ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ಹಗರಣ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅಕ್ರಮ ನಿವೇಶನ ಹಂಚಿಕೆ ಆರೋಪವಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ದ ತನಿಖೆಗೆ ಇಂದು ಸಮ್ಮತಿ ಸೂಚಿಸಿದೆ. ಇದನ್ನೂ ಓದಿ: ಇಸ್ರೇಲ್‌ನ ಗಾಜಾ ದಾಳಿ ತೀವ್ರ: ಅಮೆರಿಕಾದಿಂದ ಸಂಪೂರ್ಣ ಬೆಂಬಲ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಕೋರಿ ಮುಡಾದ ಮಾಜಿ ಅಧ್ಯಕ್ಷ ಹೆಚ್. ವಿ ರಾಜೇಶ್ ಕುಮಾರ್ ಮತ್ತು ದಿನೇಶ್ ಕುಮಾರ್ ವಿರುದ್ದ ಲೋಕಾಯುಕ್ತ ಪೋಲಿಸರು ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿದ್ದು, ಈ ಬಗ್ಗೆ ದಿನೇಶ್ ಕುಮಾರ್ ಅವರ ವಿರುದ್ದ ಮಾತ್ರ ತನಿಖೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಈಗಾಗಲೇ ಜಾರಿ ನಿರ್ದೇಶನಾಲಯವು, ದಿನೇಶ್ ಅವರ ಆಸ್ತಿ ಜಪ್ತಿ ಮಾಡಿದೆ ಎನ್ನಲಾಗಿದೆ. The Monk Who Sold His Ferrari Paperback – 25 September 2003
ಈ ಪ್ರಕರಣ ತನಿಖೆ ತಡವಾಗಿದ್ದಕ್ಕೆ ಅಸಮಧಾನ ತೋರಿದ ಕೋರ್ಟ್, ಕಳೆದ ಆರು ತಿಂಗಳಿನಲ್ಲಿ ಏನೂ ಪ್ರಗತಿ ಕಂಡಿಲ್ಲ, ಇದೀಗ ಪ್ರಾಸಿಕ್ಯೂಷನ್ ಅನುಮತಿ ತಡವಾಗುತ್ತಿದೆ ಎಂದು ಚಾಟಿ ಬೀಸಿತು. ಈ ಮದ್ಯೆ ಸ್ನೇಹಮಯಿ ಕೃಷ್ಣ ಅವರು ತಾವು ಮಾನಸಿಕವಾಗಿ ಕುಗ್ಗಿದ್ದು, ಪೋಲಿಸರ ನಡೆಯಿಂದ ಸಮಾಜದಲ್ಲಿ ಅವಮಾನಕ್ಕೊಳಗಾಗಿದ್ದೇನೆ ಎಂದು ತಿಳಿಸಿ, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ವಾದ ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಸೆ. 29 ಕ್ಕೆ ಮುಂದೂಡಿದೆ. ಇದನ್ನೂ ಓದಿ: ಶ್ರೀಲಂಕಾ vs ಹಾಂಗ್ ಕಾಂಗ್, ಏಷ್ಯಾ ಕಪ್ 2025: ಪಂದ್ಯದ ಸಾರಾಂಶ ಹೀಗಿದೆ: ಹಾಂಗ್ ಕಾಂಗ್ ಹೊರಕ್ಕೆ?