Skip to main content
ವಿಡಿಯೋ
1/3
sports

ಏಷ್ಯಾ ಕಪ್‌ ಭಾರತ vs ಪಾಕ್‌ ಪಂದ್ಯ: ಶೇಕ್‌ಹ್ಯಾಂಡ್‌ ಇಲ್ಲ, ಡೋರ್‌ ಬಂದ್‌ ಮಾಡಿ ಸೋಲಿನ ಜೊತೆ ಮರ್ಯಾದೆಯನ್ನು ಕಳೆದು ಕಳಿಸಿದ ಟೀಮ್‌ ಇಂಡಿಯಾ!

By Gireesh Vasishta
ಏಷ್ಯಾ ಕಪ್‌ ಭಾರತ vs ಪಾಕ್‌ ಪಂದ್ಯ: ಶೇಕ್‌ಹ್ಯಾಂಡ್‌ ಇಲ್ಲ, ಡೋರ್‌ ಬಂದ್‌ ಮಾಡಿ ಸೋಲಿನ ಜೊತೆ ಮರ್ಯಾದೆಯನ್ನು ಕಳೆದು ಕಳಿಸಿದ ಟೀಮ್‌ ಇಂಡಿಯಾ!

ಹೌದು, ಪಹಲ್ಗಾಮ್ ದಾಳಿಯ ವಿರುದ್ಧವಾಗಿ ಭಾರತ ಜಾಗತಿಕ ಮಟ್ಟದಲ್ಲಿ ಮತ್ತು ರಾಜನೀತಿಯ ಮೂಲಕ ಪಾಕಿಸ್ತಾನದ ಕುಕೃತ್ಯವನ್ನು ಇಡೀ ಪ್ರಪಂಚಕ್ಕೆ ಸಾರಿದೆ. ಈ ಹಿನ್ನೆಲೆಯಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವು ಕೂಡ ದೇಶಾಭಿಮಾನವನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದೆ. ಭಾರತೀಯರ ಈ ನಡೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ದುಬೈ: ನೆನ್ನೆ ನಡೆದ ಏಷ್ಯಾ ಕಪ್‌ನ ಪಾಕಿಸ್ತಾನ ಮತ್ತು ಭಾರತ ಪಂದ್ಯದಲ್ಲಿ ಭಾರತೀಯ ತಂಡದ ಆಟಗಾರರು ದೇಶಾಭಿಮಾನ ಮೆರೆದಿದ್ದಾರೆ. ಅದು ಪಂದ್ಯದ ಮುನ್ನ ಹಾಗೂ ಪಂದ್ಯದ ನಂತರ ಸ್ನೇಹಪೂರ್ವಕವಾದ ಶೇಕ್‌ಹ್ಯಾಂಡ್‌ಅನ್ನು ಪಾಕಿಸ್ತಾನದ ಆಟಗಾರರಿಗೆ ನೀಡದೆ.

ಹೌದು, ಪಹಲ್ಗಾಮ್ ದಾಳಿಯ ವಿರುದ್ಧವಾಗಿ ಭಾರತ ಜಾಗತಿಕ ಮಟ್ಟದಲ್ಲಿ ಮತ್ತು ರಾಜನೀತಿಯ ಮೂಲಕ ಪಾಕಿಸ್ತಾನದ ಕುಕೃತ್ಯವನ್ನು ಇಡೀ ಪ್ರಪಂಚಕ್ಕೆ ಸಾರಿದೆ. ಹಿನ್ನೆಲೆಯಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವು ಕೂಡ ದೇಶಾಭಿಮಾನವನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದೆ. ಭಾರತೀಯರ ನಡೆಗೆ  ಶ್ಲಾಘನೆ ವ್ಯಕ್ತವಾಗುತ್ತಿದೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

 ಭಾರತದ ಬೌಲಿಂಗ್‌ ಮುಂದೆ ತತ್ತರಿಸಿದ ಪಾಕ್‌ನ ಆಟಗಾರರು 20 ಓವರ್‌ನಲ್ಲಿ 127 ರನ್ನುಗಳಿಗೆ ಒಂಬತ್ತು ವಿಕೆಟ್ ಗಳಿಸಲಷ್ಟೇ ಶಕ್ತವಾಯಿತು ಹೀಗಾಗಿ ಅದಾಗಲೇ 50% ಸೋಲನ್ನು ಒಪ್ಪಿಕೊಂಡಿತ್ತು ಪಾಕ್‌. ಎಷ್ಟೇ ಆದರೂ ಚೇಸಿಂಗ್ ತಂಡ ಚೇಸ್ ಮಾಡಲೇಬೇಕಲ್ಲವೇ, ಹೀಗಾಗಿ ಚೇಸಿಂಗ್‌ಗೆ ಇಳಿದ ಭಾರತ ತಂಡದ ಅಭಿಷೇಕ್ ಶರ್ಮಾ ಮತ್ತು ಗಿಲ್‌ ಉತ್ತಮ ಆರಂಭ ನೀಡಿದರು. ಅಭಿಷೇಕ್ ಶರ್ಮ 31 ರನ್‌ಗಳಿಸಿ ಔಟ್‌ಆದರೆ ಗಿಲ್ ಎರಡು ಫೋರ್ ಸಹಿತ 10 ರನ್ ಗಳಿಸಿ ಔಟ್‌ಆದರು. ನಂತರ ಬ್ಯಾಟಿಂಗ್‌ಗೆ ಇಳಿದ ಸೂರ್ಯ ಕುಮಾರ್ ಯಾದವ್  ಔಟ್ ಆಗದೆ ಅಜೇಯ 47 ರನ್ ಗಳಿಸಿದರು ಅವರ ಜೊತೆ ಬಿರುಸಿನ ಆಟವಾಡಿದ ತಿಲಕ್ ವರ್ಮ 31 ರನ್ ಗಳಿಸಿದರು. ನಂತರ ಬಂದ ಶಿವಂ ದುಬೆ 10 ರನ್ ಗಳಿಸಿದರು. ಆದರೆ 15.5 ನೇ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಸಿಕ್ಸ್ ಸಿಡಿಸುವುದರ ಮೂಲಕ ತಂಡವನ್ನು ಗೆಲ್ಲಿಸಿದರು. ಇದನ್ನು ಓದಿ: ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟನೆ ಆಹ್ವಾನ‌ ವಿಚಾರ: ಪ್ರತಾಪ್‌ ಸಿಂಹ ಸೇರಿ ಮೂವರ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್


ನಂತರ ಯಾವುದೇ ಸ್ನೇಹ ಹಸ್ತವನ್ನು ಪಾಕ್‌ನ ಆಟಗಾರರಿಗೆ ನೀಡದೆ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪೆವಿಲಿಯನ್ ಕಡೆ ಹೊರಟರು. ಅದು ಸಾಲದೆಂಬಂತೆ ಪೆವಿಲಿಯನ್‌ಗೆ ಹೋಗಿ ಬಾಗಿಲನ್ನು ಬಂದ್ ಮಾಡಿದರು. ಹೀಗಾಗಿ ಭಯೋತ್ಪಾದಕರಿಗೆ ನೇರವಾಗಿ ಬೆಂಬಲ ನೀಡುವ ಪಾಕಿಸ್ತಾನಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡ ಸರಿಯಾಗಿಯೇ ರಾಷ್ಟ್ರಮಟ್ಟದಲ್ಲಿ ಮರ್ಯಾದೆಯನ್ನು ಕಳೆದಿರುವುದು ಭಾರತೀಯರಿಗೆ ಹರ್ಷವನ್ನು ಉಂಟು ಮಾಡಿದೆ.

ಹೀಗಾಗಿ ಭಾರತೀಯ ಆಟಗಾರರ ವರ್ತನೆಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದು, ನೀವು ಪಂದ್ಯವನ್ನ ಗೆದ್ದಿರಿ ಆದರೆ ಮಾನವೀಯತೆಯನ್ನು ಮರೆತಿರಿ, ಎಂದು ಹೇಳಿಕೆ ನೀಡಿದ್ದಾರೆ. ಅದೇನೆ ಆದರೂ ಪಾಕಿಸ್ತಾನದ ವಿರುದ್ಧ ಯಾವುದೇ ಅವಕಾಶ ಸಿಕ್ಕರು ಭಾರತೀಯರು ಅದನ್ನು ಬಿಡುವ ಮಾತೇ ಇಲ್ಲ. ಎಲ್ಲಿಯೇ ಆದರೂ ಅವರಿಗೆ ತಕ್ಕ ಶಾಸ್ತಿಯನ್ನು ಮಾಡುವುದಾಗಿ ಭಾರತೀಯ ತಂಡ ನೇರವಾಗಿ ಹೇಳಿಕೆಯನ್ನು ನೀಡಿದಂತಿತ್ತು ಆಟಗಾರರ ಈ ನಡೆ.

ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ನೀವು ನೋಡಿಲ್ಲವೆಂದರೆ ಈಗಲೇ ಹೋಗಿ ನೋಡಿ.