ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡದಲ್ಲಿ ಹಲವು ಮೃತದೇಹಗಳ ಅವಶೇಷಗಳು ದೊರೆತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) 12 ಎಕರೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.
ಈ ಹಿಂದೆ, ದೂರುದಾರ ಚಿನ್ನಯ್ಯ ಅವರು ಸಲ್ಲಿಸಿದ್ದ ತಲೆಬುರುಡೆಯು ಇದೇ ಬಂಗ್ಲೆಗುಡ್ಡದಿಂದ ಬಂದಿದ್ದು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಲು ತೆರಳಿದಾಗ, ಸೌಜನ್ಯ ಅವರ ಮಾವ ವಿಠಲ ಗೌಡ, ಹಲವು ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಹೊಸ ಜಾತಿಗಳ ಸೃಷ್ಟಿ ರಾಜಕೀಯ ತಂತ್ರ: ಯದುವೀರ್ ಆರೋಪ..!
ಈ ಹೇಳಿಕೆಗಳ ಆಧಾರದ ಮೇಲೆ, ಎಸ್‌ಐಟಿ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಬಂಗ್ಲೆಗುಡ್ಡದ 12 ಎಕರೆ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದರು. ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಶೋಧ ನಡೆಸಲು ಅಗತ್ಯ ಅನುಮತಿಗಳನ್ನು ಪಡೆದು, ಎಸ್‌ಐಟಿ ಇಂದು ಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದೆ.Imou 3MP CCTV Camera for Home Outdoor, 360° Security WiFi Camera, Full Color Night Vision 30M, Human Detection, 2-Way Talk, Siren Alarm, Compatible with Alexa, Supports 512GB SD Card, IP66, DK7
ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಸೈಮನ್ ನೇತೃತ್ವದಲ್ಲಿ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ ವಿಭಾಗದ ಸೋಕೊ ತಂಡ ಈ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಟಿಕ್‌ಟಾಕ್ ಅಮೆರಿಕನ್ ಸ್ವಾಮ್ಯಕ್ಕೆ: ಟ್ರಂಪ್ ಘೋಷಣೆ, ಮಾರಾಟದ ರಣಭೂಮಿ ಸಜ್ಜು!