Skip to main content
ವಿಡಿಯೋ
1/3
cinema

ದರ್ಶನ್‌ಗೆ ತಪ್ಪದ ಜೈಲು ಸಂಕಷ್ಟ...ಮೂಲ ಸೌಲಭ್ಯ ಕೊರತೆ ಕುರಿತು ಸೆಪ್ಟೆಂಬರ್ 19ಕ್ಕೆ ತೀರ್ಪು!

By Ram Chethan
ದರ್ಶನ್‌ಗೆ ತಪ್ಪದ ಜೈಲು ಸಂಕಷ್ಟ...ಮೂಲ ಸೌಲಭ್ಯ ಕೊರತೆ ಕುರಿತು ಸೆಪ್ಟೆಂಬರ್ 19ಕ್ಕೆ ತೀರ್ಪು!

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ವಾಸಿಸುತ್ತಿರುವ ನಟ ದರ್ಶನ್ ಅಗತ್ಯ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಆರೋಪದ ಬಗ್ಗೆ ವಾದ-ಪ್ರತಿವಾದಗಳು ತೀವ್ರಗೊಂಡಿವೆ. ಸೆಪ್ಟೆಂಬರ್ 19ರಂದು ನ್ಯಾಯಾಲಯ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ನಟ ದರ್ಶನ್, ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದು, ಜೈಲಿನಲ್ಲಿ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಈ ಸಂಬಂಧ ದರ್ಶನ್ ಪರ ವಕೀಲರು ಮತ್ತು ಸರ್ಕಾರಿ ಪರ ವಾದಗಳ ಮಧ್ಯೆ ಸೆಪ್ಟೆಂಬರ್ 19ರಂದು ನ್ಯಾಯಾಲಯ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ದರ್ಶನ್, ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದಾಗಿನಿಂದಲೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಜನಪ್ರಿಯ ನಟನಾಗಿರುವ ಕಾರಣ, ಸೆಲೆಬ್ರಿಟಿ ವ್ಯಕ್ತಿಯಾಗಿ ಹೆಚ್ಚಿನ ಗಮನ ಸೆಳೆದಿದ್ದರೂ, ಜೈಲಿನಲ್ಲಿ ಅಗತ್ಯ ಮೂಲಸೌಲಭ್ಯಗಳಿಗಾಗಿಯೂ ಪರದಾಡುತ್ತಿದ್ದಾರೆ. ಈ ಹಿಂದೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿ ನ್ಯಾಯಾಲಯದಿಂದ ಮೂಲ ಸೌಕರ್ಯಗಳ ಒದಗಣೆಗೆ ಅನುಮತಿ ಪಡೆದಿದ್ದರೂ, ಸಮಸ್ಯೆಗಳು ಬಗೆಹರಿದಿಲ್ಲ.

ನ್ಯಾಯಾಲಯದ ಆದೇಶದ ನಂತರವೂ ನಟನಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ದರ್ಶನ್ ಅವರ ವಕೀಲರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ವಾದ-ಪ್ರತಿವಾದಗಳು ನಡೆದಿದ್ದು, ದರ್ಶನ್ ಪರ ವಾದಿಸಿದ ವಕೀಲ ಸುನೀಲ್, ಜೈಲು ಅಧಿಕಾರಿಗಳು ಬೇಕೆಂದೇ ನಟನಿಗೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.EDGE Titan Quartz Analog White Dial Brown Leather Strap Watch for Men - NT1843WL01

ವಕೀಲ ಸುನೀಲ್, "ಮೊದಲು ಸೌಲಭ್ಯ ಕೇಳಿದಾಗ, ನ್ಯಾಯಾಲಯದ ಆದೇಶ ತನ್ನಿ ಎಂದಿದ್ದರು. ಅರ್ಜಿ ಹಾಕಿ ವಿಚಾರಣೆ ನಡೆದು ಆದೇಶ ಬಂದ ನಂತರ ಈಗ ಪರಿಸ್ಥಿತಿ ಬೇರೆಯಾಗಿದೆ. ಪಾಕಿಸ್ತಾನದ ಆರೋಪಿಗಳು ಪಕ್ಕದ ಸೆಲ್‌ನಲ್ಲಿ ಇದ್ದಾರೆ. ಅವರಿಗೆ ಚೆಸ್, ಕ್ಯಾರಂ ಎಲ್ಲವನ್ನೂ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಸುತ್ತಲೂ ಇವೆ. ಆದರೆ ನಮ್ಮ ಆರೋಪಿಗೆ ಏನನ್ನೂ ಕೊಡದೆ ಹಿಂಸೆ ನೀಡುತ್ತಿದ್ದಾರೆ," ಎಂದು ವಾದಿಸಿದ್ದಾರೆ.ಸಿಡ್ನಿ ಸ್ವೀನಿ ನಟನೆಯ ‘ದಿ ಹೌಸ್‌ಮೇಡ್’ ಟ್ರೈಲರ್ ಬಿಡುಗಡೆ...ಬಹು ನಿರೀಕ್ಷಿತ ಸಿನಿಮಾ ಟ್ರೈಲರ್ ನಲ್ಲಿ ಏನಿದೆ?

ಜೈಲಿನಲ್ಲಿ ದರ್ಶನ್ ಸವಾಲುಗಳನ್ನು ಎದುರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ನಟನ ವಕೀಲರು ಒತ್ತಾಯಿಸಿದ್ದಾರೆ.

ಸರ್ಕಾರದ ಪರ ವಕೀಲ ಸಚಿನ್ ವಾದ ಮಂಡಿಸಿ, "ಜೈಲಿನ ಕೈಪಿಡಿ ಪ್ರಕಾರ ದರ್ಶನ್‌ಗೆ ಸೌಲಭ್ಯಗಳನ್ನು ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ಕಂಬಳಿ, ಲೋಟ ಒದಗಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ವಾಕಿಂಗ್ ಮಾಡಲು ಅನುಮತಿ ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನವನ್ನು ಹೊರತುಪಡಿಸಿ ಹೆಚ್ಚುವರಿ ಸೌಲಭ್ಯಗಳನ್ನು ನೀಡಿಲ್ಲ. ಈಗ ಕ್ವಾರಂಟೈನ್ ನಿಯಮ ಅನ್ವಯಿಸುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲರು, "ಕ್ವಾರಂಟೈನ್ ಅವಧಿ ಆಗ ಇತ್ತು, ಈಗೇಕೆ ಬೇಕು? ಎಷ್ಟು ದಿನ ಕ್ವಾರಂಟೈನ್‌ನಲ್ಲಿ ಇಟ್ಟಿದ್ದಾರೆ? ದಾಖಲೆ ನೀಡಲಿ? ನಾವು ಸಂಪರ್ಕಿಸಿದರೆ, ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ," ಎಂದಿದ್ದಾರೆ. ಕುಟುಂಬ ಮತ್ತು ವಕೀಲರ ಭೇಟಿಗೆ ಅವಕಾಶ ನೀಡಬೇಕು, ಅದು ನಿಯಮ. ಆದೇಶದಲ್ಲಿ ಏನಿದೆ, ಇವರು ಕೊಟ್ಟಿದ್ದು ಏನು? ಯಾವ ರೀತಿ ಬೇಕೋ ಹಾಗೆ ಬರೆದುಕೊಂಡು ಬಂದಿದ್ದಾರೆ ಎಂದು ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದಿಸಿದ್ದಾರೆ.