Skip to main content
ವಿಡಿಯೋ
1/2
crime

ಕಾಡುಹಂದಿಗಳಿಂದ ಬೆಳೆ ಹಾಳು: ರೈತ ಪರಿಹಾರಕ್ಕೆ ಒತ್ತಾಯ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ..!

By Vinutha U
ಕಾಡುಹಂದಿಗಳಿಂದ ಬೆಳೆ ಹಾಳು: ರೈತ ಪರಿಹಾರಕ್ಕೆ ಒತ್ತಾಯ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ..!

ಇದರಿಂದಾಗಿ ಹಗಲು-ರಾತ್ರಿ ಎನ್ನದೆ ಕಾಡುಹಂದಿಗಳು ಜಮೀನಿನ ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತ ಪೆರಮಳ್, ಅರಣ್ಯ ಇಲಾಖೆಯಿಂದ ತಕ್ಷಣವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹನೂರು (ಸೆ.14): ತಾಲೂಕಿನ ಮಂಚಾಪುರ ಗ್ರಾಮದ ರೈತನೊಬ್ಬನ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಕಾಡುಹಂದಿಗಳು ನಾಶಪಡಿಸಿದ್ದು, ಸೂಕ್ತ ಪರಿಹಾರ ನೀಡದಿದ್ದರೆ ವಿಷ ಕುಡಿಯುವುದಾಗಿ ರೈತ ಆಕ್ರೋಶದಿಂದ ಹೇಳಿಕೆ ನೀಡಿದ್ದಾನೆ. ಗ್ರಾಮದ ರೈತ ಪೆರಮಳ್ ತಮ್ಮ 4 ಎಕರೆ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ಬೆಳೆ ತೆನೆ ಕಟ್ಟುವ ಹಂತದಲ್ಲಿದ್ದಾಗ ಕಾಡುಹಂದಿಗಳ ಗುಂಪು ಜಮೀನಿಗೆ ನುಗ್ಗಿ, ಬೆಳೆಯನ್ನು ಸಂಪೂರ್ಣವಾಗಿ ತಿಂದು, ತುಳಿದು ನಾಶಪಡಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಅರಣ್ಯಾಧಿಕಾರಿಗಳೇ ಇದಕ್ಕೆ ಕಾರಣವೇ?
ಮಲೆ ಮಹದೇಶ್ವರ ಬೆಟ್ಟದಿಂದ ಕಾಡುಹಂದಿಗಳನ್ನು ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ದಟ್ಟ ಅರಣ್ಯದಲ್ಲಿ ಬಿಡುವ ಬದಲು, ಮಂಚಾಪುರ ಸುತ್ತಮುತ್ತಲಿನ ರೈತರ ಜಮೀನುಗಳ ಬಳಿ ಬಿಟ್ಟಿದ್ದಾರೆ. ಇದರಿಂದಾಗಿ ಹಗಲು-ರಾತ್ರಿ ಎನ್ನದೆ ಕಾಡುಹಂದಿಗಳು ಜಮೀನಿನ ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತ ಪೆರಮಳ್, ಅರಣ್ಯ ಇಲಾಖೆಯಿಂದ ತಕ್ಷಣವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
Arayna Women's Cotton Printed Anarkali Kurti with Palazzo Pants Set, Floral


ಕಾಡುಹಂದಿಗಳಿಂದ ತಮ್ಮ ಮುಸುಕಿನ ಜೋಳದ ಬೆಳೆ ನಾಶವಾದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡದಿದ್ದರೆ ಕಳೆನಾಶಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೆರಮಳ್ ಎಚ್ಚರಿಕೆ ನೀಡಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬೆಳೆ ಹಾಳಾಗುತ್ತಿದ್ದು, ತಕ್ಷಣವೇ ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಪೋಷಕರಿಂದ ಕೊಲೆ ಆರೋಪ, ಗಂಡ ಎಸ್ಕೇಪ್..!


ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆಯ ಕಾರ್ಯವೈಖರಿಯ ವಿರುದ್ಧ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ತಕ್ಷಣವೇ ಬೆಳೆ ನಾಶವಾದ ಜಮೀನಿಗೆ ಭೇಟಿ ನೀಡಿ, ನಷ್ಟದ ಅಂದಾಜು ಪಟ್ಟಿ ತಯಾರಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ, ಅರಣ್ಯ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.