Skip to main content
ವಿಡಿಯೋ
1/2
cinema

"ಜಾಲಿ ಎಲ್ಎಲ್‌ಬಿ-3" ಸಿನಿಮಾ ವಿವಾದ: ವಕೀಲರು, ನ್ಯಾಯಾಂಗದ ಬಗ್ಗೆ ಅವಹೇಳನ, ಆಕ್ಷೇಪಾರ್ಹ ಸಂಭಾಷಣೆ: ಅರ್ಜಿದಾರೆಗೆ 50 ಸಾವಿರ ದಂಡ: ಕಾರಣ ಹೀಗಿದೆ

By Gireesh Vasishta
"ಜಾಲಿ ಎಲ್ಎಲ್‌ಬಿ-3" ಸಿನಿಮಾ ವಿವಾದ: ವಕೀಲರು, ನ್ಯಾಯಾಂಗದ ಬಗ್ಗೆ ಅವಹೇಳನ, ಆಕ್ಷೇಪಾರ್ಹ ಸಂಭಾಷಣೆ: ಅರ್ಜಿದಾರೆಗೆ 50 ಸಾವಿರ ದಂಡ: ಕಾರಣ ಹೀಗಿದೆ

- ಚಿತ್ರದಲ್ಲಿ ನಟಿಸಿರುವ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ನಿರ್ದೇಶಕ ಸುಭಾಷ್ ಕಪೂರ್, ನಿರ್ಮಾಪಕ ಸಂಸ್ಥೆ ಫಾಕ್ಸ್ ಸ್ಟಾರ್ ಸ್ಟುಡಿಯೋ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು.

ವಕೀಲರು ಮತ್ತು ನ್ಯಾಯಾಂಗವನ್ನು ಅವಹೇಳಿಸುವ, ಆಕ್ಷೇಪಾರ್ಹ ಸಂಭಾಷಣೆಗಳು ಇರುವ ಹಿನ್ನೆಲೆಯಲ್ಲಿ "ಜಾಲಿ ಎಲ್ಎಲ್‌ಬಿ-3" ಸಿನಿಮಾದ ಬಿಡುಗಡೆ ಮತ್ತು ಪ್ರದರ್ಶಣಕ್ಕೆ ತಡೆ ನೀಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೇರಿದಂತೆ ಬಾಂಬೆ ಹೈಕೋರ್ಟ್‌ ಸಹ ವಜಾಗೊಳಿಸಿದೆ.

ಅರ್ಜಿದಾರರ ದೂರು ಹೀಗಿದೆ:

-ವಕೀಲರು ಹಾಗೂ ನ್ಯಾಯಾಂಗದ ಬಗ್ಗೆ ಅವಹೇಳನ,

- ಆಕ್ಷೇಪಾರ್ಹ ಸಂಭಾಷಣೆ ಇರುವ ಹಿನ್ನಲೆಯಲ್ಲಿ "ಜಾಲಿ ಎಲ್ಎಲ್ಬಿ-3" ಸಿನಿಮಾ ಬಿಡುಗಡೆ ಹಾಗೂಪ್ರದರ್ಶನಕ್ಕೆ ತಡೆನೀಡಬೇಕು.

- ಚಿತ್ರದಲ್ಲಿ ನಟಿಸಿರುವ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ನಿರ್ದೇಶಕ ಸುಭಾಷ್ ಕಪೂರ್, ನಿರ್ಮಾಪಕ ಸಂಸ್ಥೆ ಫಾಕ್ಸ್ ಸ್ಟಾರ್ ಸ್ಟುಡಿಯೋ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು.Levi's Men's Slim Fit Mid Rise 511 Mid-Rise Jeans

ಹೈಕೋರ್ಟ್‌ನ ಹೇಳಿಕೆ:

- ಸಿನಿಮಾ ಟ್ರೇಲರ್, ಟೀಸರ್ ಮತ್ತು ಹಾಡುಗಳಲ್ಲಿ (ಉದಾ., "ಭೈ ವಕೀಲ್ ಹೈ") ನ್ಯಾಯಾಂಗ ಅಥವಾ ವಕೀಲರ ವೃತ್ತಿಯನ್ನು ಧಿಕ್ಕರಿಸುವ ಯಾವುದೇ ವಿಷಯವಿಲ್ಲ.

- ಇಂತಹ ಸಿನಿಮಾ ನ್ಯಾಯಾಂಗಕ್ಕೆ ಯಾವುದೇ ಹಾನಿ ಮಾಡುವುದಿಲ್ಲ; ಇದು ಕೇವಲ ಮನರಂಜನೆಯ ಭಾಗವಾಗಿದೆ.

- ಅರ್ಜಿಯನ್ನು ಯಾವುದೇ ಖರ್ಚು ರಹಿತವಾಗಿ ವಜಾಗೊಳಿಸಲಾಯಿತು.ಇದನ್ನು ಓದಿ: ಪಾಕಿಸ್ತಾನ vs ಯುಎಇ: ಏಷ್ಯಾ ಕಪ್ 2025 ಪಂದ್ಯದ ಸಾರಾಂಶ ಹೀಗಿದೆ: ಪಾಕ್‌ ಜಸ್ಟ್‌ ಮಿಸ್?

 ಹಿಂದಿನ ಆದೇಶಗಳು: ಅಲಹಬಾದ್ ಹೈಕೋರ್ಟ್ ಸಹ ಇದೇ ರೀತಿಯಲ್ಲಿ ಅರ್ಜಿಯನ್ನು ವಜಾಗೊಳಿಸಿತು, ಟ್ರೇಲರ್‌ನಲ್ಲಿ "ಏನೂ ಆಕ್ಷೇಪಾರ್ಹ ವಿಚಾರ ಇಲ್ಲ" ಎಂದು ಹೇಳಿತು. ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಹ ಇದೇ ರೀತಿಯ PIL ಇದೆ, ಆದರೆ ಇದು ಸಹ ಇನ್ನೂ ಬಾಕಿಯಿದೆ.

ಆದರೆ ಹೈಕೋರ್ಟ್‌ನ ಸಮಯವನ್ನ ವ್ಯರ್ಥ ಮಾಡಿದ ಅರ್ಜಿದಾರೆ ಸಯೀದಾ ನಿಲೋಫರ್‌ ಅವರಿಗೆ 50 ಸಾವಿರ‌ ರೂಪಾಯಿ ದಂಡ ವಿಧಿಸಿದೆ.

ಸಾರ್ವಜನಿಕ ಮತ್ತು ಚಲನಚಿತ್ರ ಉದ್ಯಮದ ಪ್ರತಿಕ್ರಿಯೆ-

ಸಿನಿಮಾ ತಯಾರಕರು (ಸ್ಟಾರ್ ಸ್ಟುಡಿಯೋಸ್) ಈ ಆದೇಶವನ್ನು ಸ್ವಾಗತಿಸಿದ್ದಾರೆ, ಮತ್ತು ಸಿನಿಮಾ ಸೆಪ್ಟೆಂಬರ್ 19 ರಂದು ನಿರ್ಧಾರಿತಂತೆ ಬಿಡುಗಡೆಯಾಗುತ್ತದೆ ಎಂದು ಖಚಿತಪಡಿಸಿದ್ದಾರೆ.

ವಕೀಲ ಸಂಘಟನೆಗಳು ಇದನ್ನು "ನ್ಯಾಯಾಂಗದ ಸ್ವಾತಂತ್ರ್ಯದ ಗೆಲುವು" ಎಂದು ಕರೆದಿದ್ದಾರೆ, ಆದರೆ ಕೆಲವರು ಇನ್ನೂ ಚಿತ್ರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

-ಮೊದಲ ಭಾಗ (2013) ಸೂಪರ್ ಹಿಟ್ ಆಗಿತ್ತು, ಎರಡನೇ ಭಾಗ (2017) 200 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಮೂರನೇ ಭಾಗದಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಅಪೋಸಿಟ್‌ ನಟನಾ ವ್ಯಕ್ತಿಯಾಗಿ ಅರ್ಶದ್ ವಾರ್ಸಿ ಇರುತ್ತಾರೆ. ಈ ಚಿತ್ರವೂಸಹ ಯಶಸ್ಸನ್ನು ಕಾಣಲಿದೆ ಎಂಬ ನೀರಿಕ್ಷೆ ಇದೆ.