Skip to main content
ವಿಡಿಯೋ
1/3
metro

ಮೆಟ್ರೋ ದರ ಹೆಚ್ಚಳ ವರದಿ ವಿಚಾರ: ತೇಜಸ್ವಿ ಅರ್ಜಿ ವಿಲೇವಾರಿ: BMRCL ನಿಂದ ಹಣವನ್ನು ಮರಳಿಸಲು ಮತ್ತೊಂದು ಅರ್ಜಿ: ಇಲ್ಲಿದೆ ಮಾಹಿತಿ

By Gireesh Vasishta
ಮೆಟ್ರೋ ದರ ಹೆಚ್ಚಳ ವರದಿ ವಿಚಾರ: ತೇಜಸ್ವಿ ಅರ್ಜಿ ವಿಲೇವಾರಿ: BMRCL ನಿಂದ ಹಣವನ್ನು ಮರಳಿಸಲು ಮತ್ತೊಂದು ಅರ್ಜಿ: ಇಲ್ಲಿದೆ ಮಾಹಿತಿ

ವರದಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿರುವುದರಿಂದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವಂತೆ ಕೋರಿ ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯು ಅಸ್ತಿತ್ವ ಕಳೆದುಕೊಂಡಿದೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರು ಅದನ್ನು ವಿಲೇವಾರಿ ಮಾಡಿದರು.

ಮದ್ರಾಸ್ಹೈಕೋರ್ಟ್ನಿವೃತ್ತ ನ್ಯಾಯಮೂರ್ತಿಗಳಾದ ಧಾರಣಿ ಅವರ ನೇತೃತ್ವದ ಮೆಟ್ರೋ ರೈಲು ದರ ನಿಗದಿ ಸಮಿತಿಯು ಸಲ್ಲಿಸಿರುವ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವುದನ್ನು ಪರಿಗಣಿಸಿ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿದೆ ಎಂದು ತಿಳಿಸಿದೆ. ವರದಿ ಆನ್ಲೈನ್ನಲ್ಲಿ ಅಪ್ಲೋಡ್ಮಾಡಿರುವುದರಿಂದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವಂತೆ ಕೋರಿ ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯು ಅಸ್ತಿತ್ವ ಕಳೆದುಕೊಂಡಿದೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ BM ಶ್ಯಾಮ್ಪ್ರಸಾದ್ ಅವರು ಅದನ್ನು ವಿಲೇವಾರಿ ಮಾಡಿದರು.TIMEX Classics Analog Watch for Men with Round Dial & Water Resistant Man's Wrist Watches

ತೇಜಸ್ವಿ ಪರ ಹಾಜರಾಗಿದ್ದ ವಕೀಲರಾದ "ಅನಿರುದ್ಧ್ಕುಲಕರ್ಣಿ" ಅವರುಸೆಪ್ಟೆಂಬರ್‌ 11ರಂದು ದರ ನಿಗದಿ ಸಮಿತಿಯ ವರದಿಯನ್ನು ಬಿಎಂಆರ್ಸಿಎಲ್ಆನ್ಲೈನ್ನಲ್ಲಿ ಅಪ್ಲೋಡ್ಮಾಡಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸುವ ಅವಶ್ಯಕತೆ ಇಲ್ಲಎಂದರು. ಇದನ್ನು ಪರಿಗಣಿಸಿ, ನ್ಯಾಯಾಲಯವು ಅರ್ಜಿಗೆ ಅಂತ್ಯ ಹಾಡಿದೆ.ಇದನ್ನು ಓದಿ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಹೊಸ ಡಬಲ್ ಇಂಜಿನ್ ಹೆಲಿಕಾಪ್ಟರ್ ಖರೀದಿ..!

ಈ ಮಧ್ಯೆ, ಬೆಂಗಳೂರಿನ ನಿವಾಸಿಯಾಗಿರುವ S. ಆನಂದ್‌ ಅವರು ರೈಲು ಪ್ರಯಾಣ ದರ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು & ಇದುವರೆಗೆ ಹೆಚ್ಚುವರಿ ದರ ಭಾಗವಾಗಿ 19.02.2025ರಿಂದ ಪಡೆದಿರುವ ಹಣವನ್ನು ಮರಳಿಸಲು BMRCLಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿತು.

METRO ರೈಲು (ಕಾರ್ಯನಿರ್ವಹಣೆ ಮತ್ತು ನಿರ್ವಹಣೆ) ಕಾಯಿದೆ ಸೆಕ್ಷನ್‌ 34 ರ ಅನ್ವಯ 2024 ರ ಸೆಪ್ಟೆಂಬರ್‌ 7 ರಂದು ನಿವೃತ್ತ ನ್ಯಾ. ಧಾರಣಿ ಅವರ ನೇತೃತ್ವದಲ್ಲಿ ಪರಿಷ್ಕೃತ ದರ ಪಟ್ಟಿ ಶಿಫಾರಸ್ಸು ಮಾಡುವಂತೆ ದರ ನಿಗದಿ ಸಮಿತಿಯನ್ನು ಬಿಎಂಆರ್‌ಸಿಎಲ್‌ ರಚಿಸಿತ್ತು. ಇದರ ಅನ್ವಯ ಸಮಿತಿಯು ದೇಶದ ವಿವಿಧೆಡೆ ಮತ್ತು ಸಿಂಗಪೋರ್‌ ಹಾಗೂ ಹಾಂಗ್‌ಕಾಂಗ್ ಸೇರಿ ಜಾಗತಿಕ ಮೆಟ್ರೋ ರೈಲು ಪ್ರಯಾಣ ದರಗಳನ್ನು ಅಧ್ಯಯನ ಮಾಡಿ 2024ರ ಡಿಸೆಂಬರ್‌ 16ರಂದು ವರದಿ ಸಲ್ಲಿಸಿತ್ತು. 2025 ರ ಫೆಬ್ರವರಿ 8 ರಂದು ಇದನ್ನು ಬಿಎಂಆರ್‌ಸಿಎಲ್‌ ಮಾಧ್ಯಮ ಹೇಳಿಕೆಯ ಮೂಲಕ ಜನರಿಗೆ ತಿಳಿಸಿತ್ತು.

 

ಇದರ ಭಾಗವಾಗಿ 2025 ರ ಫೆಬ್ರವರಿ 9 ರಂದು ಕೆಲವು ಕಡೆ ಶೇ.100% ಅಂದರೆ ಮೆಟ್ರೋ ರೈಲು ಟಿಕೆಟ್‌ ದರವನ್ನು 60 ರಿಂದ 90 ರೂಪಾಯಿಗೆ ಹೆಚ್ಚಿಸಲಾಗಿತ್ತು. ಆ ಮೂಲಕ ಇಡೀ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಅಪಖ್ಯಾತಿಗೆ ಗುರಿಯಾಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2025ರ ಫೆಬ್ರವರಿ 14ರಂದು ಬಿಎಂಆರ್‌ಸಿಎಲ್‌ ಶೇ.71ಕ್ಕೆ ಗರಿಷ್ಠ ಟಿಕೆಟ್‌ ದರ ಮಿತಿಗೊಳಿಸಿತ್ತು.