Skip to main content
ವಿಡಿಯೋ
1/2
metro

ನಡುರಸ್ತೆಯಲ್ಲೇ ವ್ಯಕ್ತಿ ಹಾಸಿಗೆ ಮೇಲೆ ಮಲಗಿ ಸಂಚಾರಕ್ಕೆ ಅಡ್ಡಿ - ವಿಡಿಯೋ ವೈರಲ್‌

By Shravanthi R
ನಡುರಸ್ತೆಯಲ್ಲೇ ವ್ಯಕ್ತಿ ಹಾಸಿಗೆ ಮೇಲೆ ಮಲಗಿ ಸಂಚಾರಕ್ಕೆ ಅಡ್ಡಿ - ವಿಡಿಯೋ ವೈರಲ್‌

ಕರ್ನಾಟಕ ಫೋರ್ಟ್‌ಫೋಲಿಯೋ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಸಾರ್ವಜನಿಕ ಸುರಕ್ಷತೆಯನ್ನ, ಸಂಚಾರ ಅಡೆತಡೆಗೆ ಒದಗಿರುವ ಈ ರೀತಿಯ ಅನುಚಿತ ಸಂದರ್ಭಗಳಲ್ಲಿ ಸೂಕ್ತ ಅಧಿಕಾರಿಗಳು ಮಧ್ಯೆ ಪ್ರವೇಶಿಸಬೇಕೆನ್ನಲಾಗಿದೆ. ಇದಕ್ಕಾಗಿ ಹಲಸೂರು ಸಂಚಾರ ಪೋಲಿಸ್‌ ಠಾಣೆಯನ್ನು ಟ್ಯಾಗ್‌ ಮಾಡಿದ್ದಾರೆ.

ಬೆಂಗಳೂರು: ನಗರದ ಜನನಿಬಿಡ ರಸ್ತೆಯಲ್ಲಿ ವಾಹನಗಳ ಸಂಚಾರದ ಮದ್ಯೆದಲ್ಲೇ ವ್ಯಕ್ತಿಯೋರ್ವ ಹಾಸಿಗೆ ಮೇಲೆ ಮಲಗಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಚಿತ್ರ ವರ್ತನೆಯ ಘಟನೆಯಿಂದ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಇದಕ್ಕೆ ಪೋಲಿಸರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯು ಸೆಂಟ್‌ ಜೋಸೆಫ್‌ ಬಸ್‌ ನಿಲ್ದಾಣದ ಬಳಿ ರಸ್ತೆ ವಾಹನಗಳ ಸಂಚಾರದ ನಡುವಲ್ಲಿ ನಡೆದಿದೆ ಎನ್ನಲಾಗಿದೆ. ವ್ಯಕ್ತಿ ಆರಾಮವಾಗಿ ಮಲಗಿರುವ ದೃಶ್ಯದ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈಗಾಗಲೇ ಟ್ರಾಫಿಕ್‌ ಸಮಸ್ಯೆಯಿಂದ ಬಳಲಿರುವ ನಗರದ ಜನರು, ಇಂತಹ ಅತಿರೇಕದ ವರ್ತನೆಗೆ ದೂರಿದ್ದಾರೆ. ಈ ರೀತಿ ಮಲಗಿರುವ ವ್ಯಕ್ತಿಯು ಮಾನಸಿಕ ಅಸ್ವಸ್ಥನೋ ಅಥವಾ ಅಸ್ಥಿರನೆಂಬುದು ತಿಳಿದುಬಂದಿಲ್ಲ. ಇದಾದರೂ, ಇದೊಂದಿ ಉದ್ದೇಶಪೂರ್ವಕ ಘಟನೆಯೇ ಎಂದು ಅಂದಾಜಿಸಲಾಗಿದೆ. ಈ ಕೃತ್ಯವು ಬೇಜವಾಬ್ದಾರಿಯನ್ನು ತೋರಿದ್ದು, ಇದು ಸ್ವೀಕಾರಾರ್ಹಾವಲ್ಲವಾಗಿದೆ. ಇದರಿಂದ ಪ್ರಯಾಣಿಕರಿಗೂ ಸಂಚಾಲಕರಿಗೂ ಪ್ರಾಣಾಪಾಯವಿದೆ ಈ ಬಗ್ಗೆ ನೆಟ್ಟಿಗರು ತಮ್ಮ ಆಕ್ರೋಶವನ್ನು ತೋರಿದ್ದಾರೆ ಎಂದು ತಿಳಿಸಲಾಗಿದೆ. 

iQOO Neo 10R 5G (Raging Blue, 8GB RAM, 128GB Storage) | Snapdragon 8s Gen 3 Processor | India's Slimmest 6400mAh Battery Smartphone | Segment's Most Stable 90FPS for 5 Hours

ಕರ್ನಾಟಕ ಫೋರ್ಟ್‌ಫೋಲಿಯೋ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಸಾರ್ವಜನಿಕ ಸುರಕ್ಷತೆಯನ್ನ, ಸಂಚಾರ ಅಡೆತಡೆಗೆ ಒದಗಿರುವ ಈ ರೀತಿಯ ಅನುಚಿತ ಸಂದರ್ಭಗಳಲ್ಲಿ ಸೂಕ್ತ ಅಧಿಕಾರಿಗಳು ಮಧ್ಯೆ ಪ್ರವೇಶಿಸಬೇಕೆನ್ನಲಾಗಿದೆ. ಇದಕ್ಕಾಗಿ ಹಲಸೂರು ಸಂಚಾರ ಪೋಲಿಸ್‌ ಠಾಣೆಯನ್ನು ಟ್ಯಾಗ್‌ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಅವ್ಯವಸ್ಥೆಗಳನ್ನು ನೋಡುವುದು ಒಂದೆಡೆಯಾದರೆ, ಇಂತಹ ವಿಚಿತ್ರ ವರ್ತನೆಗಳು ವೈರಲ್‌ ಆಗುವುದು ಹೆಚ್ಚಾಗುತ್ತಿದೆ. ಈ ರೀತಿಯ ಅಜಾಗರೂಕ ನಡವಳಿಕೆಯಿಂದ ಪೋಲಿಸರು ಬೇಸತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ಮೇಲ್ಮನವಿ ವಜಾ..!