ಜಾತಿ ಗಣತಿಯಲ್ಲಿ ತಮ್ಮನ್ನು ಹಿಂದೂ ಎಂದು ನಮೂದಿಸಲು ಒಪ್ಪಿದರೆ, ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದ ನಿರ್ಣಯಗಳನ್ನು ಒಪ್ಪಿಕೊಳ್ಳುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮವನ್ನು ವಿರೋಧಿಸುವವರು ಮೊದಲು ಕೇಸರಿ, ಖಾವಿ ಬಟ್ಟೆಗಳನ್ನು ತ್ಯಜಿಸಬೇಕೆಂದು ಯತ್ನಾಳ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿಜಗುಣಾನಂದ ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, ಇಸ್ಲಾಂ ಮತ್ತು ಲಿಂಗಾಯತ ಧರ್ಮಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ನಿಜಗುಣಾನಂದ ಸ್ವಾಮಿ ಹೇಳುತ್ತಾರೆ. ಅವರು ಲಕ್ಷ್ಮೀ ಪೂಜೆಯನ್ನು ಪ್ರಶ್ನಿಸುತ್ತಾರೆ. ಹಾಗಾದರೆ ನೀವೇಕೆ ವಿಭೂತಿ ಹಚ್ಚಿಕೊಳ್ಳಬೇಕು? ಗೋವಿನ ಸಗಣಿಯಿಂದಲೇ ಏಕೆ ವಿಭೂತಿ ಮಾಡಬೇಕು? ಎಂದು ಪ್ರಶ್ನಿಸಿದರು. JM LOOKS Fancy Pointed Toe Sandals: Stylish Stiletto Heels with Ankle Strap, Comfortable for Women & Girls
ಬೇಕಿದ್ದರೆ ನಾಯಿ ಅಥವಾ ಹಂದಿಯ ಸಗಣಿಯಿಂದ ವಿಭೂತಿ ಮಾಡಿಕೊಂಡು ಹಚ್ಚಿಕೊಳ್ಳಲಿ ಎಂದು ಯತ್ನಾಳ್ ಆಕ್ರೋಶಭರಿತರಾಗಿ ನುಡಿದರು. ತಮ್ಮ ಹೇಳಿಕೆಗಳ ಮೂಲಕ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅಲ್ಲದೇ ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಯಾವುದೇ ಸಭೆಗೆ ತಾನು ಹಾಜರಾಗುವುದಿಲ್ಲ ಎಂದು ಹೇಳಿದರು. ಕೇಸರಿ ಬಟ್ಟೆ ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರತೀಕ ಎಂದು ಅವರು ತಿಳಿಸಿದರು.