Skip to main content
ವಿಡಿಯೋ
1/2
politics

ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 7 ರ ತನಕ ಜಾತಿಗಣತಿ ಸಮೀಕ್ಷೆ: ಸಿದ್ದರಾಮಯ್ಯ ಅವರಿಂದ x ನಲ್ಲಿ ಮಾಹಿತಿ

By Gireesh Vasishta
ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 7 ರ ತನಕ ಜಾತಿಗಣತಿ ಸಮೀಕ್ಷೆ: ಸಿದ್ದರಾಮಯ್ಯ ಅವರಿಂದ x ನಲ್ಲಿ ಮಾಹಿತಿ

ಉದ್ದೇಶ: ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು. ಇದು ಹಿಂದುಳಿದ ವರ್ಗ, ಬಡತನ, ನಿರುದ್ಯೋಗ ಮತ್ತು ಅಶಿಕ್ಷತೆ ತೊಡೆದುಹಾಕಲು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 7 ರ ತನಕ ಜಾತಿಗಣತಿ ಸಮೀಕ್ಷೆ: ಸಿದ್ದರಾಮಯ್ಯ ಅವರಿಂದ x ನಲ್ಲಿ ಮಾಹಿತಿ

ಈ ಹಿಂದೆ ಮಾಡಿದ್ದ ಜಾತಿ ಸಮೀಕ್ಷೆಗೆ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಹೊಸದಾಗಿ ಸಮೀಕ್ಷೆಯನ್ನು ಮಾಡಲು ನಿರ್ಧಾರ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ:

ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 7 ರ ವರೆಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಿದೆ ಅರ್ಥಾತ್‌ ಜಾತಿ ಗಣತಿ. ಈ ಜಾತಿ ಗಣತಿ ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಆನ್‌ಲೈನ್‌ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಬಹುದು.ಸುಪ್ರೀಂ ಕೋರ್ಟ್‌ ಆವರಣದಲ್ಲಿ ಇನ್ನು ಸೆಲ್ಫಿ, ರೀಲ್ಸ್‌ಗೆ ನಿಷೇಧ: ಉಲ್ಲಂಘಿಸಿದವರಿಗೆ ಕಾದಿದೆ ಕಠಿಣ ಶಿಕ್ಷೆ

ಮುಖ್ಯ ವಿವರಗಳು:

ಉದ್ದೇಶ: ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು. ಇದು ಹಿಂದುಳಿದ ವರ್ಗ, ಬಡತನ, ನಿರುದ್ಯೋಗ ಮತ್ತು ಅಶಿಕ್ಷತೆ ತೊಡೆದುಹಾಕಲು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women

ನಡೆಸುವವರು: ಮಧುಸೂದನ್ ನಾಯಕ ಅಧ್ಯಕ್ಷತೆಯಲ್ಲಿ ಆಯೋಗ, 1.65 ಲಕ್ಷ ಗಣನಾಕಾರರೊಂದಿಗೆ (ಶಿಕ್ಷಕರು, ಸರ್ಕಾರಿ ಸಿಬ್ಬಂದಿ ಸೇರಿದಂತೆ).

ಖರ್ಚು: ಸುಮಾರು ₹420 ಕೋಟಿ.

–2015ರ ಸಮೀಕ್ಷೆಯನ್ನು ರದ್ದುಗೊಳಿಸಿ ಹೊಸದೊಂದನ್ನು ನಡೆಸಲಾಗುತ್ತಿದೆ, ಏಕೆಂದರೆ 10 ವರ್ಷಗಳು ಕಳೆದಿವೆ.

ಹೆಚ್ಚಿನ ಮಾಹಿತಿಗಾಗಿ, ಆಯೋಗದ ಹೆಲ್ಪ್‌ಲೈನ್ 8050770004 ಅಥವಾ ವೆಬ್‌ಸೈಟ್ https://kscbc.karnataka.gov.in ಗೆ ಸಂಪರ್ಕಿಸಿ.