Skip to main content
ವಿಡಿಯೋ
general

ಕೋಮು ಪ್ರಚೋದನೆ ಆರೋಪ: ಪೋಸ್ಟ್‌ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ಹೆಗ್ಗಡೆ ಬಂಧನ

By Shravanthi R
ಕೋಮು ಪ್ರಚೋದನೆ ಆರೋಪ: ಪೋಸ್ಟ್‌ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ಹೆಗ್ಗಡೆ ಬಂಧನ

ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವಂತಹ ಹೇಳಿಕೆಯಿದ್ದು, ಸಾಮಾಜಿಕ ಶಾಂತಿಗೆ, ಸಮಾಜದ ಸುವ್ಯವಸ್ಥೆಗೆ ತೊಂದರೆಪಡಿಸುವ, ವೈರತ್ವವನ್ನು ಬೆಳೆಸುವ ಹೇಳಿಕೆ ಎಂಬಂತೆ ಪ್ರಚಾರ ಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡಿಟೆಡ್‌ ಫೋಟೋ ಬಳಸಿಕೊಂಡು, ಕೋಮು ಪ್ರಚೋದನಕಾರಿ ಪೋಸ್ಟ್‌ ಮಾಡಿದ ಆರೋಪದ ಹಿನ್ನಲೆ, ಪೋಸ್ಟ್‌ಕಾರ್ಡ್‌ ನ್ಯೂಸ್‌  ಸಂಸ್ಥಾಪಕ ಮಹೇಶ್‌ ವಿಕ್ರಂ ಹೆಗ್ಗಡೆ ಅವರನ್ನು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ಪೋಲಿಸರು ಸೆ. 9 ರಂದು ಅವರ ವಿರುದ್ದ ಬಿಎನ್‌ಎಸ್‌ 353 (2) ಪ್ರಕಾರ, ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿಸಲಾಗಿದೆ. 

ಮೂಡಬಿದಿರೆ ಪಿಎಸ್‌ಐ ಕೃಷ್ಣಪ್ಪ ಎಂಬುವವರ ದೂರಿನನ್ವಯ, ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವಂತಹ ಹೇಳಿಕೆಯಿದ್ದು, ಸಾಮಾಜಿಕ ಶಾಂತಿಗೆ, ಸಮಾಜದ ಸುವ್ಯವಸ್ಥೆಗೆ ತೊಂದರೆಪಡಿಸುವ, ವೈರತ್ವವನ್ನು ಬೆಳೆಸುವ ಹೇಳಿಕೆ ಎಂಬಂತೆ ಪ್ರಚಾರ ಪಡಿಸಲಾಗಿದೆ. 

Power Within: The Leadership Legacy of Narendra Modi Hardcover – 30 June 2024

“ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ. ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂಥಹ ಪ್ರಕರಣ ಮರುಕಳಿಸಲ್ಲ” ಎಂಬ ದಾರಿತಪ್ಪಿಸುವ, ಕೋಮುಜ್ವಾಲೆ ಹೊತ್ತಿಸುವಂಥ ಹೇಳಿಕೆಯ ಪರಿಣಾಮ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಹಾಸನದಲ್ಲಿ ಗಣೇಶ ವಿಸರ್ಜನೆ ದುರಂತ: ಬೇಜವಾಬ್ದಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ - ಸಚಿವ ಎಚ್.ಕೆ. ಪಾಟೀಲ್