ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ ಅವರ ಜೀವನ ಆಧಾರಿತ "ಮಾ ವಂದೇ" ಎಂಬ ಚಿತ್ರ ಘೋಷಣೆಯಾಗಿದೆ. ಈ ಬಯೋಪಿಕ್‌ನಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ಪ್ರಧಾನಿ ಮೋದಿ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಚಿತ್ರದ ಘೋಷಣೆಯೊಂದಿಗೆ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಸದ್ಯಕ್ಕೆ, ಶೂಟಿಂಗ್ ಆರಂಭ ಅಥವಾ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಿನಿತಂಡವು ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡುವ ನಿರೀಕ್ಷೆಯಿದೆ.Titan Edge Quartz Analog White Dial Black Leather Strap Watch For Men - NT1595WL01
"ಮಾ ವಂದೇ" ಚಿತ್ರಕ್ಕೆ ಕ್ರಾಂತಿ ಕುಮಾರ್ ಸಿ.ಎಚ್ ನಿರ್ದೇಶನ ಮಾಡುತ್ತಿದ್ದು, ವೀರ್ ರೆಡ್ಡಿ ಎಂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಪ್ಯಾನ್-ಇಂಡಿಯಾ ಚಿತ್ರವು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ತೆರೆಕಾಣಲಿದೆ.ಇದನ್ನು ಓದಿ:ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಜನ್ಮ ದಿನಾಚರಣೆಗೆ ಮನವಿ ವಿಚಾರ: ಜಿಲ್ಲಾಧಿಕಾರಿಗೆ ನಿರ್ದೇಶಿಸಲು ಹೈಕೋರ್ಟ್ ನಕಾರ: ಕಾರಣ ಹೀಗಿದೆ
ಈ ಚಿತ್ರದಲ್ಲಿ ಪ್ರಧಾನಿ ಮೋದಿ ಅವರ ಬಾಲ್ಯ, ವೈಯಕ್ತಿಕ ಜೀವನ, ರಾಜಕೀಯ ಪಯಣ ಹಾಗೂ ಅವರು ಪ್ರಧಾನ ಮಂತ್ರಿಯಾಗುವವರೆಗಿನ ಸಾಧನೆಗಳನ್ನು ಕಟ್ಟಿಕೊಡಲಿದೆ. ವಿಶೇಷವಾಗಿ, ಅವರ ತಾಯಿ ಹೀರಾಬೆನ್ ಅವರೊಂದಿಗಿನ ಆಳವಾದ ಬಾಂಧವ್ಯವನ್ನು ಸಹ ಚಿತ್ರದಲ್ಲಿ ಪರಿಚಯಿಸಲಾಗುವುದು.
ಸಿನಿಮಾ ತಂಡದ ಪ್ರಕಾರ, ಮೋದಿ ಅವರ ರಾಷ್ಟ್ರಸೇವೆ ಮತ್ತು ತ್ಯಾಗವನ್ನು ಸತ್ಯಾಂಶಗಳ ಆಧಾರದ ಮೇಲೆ ಪ್ರಸ್ತುತಪಡಿಸಲಾಗುವುದು. ಎಲ್ಲ ವರ್ಗದ ಪ್ರೇಕ್ಷಕರಿಗೂ ತಲುಪುವಂತಹ ಕಥಾಹಂದರವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.