Skip to main content
ವಿಡಿಯೋ
politics

ಕೃಷ್ಣಾ ಮೇಲ್ದಂಡೆ ಯೋಜನೆ - ರೈತರ ಭೂಮಿ ಪರಿಹಾರ & ಕುರುಬ ಸಮುದಾಯ ಮೀಸಲು ಚರ್ಚೆ – ಇಂದು ಸರ್ಕಾರದಿಂದ ಎರಡು ಮಹತ್ವದ ಸಭೆಗಳು

By Shravanthi R
ಕೃಷ್ಣಾ ಮೇಲ್ದಂಡೆ ಯೋಜನೆ - ರೈತರ ಭೂಮಿ ಪರಿಹಾರ & ಕುರುಬ ಸಮುದಾಯ ಮೀಸಲು ಚರ್ಚೆ –  ಇಂದು ಸರ್ಕಾರದಿಂದ ಎರಡು ಮಹತ್ವದ ಸಭೆಗಳು

ಇಂದು ರಾಜ್ಯ ಸರ್ಕಾರ ಎರಡು ಮಹತ್ವದ ಸಭೆಗಳನ್ನು ನಡೆಸಲಿದೆ. ಮಧ್ಯಾಹ್ನ 12ಕ್ಕೆ ಕೃಷ್ಣಾ ನದಿ ಹಿನ್ನೀರಿನಿಂದ ಸಂತ್ರಸ್ತರಾದ ರೈತರ ಭೂಮಿ ಪರಿಹಾರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಂತರ ಮಧ್ಯಾಹ್ನ 3ಕ್ಕೆ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಕುರುಬ ಸಮುದಾಯವನ್ನು ಪರಿಷಿಷ್ಟ ಪಂಗಡಗಳ (ST) ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಇಂದು ರಾಜ್ಯ ಸರ್ಕಾರದಿಂದ ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆಯಾಗಿರುವ ರೈತರ ಜಮೀನು ಪರಿಹಾರದ ಬಗ್ಗೆ ತೀಮಾರ್ನ ಕೈಗೊಳ್ಳಲಿದೆ. ಇಂದು ಮಧ್ಯಾಹ್ನ 12 ಕ್ಕೆ ಈ ಸಭೆ ನಡೆಯಲಿದ್ದು, ಕೃಷ್ಣ ಮೇಲ್ದಂಡೆ ಸಂತ್ರಸ್ತರ ಪರಿಹಾರಕ್ಕೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧಾರ ತಿಳಿಸಲಿದೆ ಎನ್ನಲಾಗಿದೆ. 

ಇದೇ ದಿನದಂದು, ಮಧ್ಯಾಹ್ನ 3 ಕ್ಕೆ ವಿಶೇಷ ಸಂಪುಟ ಸಭೆಯಲ್ಲಿ ಕುರುಬ ಸಮುದಾಯವನ್ನು ಪರಿಷಿಷ್ಟ ಪಂಗಡಗಳ (ST) ಪಟ್ಟಿಗೆ ಸೇರಿಸುವ ವಿಚಾರವಾಗಿ ಸಭೆ ನಡೆಸಲಿದೆ. The Housemaid Is Watching: An Absolutely Addictive Psychological Thriller with a Jaw-Dropping Twist (The Housemaid series, Book 3) | TikTok Viral & Bestseller Pick Paperback – 11 June 2024

ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ ಪರಿಣಾಮ, ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್‌ಗಳಿಂದ 524 ಮೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ, ರಾಜ್ಯ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ. ಯೋಜನೆಗಾಗಿ ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲಿರುವ ಭೂಮಿಗೆ ಸರ್ಕಾರದ ದರ ನಿಗದಿ ಆಗ್ರಹಿಸಿ ರೈತರು ಪ್ರತಿಭಟನೆ ಕೈಗೊಂಡಿದ್ದರು. ಈ ಮಧ್ಯೆ ಇಂದು ನಿರ್ಣಾಯಕ ಚರ್ಚೆ ಎದುರಾಗಲಿದ್ದು, ಕೃಷ್ಣೆ ಮಡಿಲ ಮಕ್ಕಳಿಗೆ ದೊರಕಿತೇ ನ್ಯಾಯ ಕಾದು ನೋಡಬೇಕಿದೆ. ಇದನ್ನೂ ಓದಿ: ಕರ್ನಾಟಕದ 19 ಜಿಲ್ಲೆಗಳಲ್ಲಿ ದಾಖಲೆಯ ಮಳೆ ಮುನ್ಸೂಚನೆ - ಯೆಲ್ಲೋ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

ಕುರುಬ ಸಮುದಾಯ - ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆ -

ನಗರದ ಎಂ. ಎಸ್‌ ಬಿಲ್ಡಿಂಗ್‌ ಎಸ್‌ಟಿ ಕಚೇರಿಯಲ್ಲಿ ಪರಿಷಿಷ್ಟ ಪಂಗಡಗಳ ಇಲಾಖೆಯಿಂದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಮಹತ್ವಪೂರ್ಣ ವಿಚಾರಗಳ ವಿನಿಮಯವಾಗಲಿದೆ. ಈ ನಡುವೆ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಸೇರಿದಂತೆ ಪ್ರಮುಖರು ಅಗತ್ಯ ದಾಖಲೆ ಹಾಗೂ ಮಾಹಿತಿಗಳನ್ನು ಒದಗಿಸಲಿದ್ದಾರೆ. ರಾಜ್ಯದಲ್ಲಿರುವ ಜಾತಿ ಅಂಕಿ ಅಂಶಗಳ ಪ್ರಕಾರ, ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಕುರಿತು ಮಹತ್ವ ಚರ್ಚೆ ನಡೆಸಲಿದೆ. 

ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯಗಳು ಪರಿಷಿಷ್ಟ ಪಂಗಡದ ಗೊಂಡ ಸಮುದಾಯದ ಸಾಮತ್ಯೆಯನ್ನು ಹೊಂದಿರುವ ಬಗ್ಗೆಯೂ ಸಹ ಚರ್ಚೆ ಒಳಗೊಳ್ಳಲಿದೆ. ಈ ಕಾರಣ ಕುರುಬ ಸಮುದಾಯವನ್ನು ಎಸ್‌ಟಿ ಸಾಲಿಗೆ ಸೇರಿಸುವ ಕುರಿತು ಚರ್ಚೆಯಾಗಲಿದೆ. ಇದನ್ನೂ ಓದಿ: ಲುಟ್ನಿಕ್‌ರಿಂದ ಭಾರತಕ್ಕೆ ಎಚ್ಚರಿಕೆ: ಸುಂಕ ಕಡಿಮೆಗೊಳಿಸದಿದ್ದರೆ ಟ್ಯಾರಿಫ್‌ ಮುಂದುವರಿಕೆ...

ಸದ್ಯ ಕುರುವ ಸಮುದಾಯವು ಹಿಂದುಳಿದ ವರ್ಗಗಳ ಪ್ರವರ್ಗ 2 ಎ ಯ ಶೇ. 15 ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದೆ. ಈ ಹಿಂದೆ 2023 ರಲ್ಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಶಿಫಾರಸ್ಸು ಮಾಡಲಾಗಿದ್ದು, ಇದೀಗ ಈ ವಿಷಯವಾಗಿ ಇಂದು ಸಭೆ ಬಳಿಕ ಕೇಂದ್ರಕ್ಕೆ ಮಾಹಿತಿ ರವಾನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಾಚರಣೆ: ಐಷಾರಾಮಿ ವಾಚ್ ಕಳ್ಳತನದ ಆರೋಪಿ ಬಂಧನ..!