Skip to main content
ವಿಡಿಯೋ
1/2
crime

ಧರ್ಮಸ್ಥಳ ಪ್ರಕರಣ: ಮತ್ತೊಂದು ಹಂತದ ತನಿಖೆಗೆ SIT ಸಜ್ಜು...ನೇತ್ರಾವತಿ ಸ್ನಾನಘಟ್ಟದ ಬಳಿ ಮತ್ತೆ ಶೋಧ!

By Pavitra Ganapathi Baradavalli
ಧರ್ಮಸ್ಥಳ ಪ್ರಕರಣ: ಮತ್ತೊಂದು ಹಂತದ ತನಿಖೆಗೆ SIT ಸಜ್ಜು...ನೇತ್ರಾವತಿ ಸ್ನಾನಘಟ್ಟದ ಬಳಿ ಮತ್ತೆ ಶೋಧ!

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆ ಕಾಡಿನಲ್ಲಿ ತಲೆಬುರುಡೆ ಮತ್ತು ಮೂವರು–ಎಂಟು ಮೃತದೇಹಗಳ ಅವಶೇಷಗಳು ಪತ್ತೆಯಾಗಿದ್ದು, ಎಸ್‌ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಸಹಕಾರದೊಂದಿಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಇದೀಗ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. 'ನೆಲದ ಮೇಲೆ ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ' ಎಂದು ಹೇಳಲಾದ ಜಾಗದಲ್ಲಿ ಈ ಶೋಧ ನಡೆಸಲಾಗುವುದು.ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ 2025: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು… ಪ್ರಮುಖ ಸೆಕ್ಷನ್‌ಗಳಿಗೆ ತಾತ್ಕಾಲಿಕ ತಡೆ!


ಪೊಲೀಸರಿಗೆ ಸಾಕ್ಷಿದಾರರು ಹಸ್ತಾಂತರಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಿಂದ ಹೊರತೆಗೆಯಲಾಗಿತ್ತು. ಈ ತಲೆಬುರುಡೆ ಪತ್ತೆಯಾದ ಸ್ಥಳವನ್ನು ತೋರಿಸಿದ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದರು.

ಆ ಜಾಗವು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಗೆ ಸೇರಿದೆ. ಮಹಜರು ಪ್ರಕ್ರಿಯೆ ಮುಗಿದ ನಂತರ, ವಿಠಲ ಗೌಡ ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.ಇದನ್ನೂ ಓದಿ: ಭಾರತ-ರಷ್ಯಾ ಸಂಬಂಧ ಬಲಶಾಲಿ, ಅಮೆರಿಕ ಸುಂಕ ಒತ್ತಡ ವಿಫಲ...ರಷ್ಯಾದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ!

ಈ ವಿಡಿಯೋದಲ್ಲಿ, "ತಲೆಬುರುಡೆ ಸಿಕ್ಕ ಸ್ಥಳದ ಮಹಜರಿಗೆ ತೆರಳಿದಾಗ, ಕಾಡಿನ ಒಂದು ಭಾಗದಲ್ಲಿ ಮೂರು ಮೃತದೇಹಗಳ ಅವಶೇಷಗಳು ಮತ್ತು ಇನ್ನೊಂದು ಕಡೆ ಎಂಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಂಡುಬಂದವು. ಮಹಜರು ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳು ಕೂಡ ಇವುಗಳನ್ನು ಗಮನಿಸಿದ್ದಾರೆ" ಎಂದು ವಿಠಲ ಗೌಡ ತಿಳಿಸಿದ್ದರು.

ಈ ಕುರಿತು ಎಸ್‌ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಕೆಲ ಅಧಿಕಾರಿಗಳನ್ನು ಸೋಮವಾರ ತಮ್ಮ ಕಚೇರಿಗೆ ಕರೆಸಿ ಸಮಾಲೋಚನೆ ನಡೆಸಿದ್ದಾರೆ.ಇದನ್ನೂ ಓದಿ: ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟನೆ ಆಹ್ವಾನ‌ ವಿಚಾರ: ಪ್ರತಾಪ್‌ ಸಿಂಹ ಸೇರಿ ಮೂವರ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್


ಎಸ್‌ಐಟಿ ಮೂಲಗಳು 'ಪ್ರಜಾವಾಣಿ'ಗೆ ನೀಡಿದ ಮಾಹಿತಿ ಪ್ರಕಾರ, ಸಾಕ್ಷಿದಾರರು ಒಪ್ಪಿಸಿರುವ ತಲೆಬುರುಡೆಯನ್ನು ಹೊರತೆಗೆದ ಕಾಡಿನ ಪ್ರದೇಶದಲ್ಲಿ ಮತ್ತಷ್ಟು ತೀವ್ರವಾದ ಶೋಧ ನಡೆಸಬೇಕಾಗಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿವೆ.SHRIMATI JI Orange Cotton Silk Saree with Bold Black Woven Zari Border –Traditional Saree with Blouse for Festive, Office & Everyday Wear