ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೇನ್ ಅವರ AI ವಿಡಿಯೋ ಪೋಸ್ಟ್ ಮಾಡಿದ, ಬಿಹಾರ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ಮನೋಜ್ ತಿವಾರಿ ಕಿಡಿ ಕಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ತನ್ನೆಲ್ಲಾ ಅನೈತಿಕತೆಯ ಮಾಪಕವನ್ನು ಮುರಿದಿದೆ. ಹಾಗೆಯೇ ಪಕ್ಷವು ನೈತಿಕ ಗಡಿಗಳನ್ನು ಪದೇ ಪದೇ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದೆ.
ಅಷ್ಟೇ ಅಲ್ಲ ನೈತಿಕತೆಯ ಮಾನದಂಡಗಳು ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ. ಅವರ ಅನೈತಿಕತೆಯ ಮಾಪಕಗಳು ಮುರಿದಿದ್ದು, ಕಾನೂನುಬದ್ಧ ಚಟುವಟಿಕೆಗಳು ಏನೇ ನಡೆದರೂ ನಡೆಯಲಿ. ಅದಕ್ಕೆ ನ್ಯಾಯಾಧೀಶರು, ಸಾರ್ವಜನಿಕರು ಪಾಠ ಕಲಿಸುತ್ತಾರೆ ಎಂದಿದ್ದಾರೆ.Also read: ತಮಿಳು ಬಿಗ್ ಬಾಸ್ ಸೀಸನ್ 9: ಹೋಸ್ಟ್ ಆಗಿ ಮತ್ತೆ ವಿಜಯ್ ಸೇತುಪತಿ: ಎಂದಿನಿಂದ? ಇಲ್ಲಿದೆ ಮಾಹಿತಿ
ಕಳೆದ ಸೆಪ್ಟೆಂಬರ್ 10ರಂದು ಬಿಹಾರ ಕಾಂಗ್ರೆಸ್‌ನ ಅಧಿಕೃತ X ಖಾತೆಯಲ್ಲಿ, ಒಂದು ವಿವಾದಾತ್ಮಕ ವಿಡಿಯೋ ಕ್ಲಿಪ್‌ವೊಂದನ್ನು ಹಂಚಿಕೊಂಡಿತ್ತು. ಹೀಗಾಗಿ ದೆಹಲಿ ಪೊಲೀಸರು ಕೆಲ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲಿಸಿದ್ದು, ಈ ನಂತರ ಮನೋಜ್ ತಿವಾರಿ ಕಾಂಗ್ರೆಸ್ ನಡೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದಿವಂಗತ ತಾಯಿಯ ಕನಸು ಕಾಣುತ್ತಿರಬಹುದು. ಹಾಗೆಯೇ ಅವರು ತಮ್ಮ ರಾಜಕೀಯದ ಬಗ್ಗೆ ತಮ್ಮನ್ನು ಖಂಡಿಸುತ್ತಿರುವಂತೆ ಚಿತ್ರೀಕರಿಸಿದ್ಧಾರೆ ಎಂದು ಕಿಡಿ ಕಾರಿದ್ದಾರೆBULLMER Trendy Clothing Set with Shirt & Pants Co-ords for Men
ಈ AI ವಿಡಿಯೋ ಪ್ರಧಾನಿ ಮೋದಿ ಅವರ ಪ್ರತಿಷ್ಠೆಗೆ ಧಕ್ಕೆ ತರುವಂತದ್ದಾಗಿದೆ. ಅಲ್ಲದೇ ಇದು ಮಹಿಳೆಯರ ಘನತೆಗೆ ಅವಮಾನಿಸಿದ್ದಾಗಿದೆ ಎಂದು ಆರೋಪಿಸಿ ಬಿಜೆಪಿ ದೆಹಲಿ ಚುನಾವಣಾ ಕೋಶದ ಸಂಚಾಲಕ ಸಂಕೇತ್ ಗುಪ್ತಾ ಅವರು ದೂರು ದಾಖಲಿಸಿದ್ದಾರೆ.