ದುಃಖಿತ ವಿಧವೆಯ ಭಾವನಾತ್ಮಕ ಮನವಿ: ಭಾರತ-ಪಾಕ್ ಕ್ರಿಕೆಟ್ ಆಟವನ್ನು ಬಹಿಷ್ಕರಿಸಿ: ಕಾರಣ ಹೀಗಿದೆ
ಕಾನ್‌ಪುರ್(ಖಾನ್‌ಪುರ್): ಐಶಾನ್ಯಾ ದ್ವಿವೇದಿ, ಇವರು ಪಹಲ್ಗಾಮ್ ಉಗ್ರ ದಾಳಿಯಲ್ಲಿ ಬಲಿಯಾದ ಪ್ರವಾಸಿಗರೊಬ್ಬರ ಹೆಂಡತಿ, ಇವರು ಪಾಕಿಸ್ತಾನ್ ಮತ್ತು ಭಾರತದ ನಡುವೆ ನಡೆಯುವ ಏಷ್ಯಾ ಕಪ್ ಪಂದ್ಯವನ್ನು(ಸೆ.14) ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಇವರ ಈ ಮನವಿ ಭಾವನಾತ್ಮಕವಾಗಿದ್ದು ಹಲವು ರಾಜಕಾರಣಿಗಳು ಮತ್ತು ಮುಖಂಡರು ಇವರ ಮನವಿಯನ್ನು ಪುನರುಚ್ಚರಿಸಿದ್ದಾರೆ.
ಶುಭಂ ದ್ವಿವೇದಿ ಅವರ ಹೆಂಡತಿಯಾದ ಐಶಾನ್ಯಾ ದ್ವಿವೇದಿ ಅವರು ಮಾತು ಮುಂದುವರೆಸಿ ಇದನ್ನು ಬಹಿಷ್ಕರಿಸಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ ಎಂದರು. ಇದನ್ನು ನೋಡಲು ಹೋಗಬೇಡಿ ಮತ್ತು ಟಿವಿಯನ್ನು ಆನ್ ಮಾಡಬೇಡಿ," ಎಂದು ಐಶಾನ್ಯಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವರು ಮಾತನಾಡುವಾಗ ದುಖಃ ಮತ್ತು ಬೇಸರ ಅವರ ಮುಖದಲ್ಲಿ ಆವರಿಸಿತ್ತು.
ಪಾಕ್‌ನ ಆಟಗಾರರು ಪಹಾಲ್ಗಾಮ್ ದಾಳಿಯಲ್ಲಿ ಹತ್ಯೆಯಾದವರ ಬಗ್ಗೆ ಯಾವುದೆ ಮಾತನಾಡಲಿಲ್ಲ ಆದರೆ ಆಪರೇಷನ್ ಸಿಂದೂರ್ ದಾಳಿಯಾದ ನಂತರ ಅವರ ಬೆಂಬಲವನ್ನು ಪಾಕ್‌ನ ಸೇನೆಗೆ ಮತ್ತು ಅವರ ದೇಶದ ನಿರ್ಧಾರಗಳಿಗೆ ಸೂಚಿಸಿದ್ದರು. ಶಾಹಿದ್ ಅಫ್ರಿದಿ ಮತ್ತು ಇನ್ನಿತರ ಕ್ರಿಕೆಟಿಗರು ರ್ಯಾಲಿಗಳನ್ನು ಮಾಡುವ ಮೂಲಕ ಭಾರತ ವಿರುದ್ದದ ನಿಲುವನ್ನು ತೋರಿದ್ದರು. ಹೀಗಾಗಿ ಭಾರತ ಮತ್ತು ಪಾಕ್‌ನ ಪಂದ್ಯಗಳನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬರುತ್ತಿದೆ, ಆದರೆ ಈಗಾಗಲೆ ಟಿಕೆಟ್‌ಗಳು ಖರಿದಿಸಲ್ಪಟ್ಟಿದೆ, ಹೀಗಾಗಿ ಪಂದ್ಯವನ್ನು ನಿಲ್ಲಿಸುವುದು ಬಹುತೇಕ ಕಷ್ಟವಾಗಿದೆ.ಏಷ್ಯಾ ಕಪ್; ದುಬೈ ಕ್ರಿಕೆಟ್ ಸಂಘರ್ಷ; ಭಾರತ-ಪಾಕಿಸ್ತಾನ ಪಂದ್ಯ ರದ್ದುಗೊಳಿಸಿ ಎಂದು ಪ್ರಿಯಾಂಕಾ ಚತುರ್ವೇದಿ ಆಗ್ರಹ! ಕಾರಣ ಹೀಗಿದೆ
ಆದರೆ ಪಾಕ್‌ನಲ್ಲಿ ನಡೆಯಬೇಕಿದ್ದ ಎಲ್ಲಾ ಎಷ್ಯಾಕಪ್ ಪಂದ್ಯಗಳಿಗೂ ಈ ಹಿಂದೆ ಭಾರತದ ಕ್ರಿಕೆಟ್ ಸಂಸ್ಥೆ bcci ತನ್ನ ಕಟುವಾದ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯಗಳನ್ನು ದುಬೈಗೆ ಸ್ಥಾಳಾಂತರಿಸಲಾಗಿದೆ.