ಕೆ.ಆರ್. ಪೇಟೆ ಮೂಲದ ಯುವತಿ ನಿತ್ಯಶ್ರೀ, 'ಬಿರುಗಾಳಿ' ಚಿತ್ರದ 'ಹೂವಿನ ಬಾಣದಂತೆ' ಹಾಡನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧಿ ಗಳಿಸಿದ್ದರು. ಇದೀಗ ಅವರಿಗೆ ಸಿನಿಮಾ ಆಫರ್‌ಗಳು ಬರಲಾರಂಭಿಸಿವೆ ಎಂದು ವರದಿಯಾಗಿದೆ. ಈಗಾಗಲೇ ಒಂದಿಬ್ಬರು ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ನಿತ್ಯಶ್ರೀ ಅವರನ್ನು ಸಂಪರ್ಕಿಸಿದ್ದಾರೆ.
ಆದರೆ, ಈ ಹಠಾತ್ ಜನಪ್ರಿಯತೆಯ ನಡುವೆಯೇ ನಿತ್ಯಶ್ರೀ ಅವರಿಗೆ ಒಂದು ರೀತಿಯ ಗ್ಲಿಟ್ ಕಾಡುತ್ತಿದೆ. "ಒಳ್ಳೆಯ ಹಾಡನ್ನು ಅಪಸ್ವರದಲ್ಲಿ ಹಾಡಿ ತಪ್ಪು ಮಾಡಿಬಿಟ್ಟೆ" ಎಂದು ಕಣ್ಣೀರಿಟ್ಟಿದ್ದಾರೆ. ಈ ಮಾತುಗಳು ಅವರ ಮನಸ್ಸಿನಲ್ಲಿ ಮೂಡಿದ ಪಶ್ಚಾತ್ತಾಪವನ್ನು ಸೂಚಿಸುತ್ತವೆ.Puma Unisex Adult Clyde OG 75Y PRM Sneaker
ಕಳೆದ ಕೆಲವು ದಿನಗಳಿಂದ 'ಹೂವಿನ ಬಾಣದಂತೆ' ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 'ಬಿರುಗಾಳಿ' ಚಿತ್ರದ ಈ ಗೀತೆ ಯುವಕ-ಯುವತಿಯರನ್ನು ಆಕರ್ಷಿಸಿದ್ದು, ಅನೇಕರು ಇದಕ್ಕೆ ರೀಲ್ಸ್ ಮಾಡಿ ತಮ್ಮದೇ ಆದ ಸ್ಟೆಪ್‌ಗಳನ್ನು ಹಾಕುತ್ತಿದ್ದಾರೆ. ಈ ಹಾಡು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಲು ನಿತ್ಯಶ್ರೀ ಅವರೇ ಕಾರಣ.
ಸ್ನೇಹಿತರ ಗುಂಪಿನಲ್ಲಿ ತಮಾಷೆಗಾಗಿ ಹಾಡಿದ ಈ ಹಾಡು ನಿರೀಕ್ಷೆಗೂ ಮೀರಿ ಎಲ್ಲೆಡೆ ಹರಡಿದೆ. ಈ ಹಾಡು ವೈರಲ್ ಆಗುವ ಮೊದಲು ನಿತ್ಯಶ್ರೀ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ 150 ಫಾಲೋವರ್‌ಗಳಿದ್ದರು. ಆದರೆ ಈಗ ಅವರ ಫಾಲೋವರ್‌ಗಳ ಸಂಖ್ಯೆ 40,000 ದಾಟಿದೆ, ಇದು ರಾತ್ರೋರಾತ್ರಿ ಬಂದ ಜನಪ್ರಿಯತೆಗೆ ಸಾಕ್ಷಿಯಾಗಿದೆ.ಇದನ್ನು ಓದಿ:ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆ ವಿಶೇಷ...ಕಿಚ್ಚನ ಶುಭಾಶಯದಲ್ಲೇನಿದೆ ಗೊತ್ತಾ?
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಶ್ರೀ, ಪ್ರಸ್ತುತ ಮೈಸೂರಿನಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಅವರ ಅನಿರೀಕ್ಷಿತ ಜನಪ್ರಿಯತೆ ಮತ್ತು ನಂತರದ ಸಿನಿಮಾ ಆಫರ್‌ಗಳು ಎಲ್ಲರ ಗಮನ ಸೆಳೆದಿವೆ.