Skip to main content
ವಿಡಿಯೋ
1/2
general

ಮೈಸೂರಿನ 150 ವಕೀಲರಿಂದ ಧರ್ಮಸ್ಥಳ ಯಾತ್ರೆ...ಡಾ. ಹೆಗ್ಗಡೆಗೆ ಬೆಂಬಲ!

By Vinutha U
 ಮೈಸೂರಿನ 150 ವಕೀಲರಿಂದ ಧರ್ಮಸ್ಥಳ ಯಾತ್ರೆ...ಡಾ. ಹೆಗ್ಗಡೆಗೆ ಬೆಂಬಲ!

ಮೈಸೂರಿನ 150ಕ್ಕೂ ಹೆಚ್ಚು ವಕೀಲರು ಧರ್ಮಸ್ಥಳದತ್ತ ಯಾತ್ರೆ ಕೈಗೊಂಡು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಡಾ. ವೀರೇಂದ್ರ ಹೆಗ್ಗಡೆಗೆ ಬೆಂಬಲ ಸೂಚಿಸಿದರು.

ಧರ್ಮಸ್ಥಳಕ್ಕೆ ಬೆಂಬಲ ಸೂಚಿಸಿ ಮೈಸೂರಿನ ವಕೀಲರ ತಂಡವೊಂದು ಇಂದು ಯಾತ್ರೆ ಕೈಗೊಂಡಿದೆ. ಸೆಪ್ಟೆಂಬರ್ 13ರಂದು ಸುಮಾರು 150 ವಕೀಲರು ಕಾರು ಹಾಗೂ ಎರಡು ಬಸ್‌ಗಳಲ್ಲಿ ನಗರದ ನ್ಯಾಯಾಲಯ ಆವರಣದಿಂದ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದರು. ಈ ಯಾತ್ರೆಯ ಪ್ರಮುಖ ಉದ್ದೇಶ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದು ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸುವುದು.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸಂಚುಗಳನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಯಾತ್ರೆ ಆರಂಭಿಸುವ ಮುನ್ನ, ವಕೀಲರೆಲ್ಲರೂ ಕೇಸರಿ ಶಾಲುಗಳನ್ನು ಧರಿಸಿ, ಕೇಸರಿ ಧ್ವಜಗಳನ್ನು ಹಿಡಿದು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಮಧ್ಯಾಹ್ನದ ವೇಳೆಗೆ ಈ ತಂಡ ಧರ್ಮಸ್ಥಳ ತಲುಪುವ ನಿರೀಕ್ಷೆಯಿದೆ.

ಇದೇ ರೀತಿ, ಇತ್ತೀಚೆಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡರ ನೇತೃತ್ವದಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ನಡೆದಿತ್ತು. ಅಲ್ಲದೆ, ಹಲವಾರು ಬಿಜೆಪಿ ನಾಯಕರು ಸಹ ಧರ್ಮಸ್ಥಳಕ್ಕೆ ಭೇಟಿ ನೀಡಿ, ಡಾ. ಹೆಗ್ಗಡೆ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಿದ್ದರು.