Skip to main content
ವಿಡಿಯೋ
business

ಇಸ್ರೇಲ್‌ ಒಪ್ಪಂದದ ವಿರೋಧ: ಅಮೆಜಾನ್‌ನಿಂದ ಅಮಾನತುಗೊಂಡ ಪ್ಯಾಲೆಸ್ತೀನಿಯನ್‌ ಎಂಜಿನಿಯರ್‌

By Shravanthi R
ಇಸ್ರೇಲ್‌ ಒಪ್ಪಂದದ ವಿರೋಧ: ಅಮೆಜಾನ್‌ನಿಂದ ಅಮಾನತುಗೊಂಡ ಪ್ಯಾಲೆಸ್ತೀನಿಯನ್‌ ಎಂಜಿನಿಯರ್‌

2021 ರಲ್ಲಿ ಅಮೆಜಾನ್, ಗೂಗಲ್ ಮತ್ತು ಇಸ್ರೇಲಿ ಸರ್ಕಾರವು ಪ್ರಾರಂಭಿಸಿದ $1.2 ಬಿಲಿಯನ್ ಜಂಟಿ ಕ್ಲೌಡ್ ಕಂಪ್ಯೂಟಿಂಗ್ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ಗೆ ಶಹರೂರ್ ಅವರ ವಿರೋಧದ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.

ಅಮೆಜಾನ್‌ ಕಂಪನಿ ಮತ್ತು ಇಸ್ರೇಲ್‌ ನಡುವಿನ ವ್ಯಾಪಾರ ಸಂಬಂಧಗಳ ಒಡಂಬಡಿಕೆ ವಿರೋಧ ವ್ಯಕ್ತಪಡಿಸಿದ ಕಾರಣ ಪ್ಯಾಲೆಸ್ಷೀನ್‌ ಸಾಫ್ಟ್‌ವೇರ್‌ ಇಂಜಿನಿಯರ್‌ ಅಮಾನತುಗೊಳಿಸಿದೆ. ಕಂಪನಿಯ ಪ್ರತ್ಯೇಕ ಪ್ರಾಜೆಕ್ಟ್‌ ನಿಂಬಸ್‌ ಕ್ಲೌಡ್‌ ಕಂಪ್ಯೂಟಿಂಗ್‌ ಕುರಿತ ಆಂತರಿಕ ಸಂವಹನಕ್ಕೆ ತೋರಿದ ವಿರೋಧಕ್ಕಾಗಿ ಹಾಗೂ ಪ್ಯಾಲೆಸ್ಷೀನ್‌ ಪರ ಧ್ವನಿ ಎತ್ತಿದ್ದಾಕ್ಕಾಗಿ ಅಹ್ಮದ್‌ ಶಹರೂರ್‌ ಎಂಬುವವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಇದಾಗ್ಯೂ ಮೈಕ್ರೋಸಾಫ್ಟ್‌ ಹಾಗೂ ಗೂಗಲ್‌ನಲ್ಲೂ ಇಂತಹ ಪ್ರತಿಭಟನೆಗಳು, ಉದ್ಯೋಗದಿಂದ ವಜಾಗೊಳಿಸಿರುವ ಪ್ರಕರಣಗಳು ಮುಂದುವರೆದಿವೆ ಎನ್ನಲಾಗಿದೆ.

2021 ರಲ್ಲಿ ಅಮೆಜಾನ್, ಗೂಗಲ್ ಮತ್ತು ಇಸ್ರೇಲಿ ಸರ್ಕಾರವು ಪ್ರಾರಂಭಿಸಿದ $1.2 ಬಿಲಿಯನ್ ಜಂಟಿ ಕ್ಲೌಡ್ ಕಂಪ್ಯೂಟಿಂಗ್ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ಗೆ ಶಹರೂರ್ ಅವರ ವಿರೋಧದ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಅವರು ಕಂಪನಿಯ ಸಿಇಓ ಆಂಡಿ ಜಾಸ್ಸಿ ಹಾಗೂ ಕಂಪನಿಯ ಸಂಬಂಧಿತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಮ್ಮ ಮಾತುಗಳನ್ನು ಸ್ಪಷ್ಟಪಡಿಸಿದ್ದಾರೆ. 

ಮೂರು ವರ್ಷಗಳ ಅಮೆಜಾನ್ ಉದ್ಯೋಗಿಯಾಗಿ, ಗಾಜಾದಲ್ಲಿ ಇಸ್ರೇಲಿ ಕ್ರಮಗಳನ್ನು ಬೆಂಬಲಿಸುತ್ತಾ ಬದುಕುವುದನ್ನು ನಾನು ಸಹಿಸಲಾಗುತ್ತಿಲ್ಲ. ಇಂಹತ ಪರಿಸ್ಥಿತಿಯಲ್ಲಿ ಕಂಪನಿಗೆ ಲಾಭದ ಕೋಡ್ ಬರೆಯುವಾಗ ನಿರಂತರ ಅಭಾಸವಾಗುವಂತಿದೆ ಎಂದು ವಿವರಿಸಿದ್ದಾರೆ. ಅಮೆಜಾನ್ ಪ್ಯಾಲೆಸ್ಟೀನಿಯನ್ ಪರ ಉದ್ಯೋಗಿಗಳ ಧ್ವನಿಯನ್ನು ವ್ಯವಸ್ಥಿತವಾಗಿ ನಿಗ್ರಹಿಸುತ್ತಿದೆ ಎಂದು ಆರೋಪಿಸಿರುವ ಅವರು, ಪ್ಯಾಲೇಸ್ಟಿನಿಯನ್ ಪರ ಚರ್ಚೆಗಳನ್ನು ಕಡೆಗಣಿಸಲಾಗಿದೆ; ಕೆಲಸದ ಸ್ಥಳಗಳಲ್ಲಿ ಆಯ್ದ ವಿಷಯಗಳ ಮಿತಗೊಳಿಸುವಿಕೆಯನ್ನು ಒಡ್ಡಿದೆ ಎಂದಿದ್ದಾರೆ.

The Unfinished Quest: India’s Search for Major Power Status from Nehru to Modi Hardcover – 11 November 2024

ಇತರೆ ದೈತ್ಯ ಕಂಪನಿಗಳಲ್ಲೂ ಮುಂದುವರೆದ ಉದ್ಯೋಗ ಕತ್ತರಿ -

ಇತರ ಪ್ರಮುಖ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಆಗಸ್ಟ್ 2025 ರಲ್ಲಿ ಮೈಕ್ರೋಸಾಫ್ಟ್ ನಾಲ್ಕು ಕಾರ್ಮಿಕರನ್ನು ವಜಾಗೊಳಿಸಿತು. ಕಂಪನಿಯ 50 ನೇ ವಾರ್ಷಿಕೋತ್ಸವದ ಆಚರಣೆಯಲ್ಲೂ ಪ್ರತಿಭಟನೆಗಳು ಕಂಡುಬಂದವು. ಇಸ್ರೇಲ್‌ಗೆ ಸಂಬಂಧಿಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಗೂಗಲ್‌ ಸೇರಿದಂತೆ ಇನ್ನಿತರ ಸಂಸ್ಥೆಗಳಿಂದ ಈ ರೀತಿಯ ಉದ್ಯೋಗ ಕಡಿತ ಲೇ ಆಫ್‌ಗಳು ಸುದ್ದಿಯಾಗುತ್ತಿವೆ. 


ಇದನ್ನೂ ಓದಿ: ಒಡಿಶಾದಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಜಾಜಪುರದಲ್ಲಿ ಆರೋಪಿಯ ಬಂಧನ..!