Skip to main content
ವಿಡಿಯೋ
1/2
general

ರಾಯಚೂರು ಗಣೇಶ ಮೆರವಣಿಗೆ ವೇಳೆ ಭಾರೀ ಪೊಲೀಸ್‌ ಬಂದೋಬಸ್ತ್‌, ಜಾಥಾ ವೀಕ್ಷಣೆಗೆ ಒಂದು ಸಾವಿರ ಪೊಲೀಸ್‌ ನಿಯೋಜನೆ..!!

By Pavitra Ganapathi Baradavalli
ರಾಯಚೂರು ಗಣೇಶ ಮೆರವಣಿಗೆ ವೇಳೆ ಭಾರೀ ಪೊಲೀಸ್‌ ಬಂದೋಬಸ್ತ್‌, ಜಾಥಾ ವೀಕ್ಷಣೆಗೆ ಒಂದು ಸಾವಿರ ಪೊಲೀಸ್‌ ನಿಯೋಜನೆ..!!

ಈಗಿನ ಸಮಯದಲ್ಲಿ ಎಲ್ಲಿ ನೋಡಿದರೂ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಲೇ ಇರುತ್ತವೆ. ಅದಕ್ಕೆ ಪೊಲೀಸ್‌ ಬಂದೋಬಸ್ತ್‌ ಎಷ್ಟು ಮುಖ್ಯವಾಗಿರುತ್ತದೆ ಎಂದರೆ ಹೇಳಲು ಸಾಧ್ಯವಿಲ್ಲ ಹಾಗಾಗಿ ಇಂದು ಒಂದು ಬೃಹತ್‌ ಗಣೇಶ ಮೆರವಣಿಗೆ ರಾಯಚೂರಿನಲ್ಲಿ ನಡೆಯಲಿದೆ.

ರಾಯಚೂರು:  ಈಗಿನ ಸಮಯದಲ್ಲಿ ಎಲ್ಲಿ ನೋಡಿದರೂ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಲೇ ಇರುತ್ತವೆ. ಅದಕ್ಕೆ ಪೊಲೀಸ್‌ ಬಂದೋಬಸ್ತ್‌ ಎಷ್ಟು ಮುಖ್ಯವಾಗಿರುತ್ತದೆ ಎಂದರೆ ಹೇಳಲು ಸಾಧ್ಯವಿಲ್ಲ ಹಾಗಾಗಿ ಇಂದು ಒಂದು ಬೃಹತ್‌ ಗಣೇಶ ಮೆರವಣಿಗೆ ರಾಯಚೂರಿನಲ್ಲಿ ನಡೆಯಲಿದೆ. ರಾಯಚೂರಿನ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ಸಾಗಲಿದೆ ಅದಕ್ಕಾಗಿ ಪೊಲೀಸ್‌ ವತಿಯಿಂದ ಸಂಪೂರ್ಣ ಬಂದೋಬಸ್ತ್‌ ಏರ್ಪಡಿಸಲಾಗಿದೆ.ಇದನ್ನೂ ಓದಿ: ಶ್ರೀಲಂಕಾ ಬಂಧನದಿಂದ ಬಿಡುಗಡೆಯಾಗಿ ಚೆನ್ನೈಗೆ ಮರಳಿದ ತಮಿಳುನಾಡು ಮೀನುಗಾರರು: ತಲಾ 5 ಲಕ್ಷ ರೂ. ದಂಡ ಪಾವತಿಸಿದ ಬಳಿಕ: ಕಾರಣ ಹೀಗಿದೆ


ಮಂಗಳವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ನೇತೃತ್ವದಲ್ಲಿ ಎಲ್ಲಾ ಪೊಲೀಸರು ರೂಟ್‌ ಮಾರ್ಚ್‌ ನಡೆಸಿದರು. ಮೆರವಣಿಗೆ ಮಾರ್ಗದಲ್ಲಿ ಪೊಲೀಸರು ಮುನ್ನಚ್ಚರಿಕೆ ದೃಷ್ಟಿಯಿಂದ ಕಾಲ್ನಡಿಗೆ ಜಾಥಾ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಜಾಗೃತಿ ಜಾಥಾ ನಡೆಸಿದರು.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?


ಹಾಸನದಲ್ಲಿ ನಡೆದ ಭಯಾನಕ ಘಟನೆಯಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಆ ಪ್ರಕಾರವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

ಸಂಜೆ ಗಣೇಶ ಮೆರವಣಿಗೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (Basanagouda Patil Yatnal) ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ. ಇದೇ ವೇಳೆ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಯತ್ನಾಳ್ ಭಾಷಣ ಮಾಡಲಿದ್ದಾರೆ ಎಂಬ ಮುಂಚಿನ ಕಾರ್ಯಕ್ರಮ ಮುಂಚಿತವಾಗಿಯೇ ತಯಾರಿ ನಡೆಸಲಾಗಿದೆ.Akaabo Women's Kanjivaram Art Silk Saree Soft Banarasi Style Sari with Blouse Piece | Elegant Ethnic Wear Saree for Festivals and Special Occasions