Skip to main content
ವಿಡಿಯೋ
1/3
cinema

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ ದರ್ಶನ್ ಸೇರಿದಂತೆ 17 ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರು.

By Ram Chethan
ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ ದರ್ಶನ್ ಸೇರಿದಂತೆ 17 ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರು.

ನಟ ದರ್ಶನ್ ಮತ್ತು 16 ಆರೋಪಿಗಳು ಇಂದು 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಚಾರ್ಜ್ ಫ್ರೇಮ್ ಪ್ರಕ್ರಿಯೆಗೆ ಹಾಜರಾಗಲಿದ್ದಾರೆ. ದರ್ಶನ್ ಜೈಲಿನ ಸೌಲಭ್ಯಗಳ ಬಗ್ಗೆ ತಮ್ಮ ಅಸಮಾಧಾನವನ್ನು ನ್ಯಾಯಾಧೀಶರ ಗಮನಕ್ಕೆ ತರಬಹುದು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಇಂದು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಈ ಪ್ರಕರಣದಲ್ಲಿ ಆರೋಪ ನಿಗದಿ (ಚಾರ್ಜ್ ಫ್ರೇಮ್) ಪ್ರಕ್ರಿಯೆ ನಡೆಯಲಿದೆ.

ದರ್ಶನ್, ವಿನಯ್, ಪ್ರದೂಶ್, ಲಕ್ಷ್ಮಣ್, ದೀಪಕ್, ಪ್ರಜ್ವಲ್ ಮತ್ತು ರಘು ಸೇರಿದಂತೆ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ. ಉಳಿದ ಹತ್ತು ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.G-Shock Casio GA-140-1A1DR Analog-Digital Black Dial Men Watch (G975)


ಈ ಪ್ರಕ್ರಿಯೆ ಬಳಿಕ ಪ್ರಕರಣದ ವಿಚಾರಣೆಯನ್ನು ಆರಂಭಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ದರ್ಶನ್ ಅವರು ಜೈಲಿನ ವ್ಯವಸ್ಥೆ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ದೂರಿ ಬಿಡುಗಡೆ...ಹಲ್‌ಚಲ್ ಎಬ್ಬಿಸಲಿದೆ IMAX ಸ್ವರೂಪ!

ಊಟ ಮತ್ತು ಬೆಡ್‌ಶೀಟ್‌ಗಳ ಗುಣಮಟ್ಟದ ಬಗ್ಗೆ ಅಸಮಾಧಾನಗೊಂಡು, ನ್ಯಾಯಾಧೀಶರ ಎದುರು "ಸ್ವಲ್ಪ ವಿಷ ಕೊಡಿ ಸ್ವಾಮಿ" ಎಂದು ಹೇಳಿ ಆಘಾತ ಮೂಡಿಸಿದ್ದರು. ನಂತರ, ದರ್ಶನ್ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ಕುರಿತು ವಿಚಾರಣೆ ಕೂಡ ನಡೆದಿತ್ತು. ಇಂದು ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯುವುದರಿಂದ, ಜೈಲು ಅಧಿಕಾರಿಗಳು ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಜೈಲಿನ ಸೌಲಭ್ಯಗಳ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತರುವ ಸಾಧ್ಯತೆಯಿದೆ.