Skip to main content
ವಿಡಿಯೋ
general

ವಿವಾದದ ನಡುವೆ ವೆನಿಸ್‌ ಚಲನಚಿತ್ರ ಪ್ರಶಸ್ತಿ ವಿಜೇತೆ ಅನುಪರ್ಣ ರಾಯ್‌ - ಟೀಕಾಕಾರರಿಗೆ ಕೊಟ್ಟ ದಿಟ್ಟ ಉತ್ತರವೇನು ಗೊತ್ತಾ?

By Shravanthi R
ವಿವಾದದ ನಡುವೆ ವೆನಿಸ್‌ ಚಲನಚಿತ್ರ ಪ್ರಶಸ್ತಿ ವಿಜೇತೆ ಅನುಪರ್ಣ ರಾಯ್‌ - ಟೀಕಾಕಾರರಿಗೆ ಕೊಟ್ಟ ದಿಟ್ಟ ಉತ್ತರವೇನು ಗೊತ್ತಾ?

ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಲ್ಲಾ ಮಹಿಳೆಯರಿಗೂ ಅರ್ಪಿಸಿ, ಇತಿಹಾಸ ನಿರ್ಮಿಸಿರುವ ಈ ಪ್ರತಿಭೆ ತಮ್ಮ ಹೃದಯ ಸ್ಪರ್ಶಿ ಭಾಷಣದಿಂದ ಎಲ್ಲರ ಗಮನಸೆಳೆದರಾದರೂ, ಪ್ಯಾಲೆಸ್ಟೀನ್‌ ಬಗ್ಗೆ ಅವರು ನೀಡಿದ ಹೇಳಿಕೆಯು ವಿವಾದವನ್ನು ಹುಟ್ಟು ಹಾಕಿದ್ದು ಇದಕ್ಕೆ ಬಲವಾದ ಪ್ರತಿಕ್ರಿಯೆಗಳು ಹುಟ್ಟಿಕೊಂಡಿದೆ

ವೆನಿಸ್ ಚಲನಚಿತ್ರೋತ್ಸವದಿಂದ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ನಿರ್ದೇಶಕಿ ಹಾಗೂ ಐದನೇ ನಿರ್ದೇಶಕರು ಎಂಬ ಖ್ಯಾತಿಗೆ ಒಳಪಟ್ಟಿರುವ ನಿರ್ದೇಶಕಿ ಅನುಪರ್ಣ ರಾಯ್ ವಿವಾದದಲ್ಲಿ ಸಿಲುಕಿದ್ದಾರೆ. ಅವರ ನಿರ್ದೇಶನದ “ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್” ಎನ್ನುವ ಚಿತ್ರದ ನಿರ್ದೇಶನಕ್ಕೆ ಉತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದುಕೊಂಡ ಗರಿಮೆ ಇವರಿಗಿದೆ. ಈ ಮೂಲಕ ಮಹಿಳಾ ನಿರ್ದೇಶಕಿ ಎಂಬ ಛಾಪು ಮೂಡಿಸಿರುವ ನಡುವೆ ಪ್ಯಾಲೆಸ್ಟೀನ್‌ ವಿಚಾರವಾಗಿ ಅವರ ಹೇಳಿಕೆಯೊಂದು ವಾಗ್ವಾದಗಳಿಗೆ ಎಡೆಮಾಡಿದೆ.

Why Bharat Matters Hardcover – 10 January 2024

82 ನೇ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಬಳಿಕ ಅವರು ಮಾಡಿದ ಭಾಷಣವು ಎಲ್ಲರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಅವರು, ಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವುದು ಅಪರಾಧ, ಅನ್ಯಾಯ. ಪ್ರತಿಯೊಂದು ಮಗುವಿಗೂ ಶಾಂತಿ ಮತ್ತು ಸ್ವತಂತ್ರದಿಂದ ಬದುಕುವ ಹಕ್ಕಿದೆ. ಇದಕ್ಕೆ ಪ್ಯಾಲೆಸ್ಟೀನ್‌ ಹೊರತಾಗಿಲ್ಲ, ಹೀಗಾಗಿ ಇದು ನಮ್ಮ ನೈತಿಕ ಜವಾಬ್ದಾರಿ ಹಾಗೂ ನಾನು ಅನ್ಯಾಯದ ವಿರುದ್ಧ ನಿಲ್ಲುತ್ತೇನೆ ಹೀಗೆ ಬೆಂಬಲಿಸಿದರೆ ನಾನು ಭಾರತೀಯ ಎಂಬುದನ್ನು ಕಡಿಮೆ ಮಾಡುವುದಿಲ್ಲ ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದವರಿಗೆ ಪ್ರತ್ಯುತ್ತರ ನೀಡಿದ್ದಾರೆ. 

ಅನುರಾಗ್‌ ಕಶ್ಯಪ್‌ ಹೇಳಿದ್ದರೇ? -

ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಲ್ಲಾ ಮಹಿಳೆಯರಿಗೂ ಅರ್ಪಿಸಿ, ಇತಿಹಾಸ ನಿರ್ಮಿಸಿರುವ ಈ ಪ್ರತಿಭೆ ತಮ್ಮ ಹೃದಯ ಸ್ಪರ್ಶಿ ಭಾಷಣದಿಂದ ಎಲ್ಲರ ಗಮನಸೆಳೆದರಾದರೂ, ಪ್ಯಾಲೆಸ್ಟೀನ್‌ ಬಗ್ಗೆ ಅವರು ನೀಡಿದ ಹೇಳಿಕೆಯು ವಿವಾದವನ್ನು ಹುಟ್ಟು ಹಾಕಿದ್ದು ಇದಕ್ಕೆ ಬಲವಾದ ಪ್ರತಿಕ್ರಿಯೆಗಳು ಹುಟ್ಟಿಕೊಂಡಿದೆ ಎನ್ನಲಾಗಿದೆ. ಈ ವಿವಾದದಲ್ಲಿ ಚಿತ್ರ ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರ ಪ್ರಭಾವದಿಂದ ಹೇಳಿಕೆ ಬಂದಿದೆ ಎನ್ನುವ ಸಂಶಯ ಮೂಡಿತ್ತು. 

ಈ ಬಗ್ಗೆ ಊಹೆಗೂ ಅವರು ತೆರೆ ಹಾಡಿದ್ದು ಬದಲಾಗಿ ಅವರೇ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲವೆಂದು ಸಲಹೆ ನೀಡಿದ್ದರು ಎಂದು ರಾಯ್‌ ಹೇಳಿದ್ದಾರೆ. ಈ ಬಗ್ಗೆ ಅವರ ಪೋಷಕರು ಕಳವಳದ ಜೊತೆಗೆ ಬೆಂಬಲವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: 'ಕೆಡಿ' ಚಿತ್ರದಲ್ಲಿ ಸುದೀಪ್? ಧ್ರುವಾ ಸರ್ಜಾ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಂದ್ರಾ ಕಿಚ್ಚ?