ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯೋ ಮುನ್ನ ಎಚ್ಚರ, ಎಚ್ಚರ, ಲಕ್ಷ ಲಕ್ಷ ಹಣ ನಿಮ್ಮಿಂದ ಪಡೆದು ಮಕ್ಮಲ್ ಟೋಪಿ ಹಾಕ್ತಾರೆ ಹುಷಾರ್. ಖಾಸಗಿ ಕಂಪನಿಯಿಂದ ನೂರಾರು ಜನರಿಗೆ ದೋಖಾ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಪೋಟೋ ತೆಗೆಸಿಕೊಂಡಿರುವ ವಂಚಕ, ಮನೆ ಲೀಸ್‌ಗೆ ಕೊಡಿಸುವುದಾಗಿ ವಂಚಿಸಿದ್ದಾನೆ. ಸುಮಾರು ಆರವತ್ತು ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.ಇದನ್ನು ಓದಿ: ಆನ್‌ಲೈನ್-ಆಫ್‌ಲೈನ್ ಅಕ್ರಮ ಬೆಟ್ಟಿಂಗ್: ವಕೀಲ ಅನಿಲ್ ಗೌಡ ವಿರುದ್ಧದ ಇ ಡಿ ಸಮನ್ಸ್‌ಗೆ ಹೈಕೋರ್ಟ್ ತಡೆ: ಕಾರಣ ಹೀಗಿದೆ
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಷ್ಟ ಪಟ್ಟು ಮನೆಗೆ ಹಣ ಕೊಟ್ಟವರು ಈಗ ಬೀದಿಪಾಲು, ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಿಂದ ವಂಚನೆ. ವಿವೇಕ್ ಕೇಶವನ್ ಎಂಬಾತನಿಗೆ ಸೇರಿದ ಕಂಪನಿ ಎಂದು ತಿಳಿದುಬಂದಿದ್ದು. ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ಕೆಟಿನಾ ಹೋಮ್ಸ್ ಕಂಪನಿ.
ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ವಂಚನೆ. ವೆಬ್ ಸೈಟ್ ಮುಖಾಂತರ ಕೆಟಿನಾ ಎಂಬ ಬ್ರೋಕರ್ ಕಂಪನಿ ಮಾಡಿಕೊಂಡಿದ್ದ.TIMEX Classics Analog Watch for Men with Round Dial & Water Resistant Man's Wrist Watches
- ಮಾಲೀಕರಿಂದ ಮನೆ ಬಾಡಿಗೆ ಪಡೆಯುತ್ತಿದ್ದ ವಿವೇಕ್ ಕೇಶವನ್ ಅಂಡ್ ಗ್ಯಾಂಗ್.
- ಬಳಿಕ ವೆಬ್ ಸೈಟ್ ಮೂಲಕ ಲೀಸ್ಗೆ ಮನೆ ಹುಡುಕುತ್ತಿರುವವರಿಗೆ ಗಾಳ.
- ಮನೆ ಲೀಸ್ಗೆ ಕೊಟ್ಟು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ ವಿವೇಕ್ ಅಂಡ್ ಗ್ಯಾಂಗ್.
- ಮನೆ ಮಾಲೀಕನಿಗೆ ಒಂದೆರಡು ತಿಂಗಳು ಮನೆ ಬಾಡಿಗೆ ಕಟ್ಟಿದ್ದ.
- ಕಳೆದ ಆರು ತಿಂಗಳಿಂದ ಮನೆ ಬಾಡಿಗೆ ಹಣ ಕಟ್ಟದೆ ವಿವೇಕ್ ಕೇಶವನ್ ಎಸ್ಕೇಪ್.
- ರಾತ್ರೋರಾತ್ರಿ ಕಂಪನಿಯನ್ನು ಖಾಲಿ ಮಾಡಿ ಹೋದ ವಂಚಕ ವಿವೇಕ್.
- ಮನೆ ಖಾಲಿ ಮಾಡಿ ಎಂದು ಲೀಸ್ಗೆ ಹೋಗಿದ್ದ ಜನರಿಗೆ ಮಾಲೀಕರಿಂದ ಒತ್ತಡ.
ಅತ್ತ ಲೀಸ್ಗೆ ಕೊಟ್ಟ ಲಕ್ಷಾಂತರ ರೂಪಾಯಿ ಹಣವು ಇಲ್ಲ, ಇತ್ತ ಮನೆಯೂ ಮಿಲ್ಲ ಎಂಬಂತಾಗಿದೆ. ಈಗ ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆ ಲೀಸ್ ಗೆ ಕೊಡಿಸಿ ನೂರಾರು ಕುಟುಂಬಗಳಿಗೆ ವಂಚನೆ. ಮನೆ ಚೆನ್ನಾಗಿದೆ ಅಂತ ಲಕ್ಷ ಲಕ್ಷ ಹಣ ಕೊಟ್ಟವರಿಗೆ ಪಂಗನಾಮ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ವಿವೇಕ್ ಕೇಶವನ್ ಮೇಲೆ fir ದಾಖಲು. ಪರಾರಿಯಾಗಿರುವ ವಂಚಕ ವಿವೇಕ್ ಕೇಶವನ್ ವಿರುದ್ದ ಹಣ ನೀಡಿದವರು ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.