ಸಾವಿನಲ್ಲೂ ಮಾನವೀಯತೆ ಮೆರೆದ KSRTC ಚಾಲಕ: ಹೃದಯಾಘಾತವಾದಾಗ ಬಸ್ ಅನ್ನು ಸೈಡ್‌ನಲ್ಲಿ ನಿಲ್ಲಿಸಿದ ಪುಣ್ಯಾತ್ಮ: ಮಾಹಿತಿ ಹೀಗಿದೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಘಾತದ ಪ್ರಕರಣಗಳು ಸಾಕಷ್ಟು ಕೇಳ ಸಿಗುತ್ತಿವೆ. ಕೆಲಸ ಮಾಡುತ್ತಿದ್ದಾಗ, ಕೆಲವೊಮ್ಮೆ ವ್ಯಾಯಾಮ ಮಾಡುತ್ತಿದ್ದಾಗ, ಇನ್ನೂ ಕೆಲವೊಮ್ಮೆ ಮಾತನಾಡುತ್ತಿದ್ದಾಗ ಹೀಗೆ ಹೃದಯಘಾತ ಯಾವಾಗ ಸಂಭವಿಸುತ್ತದೆ ಎಂಬುದು ಅರಿವೆ ಇಲ್ಲದಂತಾಗಿದೆ. ಇದೇ ರೀತಿಯ ಘಟನೆ ಕೆಎಸ್ಆರ್ಟಿಸಿ ಬಸ್ ನಲ್ಲಿ ನಡೆದಿದೆ.Also Read: ಶ್ರೀಲಂಕಾ vs ಹಾಂಗ್ ಕಾಂಗ್, ಏಷ್ಯಾ ಕಪ್ 2025: ಪಂದ್ಯದ ಸಾರಾಂಶ ಹೀಗಿದೆ: ಹಾಂಗ್ ಕಾಂಗ್ ಹೊರಕ್ಕೆ?
ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದರ್ (50 ವರ್ಷ) ಇವರು ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಹರಿಹರಕ್ಕೆ ಬಸ್ ಚಾಲನೆ ಮಾಡುತ್ತಿದ್ದಾಗ ನೆಲಮಂಗಲದ ಜಾಸ್ ಟೋಲ್ ಬಳಿ ಹೃದಯಾಘಾತವಾಗಿದೆ.
ಬಸ್ ಚಾಲನೆ ಮಾಡುತ್ತಿದ್ದಾಗ ಹೃದಯಘಾತ ಸಂಭವಿಸಿದ ಕಾರಣ ಬಸ್ಸನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿ ಹಲವಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾರೆ. ಹೀಗಾಗಿ ಇವರು ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಹೃದಯಘಾತವಾದ ನಂತರ 108(ನಂಬರ್) ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ ಅಲ್ಲಿದ್ದ ಪ್ರಯಾಣಿಕರು. ಆದರೆ ಆಂಬುಲೆನ್ಸ್ ಬರುವ ಹೊತ್ತಿಗಾಗಲೇ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.