Skip to main content
ವಿಡಿಯೋ
1/2
politics

ರಾಜ್ಯ ರಾಜಕೀಯಕ್ಕೆ ಕುಮಾರಸ್ವಾಮಿ ರೀ ಎಂಟ್ರಿ... ‘ಟಾರ್ಗೆಟ್ 80’ ಮೂಲಕ ಜೆಡಿಎಸ್ ಪುನರುಜ್ಜೀವನ ಮಿಷನ್!

By Vinutha U
ರಾಜ್ಯ ರಾಜಕೀಯಕ್ಕೆ ಕುಮಾರಸ್ವಾಮಿ ರೀ ಎಂಟ್ರಿ... ‘ಟಾರ್ಗೆಟ್ 80’ ಮೂಲಕ ಜೆಡಿಎಸ್ ಪುನರುಜ್ಜೀವನ ಮಿಷನ್!

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮರಳುತ್ತಿದ್ದಾರೆ. ‘ಟಾರ್ಗೆಟ್ 80’ ಯೋಜನೆಯೊಂದಿಗೆ ಅವರು 80 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಜೆಡಿಎಸ್ ಪಕ್ಷವನ್ನು ಪುನರುಜ್ಜೀವನಗೊಳಿಸಿ 2028ರ ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ.

ದೆಹಲಿಯ ರಾಜಕೀಯದಲ್ಲಿ ನಿರತರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗ ರಾಜ್ಯ ರಾಜಕೀಯಕ್ಕೆ ಸಕ್ರಿಯವಾಗಿ ಮರಳಲು ತೀರ್ಮಾನಿಸಿದ್ದಾರೆ. ಕೇಂದ್ರ ಸಚಿವರಾಗಿ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಮಾರಸ್ವಾಮಿ, ಈಗ ಜೆಡಿಎಸ್ ಪಕ್ಷವನ್ನು ಪುನರುಜ್ಜೀವನಗೊಳಿಸಿ, ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಗುರಿ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಹಳಿಯ ತಪ್ಪಿದ ರೈಲಿನಂತಾಗಿತ್ತು.

ನಾಯಕತ್ವದ ಕೊರತೆ, ಕಾರ್ಯಕರ್ತರ ಅಸಮಾಧಾನ ಮತ್ತು ಸೂಕ್ತ ತಂತ್ರಗಳ ಅಭಾವದಿಂದ ಪಕ್ಷವು ತನ್ನ ಬಲವನ್ನು ಕಳೆದುಕೊಂಡಿತು. ಇದೀಗ ಈ ಸ್ಥಿತಿಯನ್ನು ಬದಲಿಸಲು ಕುಮಾರಸ್ವಾಮಿ ‘ಟಾರ್ಗೆಟ್ 80’ ಎಂಬ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಿದ್ದಾರೆ.

ಮುಂದಿನ ತಿಂಗಳು ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು, ವಿಶೇಷವಾಗಿ ಜೆಡಿಎಸ್‌ಗೆ ಪರ ಒಲವಿರುವ 80 ಕ್ಷೇತ್ರಗಳಲ್ಲಿ ನಾಯಕರನ್ನು ಒಗ್ಗೂಡಿಸಿ, ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಬೆಳೆಸಲಿದ್ದಾರೆ. ಚಿತ್ತೂರ್ ಭಯಾನಕ ಘಟನೆ: ಶಿಕ್ಷಕಿಯ ಕ್ರೂರ ಕೃತ್ಯದಿಂದ ವಿದ್ಯಾರ್ಥಿನಿಯ ತಲೆಬುರುಡೆಗೆ ಗಾಯ..!

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಹಿಡಿದು 2028ರ ವಿಧಾನಸಭಾ ಚುನಾವಣೆಯವರೆಗೆ ಪಕ್ಷವನ್ನು ಬಲಪಡಿಸಿ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿರುವುದು ಪಕ್ಷದ ಒಳವಲಯದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯಕ್ಕೆ ಈ ಮರುಪ್ರವೇಶದ ಮೂಲಕ ಕುಮಾರಸ್ವಾಮಿ ತಮ್ಮ ನಾಯಕತ್ವದ ಸ್ಪಷ್ಟ ಸಂದೇಶ ನೀಡಿ, ಜೆಡಿಎಸ್‌ಗೆ ಹೊಸ ಚೈತನ್ಯ ತುಂಬುವ ತಂತ್ರ ರೂಪಿಸಿದ್ದಾರೆ.