Skip to main content
ವಿಡಿಯೋ
1/3
cinema

ಜೈಲಲ್ಲಿರೋ ದರ್ಶನ್‌ಗೆ ಇಂದಾದ್ರೂ ಸಿಗುತ್ತಾ ಹಾಸಿಗೆ-ದಿಂಬು? ಇಂದು ಮಹತ್ವದ ವಿಚಾರಣೆ!

By Gireesh Vasishta
ಜೈಲಲ್ಲಿರೋ ದರ್ಶನ್‌ಗೆ ಇಂದಾದ್ರೂ ಸಿಗುತ್ತಾ ಹಾಸಿಗೆ-ದಿಂಬು? ಇಂದು ಮಹತ್ವದ ವಿಚಾರಣೆ!

ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್, ಜೈಲು ಮೂಲಸೌಕರ್ಯಗಳ ಕೊರತೆಗೆ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದಾರೆ, ಹಾಸಿಗೆ, ದಿಂಬು ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ ಇಂದು ವಿಚಾರಣೆ ನಡೆಯಲಿದೆ.

 

ನಟ ದರ್ಶನ್ ಅವರು ಜೈಲಿನಲ್ಲಿ ಹಾಸಿಗೆ ಮತ್ತು ದಿಂಬಿನ ಸೌಲಭ್ಯಕ್ಕಾಗಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.

 

ಕಳೆದ ವಾರ, ಮೂಲಸೌಕರ್ಯಗಳನ್ನು ಜೈಲಿನ ನಿಯಮಾವಳಿಗಳ ಪ್ರಕಾರ ಒದಗಿಸಲು ನ್ಯಾಯಾಲಯ ಆದೇಶಿಸಿತ್ತು. ಅದರಂತೆ, ಜೈಲು ಅಧಿಕಾರಿಗಳು ಜಮಖಾನ ಮತ್ತು ದಿಂಬು ಒದಗಿಸಿ, ವಾಕಿಂಗ್ ಮಾಡಲು ಅವಕಾಶ ನೀಡಿದ್ದಾರೆ. ಆದರೆ, ಈ ವ್ಯವಸ್ಥೆಯಿಂದ ಅತೃಪ್ತರಾದ ದರ್ಶನ್, ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.ಇದನ್ನು ಓದಿ: ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಏಷ್ಯಾ ಕಪ್ 2025, ಪಂದ್ಯ 9 – ಸಾರಾಂಶ ಹೀಗಿದೆ

 

ನ್ಯಾಯಾಲಯದ ಆದೇಶದ ಹೊರತಾಗಿಯೂ ಹಾಸಿಗೆ ನೀಡಿಲ್ಲ ಎಂದು ದರ್ಶನ್ ದೂರಿದ್ದಾರೆ. ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಆರೋಪಿಸಿರುವ ಅವರು, ಜೈಲು ಸೇರಿ ತಿಂಗಳಾದರೂ ತಮ್ಮನ್ನು ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ ಎಂದು ಹೇಳಿದ್ದಾರೆ.

 

ಅರ್ಜಿ ಸಲ್ಲಿಸಿದ ನಂತರ, ದರ್ಶನ್ ಪರ ವಕೀಲ ಸುನೀಲ್ ಅವರು ವಾದ ಮಂಡಿಸಿ, "ದರ್ಶನ್ ಜೈಲು ಸೇರಿ ಒಂದು ತಿಂಗಳಾಗಿದ್ದರೂ ಅವರನ್ನು ಇನ್ನೂ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿ ಇಡಬೇಕು. ಸೂರ್ಯನ ಬೆಳಕಿನ ವಿಚಾರಕ್ಕೆ, ಜೈಲು ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ," ಎಂದಿದ್ದಾರೆ.

 

ಹಾಸಿಗೆ, ದಿಂಬು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ಅವರನ್ನು ತುಂಬಾ ಕನಿಷ್ಠವಾಗಿ ನಡೆಸಿಕೊಳ್ಳಲಾಗುತ್ತಿದೆ, ಎಂದು ಸುನೀಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸಿದ್ದು, ಇಂದು ವಿಚಾರಣೆ ನಡೆಸಲಿದೆ.

 

ಸೌಲಭ್ಯಗಳ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ದರ್ಶನ್, ಜೈಲಿನಲ್ಲಿ ಸರಿಯಾಗಿ ಸೌಲಭ್ಯ ಕೊಡುತ್ತಿಲ್ಲ. ನಾನು ಸಾಯುತ್ತೇನೆ, ವಿಷ ಕೊಟ್ಟುಬಿಡಿ, ಎಂದು ಹೇಳಿದ್ದರು. ನ್ಯಾಯಾಲಯವು ಈ ಹಿಂದೆಯೇ, ಅನುಚಿತ ವರ್ತನೆ ಮುಂದುವರಿದರೆ ದರ್ಶನ್‌ರನ್ನು ಬಳ್ಳಾರಿಗೆ ವರ್ಗಾಯಿಸಲು ಐಜಿಪಿಗೆ ಅಧಿಕಾರ ನೀಡಿತ್ತು.WEET Cotton T-Shirt and Pyjama Set for Men,Night Wear for Men,Men's Pyjama Set 122