Skip to main content
ವಿಡಿಯೋ
1/2
cinema

ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸ್ತಾರಾ ಡಾಲಿ-ಶಿವಣ್ಣ...'666' ಸಿನಿಮಾದಲ್ಲಿ ಇವರಿಬ್ಬರ ಲುಕ್ ನೋಡಿ ಫ್ಯಾನ್ಸ್ ಫಿದಾ!

By Ram Chethan
ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸ್ತಾರಾ ಡಾಲಿ-ಶಿವಣ್ಣ...'666' ಸಿನಿಮಾದಲ್ಲಿ ಇವರಿಬ್ಬರ ಲುಕ್ ನೋಡಿ ಫ್ಯಾನ್ಸ್ ಫಿದಾ!

ರೆಟ್ರೋ ಕಾಲಘಟ್ಟದ ಕಥೆಯೊಂದಿಗೆ ಶಿವರಾಜ್‌ಕುಮಾರ್ ಮತ್ತು ಧನಂಜಯ್ ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಬೃಹತ್ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್‌ರವರ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುತ್ತಿದೆ. ಈ ಚಿತ್ರಕ್ಕಾಗಿ ಇಬ್ಬರೂ ನಟರು ವಿಶಿಷ್ಟ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕೆಲವು ವಿಶೇಷ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಸುಮಾರು 100 ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದ್ದು, ಚಿತ್ರಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿ ಮಾಡಲಾಗಿದೆ. ನಿರ್ದೇಶಕ ಹೇಮಂತ್ ರಾವ್ ತಮ್ಮ ಕಲ್ಪನೆಯಲ್ಲಿ ರೆಟ್ರೋ ಕಥೆಯೊಂದನ್ನು ತೆರೆಗೆ ತರುತ್ತಿದ್ದಾರೆ.

ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ್ ಇಬ್ಬರೂ ಆ ಕಾಲದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಕಾಲಘಟ್ಟದ ಈ ಕಥೆಯು ಇಂದಿನ ಪೀಳಿಗೆಯ ಮಕ್ಕಳಿಗೆ ಹೊಸ ಮ್ಯಾಜಿಕ್ ತೋರಿಸಲಿದೆ. ಹಿಂದಿನ ದಿನಗಳಲ್ಲಿ ಜೀವನ ಹೇಗಿತ್ತು ಎಂಬುದನ್ನು ಈ ಚಿತ್ರದ ಮೂಲಕ ಪರಿಚಯಿಸಲಿದ್ದಾರೆ.

'666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ವಿಶಿಷ್ಟ ಶೀರ್ಷಿಕೆಯು ಚಿತ್ರದ ಬಗ್ಗೆ ಮತ್ತಷ್ಟು ಆಸಕ್ತಿ ಕೆರಳಿಸಿದೆ. ಈ ಶೀರ್ಷಿಕೆಯ ಮೂಲಕ ನಿರ್ದೇಶಕ ಹೇಮಂತ್ ರಾವ್ ವಿಭಿನ್ನ ಕಥಾ ಹಂದರವನ್ನು ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯ್‌ರವರ ಲುಕ್ ಮತ್ತು ಫೀಲ್ ಸಂಪೂರ್ಣವಾಗಿ ಭಿನ್ನವಾಗಿದೆ.

TURMS Men's Anti Stain Jeans 30 Days No Wash Anti Odor Casual Mid Rise Denim Pants | Traveler Comfort Stretchable Breathable Cotton Rich

ಅದ್ವೈತ ಗುರುಮೂರ್ತಿ ಈ ಚಿತ್ರಕ್ಕೆ ಕ್ಯಾಮೆರಾ ನಿರ್ವಹಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದರೆ, ವೈಶಾಕ್ ಜೆ. ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನದಲ್ಲಿಯೇ ಬೃಹತ್ ಸೆಟ್ ಸಿದ್ಧಗೊಂಡಿದೆ.

'666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಮೇಲಿನ ನಿರೀಕ್ಷೆಗೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು. ಎರಡನೆಯದು, ನಿರ್ದೇಶಕ ಹೇಮಂತ್ ರಾವ್ ಈ ಹಿಂದೆ ನೀಡಿದ ಯಶಸ್ವಿ ಚಿತ್ರಗಳು.ಇದನ್ನು ಓದಿ; ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ...ವೈಲ್ಡ್‌ ಕಾರ್ಡ್ ಎಂಟ್ರಿ‌ ಕೊಟ್ಟ ಸ್ಮೃತಿ ಮಂದಾನಾ..!

ಹೇಮಂತ್ ರಾವ್ ಈ ಹಿಂದೆ 'ಕವಲುದಾರಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', ಮತ್ತು 'ಸಪ್ತಸಾಗರದಾಚೆ ಎಲ್ಲೋ' ನಂತಹ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಈ ಚಿತ್ರಗಳ ಕಂಟೆಂಟ್ ಗುಣಮಟ್ಟದಿಂದಾಗಿ, ಅವರ ಹೊಸ ಚಿತ್ರದ ಬಗ್ಗೆಯೂ ಭಾರಿ ನಿರೀಕ್ಷೆ ಮೂಡಿದೆ.

'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಫೋಟೋ ಶೂಟ್ ಈಗಾಗಲೇ ಗಮನ ಸೆಳೆದಿದೆ. ಚಿತ್ರೀಕರಣಕ್ಕೂ ಮುನ್ನ ನಡೆಸಿದ ಈ ಫೋಟೋ ಶೂಟ್‌ನಲ್ಲಿ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್‌ರವರ ವಿಶೇಷ ಅವತಾರಗಳು ಗಮನ ಸೆಳೆದಿದ್ದು, ಇದೇ ಫೋಟೋಗಳು ಪೋಸ್ಟರ್‌ಗಳಲ್ಲಿಯೂ ಬಳಕೆಯಾಗಿವೆ.

ಚಿತ್ರದ ಪೋಸ್ಟರ್‌ಗಳು ಪಕ್ಕಾ ರೆಟ್ರೋ ಕಾಲದ ಚಿತ್ರಣವನ್ನು ನೀಡುತ್ತಿವೆ. ಇವು ಡಾ. ರಾಜ್‌ಕುಮಾರ್ ಅವರ ಬಾಂಡ್ ಸಿನಿಮಾಗಳ ಪೋಸ್ಟರ್‌ಗಳನ್ನು ನೆನಪಿಸುತ್ತವೆ. ಆ ಕಾಲದ ಪೋಸ್ಟರ್ ವಿನ್ಯಾಸಗಳು ಹೇಗಿದ್ದವು ಎಂಬುದನ್ನು ಇಂದಿನ ಯುವ ಪೀಳಿಗೆಗೆ ಇವು ಪರಿಚಯಿಸುತ್ತಿವೆ. ಒಟ್ಟಾರೆ, '666 ಆಪರೇಷನ್ ಡ್ರೀಮ್ ಥಿಯೇಟರ್' ಹಲವು ವಿಷಯಗಳೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ.