ಕ್ರಿಕೆಟ್ ಆಟ ಮತ್ತು ದೇಶಾಭಿಮಾನ: ಭಾರತ vs ಪಾಕಿಸ್ತಾನ ಪಂದ್ಯ ನಡೆಯಬೇಕೆ, ಬೇಡವೇ?
ದುಬೈ: 2025 ರ ಏಷ್ಯಾ ಕಪ್ ಅಂಗವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣೆಸಾಡಲು ತಯಾರಾಗಿದೆ. ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಹಲವಾರು ರಾಜಕೀಯ ಮುಖಂಡರಿಂದ ಮತ್ತು ಮಾಜಿ ಕ್ರಿಕೆಟ್ ಆಟಗಾರರಿಂದ ಹಾಗೂ ಮುಖ್ಯವಾಗಿ ಪಹಾಲ್ಗಾಂ ದಾಳಿಯಲ್ಲಿ ಬಲಿಯಾದ ಪ್ರವಾಸಿಗರೊಬ್ಬರ ಪತ್ನಿಯಿಂದ ಭಾರತ-ಪಾಕ್ ಪಂದ್ಯ ನಡೆಯುವುದು ಬೇಡ ಎಂಬ ಹೇಳಿಕೆಗಳು ಬಂದಿವೆ ಮತ್ತು ಈ ಪಂದ್ಯವನ್ನ ರದ್ದುಗೊಳಿಸಿ ಹಾಗೂ ಪಂದ್ಯ ನಡೆಯುವ ಸಮಯದಲ್ಲಿ ನಿಮ್ಮ ಟಿವಿಯನ್ನು ಆನ್ ಮಾಡಬೇಡಿ ಎಂಬ ಕೂಗು ಸಹ ಕೇಳಿ ಬಂದಿದೆ.
ಆದರೆ ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬರೂ ಸಹ ನಮ್ಮ ದೇಶಕ್ಕೆ ಅಥವಾ ನಮ್ಮ ದೇಶದ ಯಾರ ಮೇಲಾದರೂ ಬೇರೆ ದೇಶದವರು ಆಕ್ರಮಣ ಮಾಡಿ ಅಥವಾ ದಾಳಿ ಮಾಡಿದರೆ ಅವರು ನಮ್ಮ ವಿರೋಧಿಗಳಾಗುತ್ತಾರೆ ಎಂದು ತಿಳಿದುಕೊಳ್ಳುವುದು ಸಹಜ, ಹಾಗೂ ತಿಳಿದುಕೊಳ್ಳಲೇಬೇಕು. ಹೀಗಾಗಿ ಭಾರತೀಯರು ಈ ಪಂದ್ಯವನ್ನು ಬ್ಯಾನ್ ಮಾಡುವುದಕ್ಕೆ ಹೇಳಿಕೆ ನೀಡುತ್ತಿದ್ದಾರೆ.
ಆದರೆ ಮತ್ತೊಂದೆಡೆ ಕ್ರಿಡಾ ಅಭಿಮಾನಿಗಳು ಭಾರತ, ಪಾಕಿಸ್ತಾನ ಪಂದ್ಯವಿರುವ ಕಾರಣ ಪಾಕಿಸ್ತಾನವನ್ನು ಸದೆ ಬಡಿದು ಈ ರೀತಿಯಲ್ಲಿ ಸಿಕ್ಕ ಸನ್ನಿವೇಶದಲ್ಲಿ ಸೇಡನ್ನು ತೀರಿಸಿಕೊಳ್ಳಬೇಕು ಎಂಬುದು ಹಲವರ ವಾದವಾಗಿದೆ. Also Read: ಏಷ್ಯಾ ಕಪ್ 2025: ಭಾರತ vs ಪಾಕಿಸ್ತಾನ ರೋಚಕ ಕಾದಾಟ: ಪಹಾಲ್ಗಾಮ್ ದಾಳಿ ಹಿನ್ನೆಲೆ: ಗೆಲ್ಲಲೆ ಬೇಕಾದ ಸ್ಥಿತಿಯಲ್ಲಿ ಭಾರತ!
ಆದರೆ ಇನ್ನೊಂದು ವರ್ಗ ಕ್ರಿಕೆಟ್ ಆಟದಲ್ಲಿ ರಾಜಕೀಯವನ್ನು ಬೆರೆಸಬೇಡಿ ಎಂಬುದು ಕೆಲವರ ವಾದವಾಗಿದೆ, ಹೀಗಾಗಿ ಭಾರತೀಯ ಕ್ರಿಕೆಟ್ ಆಟಗಾರರಿಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿಂದೆಯೂ ಸಹ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿರುವ ಭಾರತೀಯರು ಈ ಪಂದ್ಯವನ್ನು ಸಹ ಗೆಲ್ಲುವ ಉತ್ಸಾಹದಲ್ಲಿದ್ದಾರೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಭಾರತ- ಪಾಕಿಸ್ತಾನ ಪಂದ್ಯವೆಂದರೆ ಐತಿಹಾಸಿಕ ಪಂದ್ಯವೆಂದು ಪ್ರಪಂಚವೇ ಬಣ್ಣಿಸುತ್ತದೆ ಹೀಗಾಗಿ ಇವತ್ತಿನ ಏಷ್ಯಾ ಕಪ್ ನಲ್ಲಿ ನಡೆಯುವ ಭಾರತ-ಪಾಕ್ ಪಂದ್ಯವು ಅತಿ ಪ್ರಮುಖವಾಗಿರಲಿದೆ.