ಅನಾಥ ಬಾಲಕನನ್ನು ಕರೆದುಕೊಂಡು ಬಂದು ಸ್ವಂತ ತಾಯಿಯಂತೆ ಸಾಕಿ ಸಲಹಿದ ಮಹಿಳೆಯ ಮೇಲೆ ಆತನೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಳೆತೋಟದಲ್ಲಿ ನಡೆದಿದೆ. ಸೆಪ್ಟೆಂಬರ್ 15, 2025ರಂದು ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ತನಿಖೆಯಲ್ಲಿ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
45 ವರ್ಷದ ಮಹಿಳೆಯೊಬ್ಬಳು ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳದಿದ್ದಾಗ, ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು.
ಮರುದಿನ ಬಾಳೆತೋಟದಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಗಾಯದ ಗುರುತುಗಳಿಂದ ಕೊಲೆಯ ಶಂಕೆ ಮೂಡಿತ್ತು. ಜಾವಗಲ್ ಪೊಲೀಸರು ಅನುಮಾನಾಸ್ಪದ ಸಾವಿನ ಕೇಸ್ ದಾಖಲಿಸಿ ತನಿಖೆ ಆರಂಭಿಸಿದರು. ತನಿಖೆಯಲ್ಲಿ, ಮಹಿಳೆಯು ತಾಯಿಯಂತೆ ಸಾಕಿದ 17 ವರ್ಷದ ಅಪ್ರಾಪ್ತ ಬಾಲಕನೇ ಈ ಕೃತ್ಯವೆಸಗಿರುವುದು ಎಂದು ತಿಳಿದುಬಂದಿದೆ. ZAVERI PEARLS Turquoise Blue & Green Meenakari Cascading Waterfall Beads Necklace Earring & Ring Set For Women-ZPFK14607
17 ವರ್ಷಗಳ ಹಿಂದೆ ಅನಾಥನಾಗಿದ್ದ ಈ ಬಾಲಕನನ್ನು ಮಹಿಳೆ ತನ್ನ ಮಗನಂತೆ ಪ್ರೀತಿಯಿಂದ ಸಾಕಿದ್ದಳು. ಶಾಲೆಗೆ ಕಳುಹಿಸಿ, ಕೈತುತ್ತು ನೀಡಿ, ತಾಯಿಯ ಕೊರತೆ ತೋರದಂತೆ ಜೋಪಾನವಾಗಿ ನೋಡಿಕೊಂಡಿದ್ದಳು. ಆದರೆ, ಬಾಲಕನ ಮನಸ್ಸಿನಲ್ಲಿ ಕಾಮುಕತೆಯ ದುಷ್ಟ ಆಲೋಚನೆಯಿತ್ತು. ಸೆಪ್ಟೆಂಬರ್ 15ರಂದು ಏಕಾಂಗಿಯಾಗಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಂದಿದ್ದಾನೆ.
ಕೊಲೆಯ ನಂತರ ಆಕೆಯ ಮೊಬೈಲ್‌ನಲ್ಲಿ ತನ್ನ ಸಿಮ್ ಹಾಕಿಕೊಂಡು ಆರಾಮವಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮಸ್ಥರಿಂದ ಸಿಕ್ಕ ಮಾಹಿತಿಯ ಪ್ರಕಾರ, ಬಾಲಕ ಮತ್ತು ಮಹಿಳೆಯ ನಡುವೆ ಜಗಳವಾಗಿತ್ತು ಎಂಬ ಸುಳಿವು ತನಿಖೆಗೆ ದಾರಿ ಮಾಡಿಕೊಟ್ಟಿತು. ಈ ಕೃತ್ಯದಲ್ಲಿ ಬಾಲಕನಿಗೆ ಯಾರೋ ಸಹಾಯ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನಿಸಿದ್ದಾರೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು: ಬಾಂದ್ರಾ ಕುರ್ಲಾ ನಿಲ್ದಾಣ ಕಾಮಗಾರಿ ಅಂತಿಮ ಹಂತ..!
ಕೂಲಿ ಕೆಲಸ ಮಾಡುತ್ತಿದ್ದರೂ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಮಹಿಳೆ, ಗಂಡನಿಲ್ಲದಿದ್ದರೂ ತನ್ನ ಮಗನಿಗೆ ಮನೆ ಕಟ್ಟುವ ಕನಸು ಕಂಡಿದ್ದಳು. ಆದರೆ, ತಾನು ಮಗನಂತೆ ಸಾಕಿದ ಬಾಲಕನಿಂದಲೇ ಭೀಕರವಾಗಿ ಕೊಲೆಯಾದಳು. ಈ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.