟಿ ಅತಿಥಿಗಳು, ದೆಹಲಿ ಮೂಲದ ರಾಜ್ಯಸಭಾ ಸಂಸದರು, ಕಾರ್ಯಕ್ರಮ ನಿರೂಪಕರು ಮತ್ತು ಅನೇಕ ಹಿಂದಿ ಚಲನಚಿತ್ರಗಳು ಬಾಂಬೆ ಎಂಬ ಪದವನ್ನು ಇನ್ನೂ ಉಲ್ಲೇಖಿಸುತ್ತಿವೆ" ಎಂದು ತಿಳಿಸಿದ್ದಾರೆ.


Victorinox Altmont Classic, Deluxe Laptop Backpack, 20 litres Black (602641)

ಇದಲ್ಲದೆ, 1995ರಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು 1996ರಲ್ಲಿ ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮೋದನೆ ಪಡೆದು ಮುಂಬೈ ಎಂದು ಬದಲಾಯಿಸಲಾಗಿದೆ. ಇದನ್ನೇ ಬಳಸಬೇಕು ಎಂದು ಅಮೇ ಖೋಪ್ಕರ್ ಎಚ್ಚರಿಕೆ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರ 'ಬಿಗ್ ಬಾಸ್ 19' ಬಗ್ಗೆ ಕಿಂಡಲ್ ಮಾಡಿದ ಅಶ್ನೀರ್ ಗ್ರೋವರ್...ಅವರು ಹೇಳಿದ್ದೇನು ಗೊತ್ತಾ?

ಈ ಕುರಿತು ಕಪಿಲ್ ಶರ್ಮಾ ಅಥವಾ ಅವರ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕು.

"ಕಪಿಲ್ ಶರ್ಮಾ ಅವರ ಶೋನಲ್ಲಿ ಮಾತ್ರವಲ್ಲದೆ ಹಿಂದಿ ಚಲನಚಿತ್ರಗಳು ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವೆಬ್ ಸರಣಿಗಳಲ್ಲಿಯೂ ಸಹ ಇದೇ ತರ ಬಳಕೆ ಆಗುತ್ತಿದೆ. ಮುಂಬೈ ಅನ್ನು ಉದ್ದೇಶಪೂರ್ವಕವಾಗಿ ಬಾಂಬೆ ಎಂದು ಕರೆಯಲಾಗುತ್ತಿದೆ" ಎಂದು ಅಮೇ ಖೋಪ್ಕರ್ ಆರೋಪಿಸಿದ್ದಾರೆ.

ಅವರು ತಮ್ಮ ಎಚ್ಚರಿಕೆಯನ್ನು ಇನ್ನಷ್ಟು ಸ್ಪಷ್ಟಪಡಿಸಿ, "ಯಾವುದೇ ಬದಲಾವಣೆ ಇಲ್ಲದಿದ್ದರೆ, ಸೆಟ್‌ಗಳಿಗೆ ಹೋಗಿ ಪ್ರತಿಭಟನೆ ನಡೆಸುತ್ತೇವೆ ಮತ್ತು ಚಿತ್ರೀಕರಣ ನಿಲ್ಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.

"ಕಪಿಲ್ ಸ್ವತಃ ಕಳೆದ 15-17 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ಇನ್ನೂ ನಗರವನ್ನು ಸರಿಯಾಗಿ ಹೆಸರಿಸಲು ಸಾಧ್ಯವಿಲ್ಲವೇ? ಅವರನ್ನು ಕಪಿಲ್ ಬದಲಿಗೆ ಟ್ಯಾಪಿಲ್ ಎಂದು ಕರೆದರೆ ಸರಿಯೇ?" ಎಂದು ಖೋಪ್ಕರ್ ಪ್ರಶ್ನಿಸಿದ್ದಾರೆ.