Skip to main content
ವಿಡಿಯೋ
1/2
crime

ಕಲಬುರಗಿ ಕಾಲೋನಿಯಲ್ಲಿ ದಾರುಣ ಘಟನೆ: ವ್ಯಕ್ತಿಯನ್ನು ಬೆತ್ತಲೆ ಮಾಡಿ, ಕಟ್ಟಿಗೆಯಿಂದ ಹೊಡೆದು ಕೊ*ಲೆ..!

By Vinutha U
ಕಲಬುರಗಿ ಕಾಲೋನಿಯಲ್ಲಿ ದಾರುಣ ಘಟನೆ: ವ್ಯಕ್ತಿಯನ್ನು ಬೆತ್ತಲೆ ಮಾಡಿ, ಕಟ್ಟಿಗೆಯಿಂದ ಹೊಡೆದು ಕೊ*ಲೆ..!

ಮಾತಿಗೆ ಮಾತು ಬೆಳೆದು ಅದು ಗಲಾಟೆಗೆ ತಿರುಗಿದೆ ನಂತರ ದೊಡ್ಡ ಮಟ್ಟಕ್ಕೆ ತಿರುಗಿದೆ, ಇದೇ ಸಂದರ್ಭದಲ್ಲಿ ಆರೋಪಿಗಳು ಆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಕಲಬುರಗಿ ನಗರದ ಕುಷ್ಟರೋಗಿಗಳ ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ಒಬ್ಬ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಚಾಂದ್‌ಸಾಬ್ ಎಂದು ಗುರುತಿಸಲಾಗಿದೆ. ZAVERI PEARLS Turquoise Blue & Green Meenakari Cascading Waterfall Beads Necklace Earring & Ring Set For Women-ZPFK14607

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚಾಂದ್‌ಸಾಬ್ ತಮ್ಮ ಮನೆಯಲ್ಲಿ ತಮ್ಮ ಸ್ನೇಹಿತರೊಡನೆ ಮದ್ಯಪಾರ್ಟಿ ನಡೆಸುತ್ತಿದ್ದರು, ಅದೇ ವೇಲೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಅದು ಗಲಾಟೆಗೆ ತಿರುಗಿದೆ ನಂತರ ದೊಡ್ಡ ಮಟ್ಟಕ್ಕೆ ತಿರುಗಿದೆ, ಇದೇ ಸಂದರ್ಭದಲ್ಲಿ ಆರೋಪಿಗಳು ಆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಮೃತನ ಪತ್ನಿಯು ದೆಹಲಿಯಲ್ಲಿ ವಾಸವಿದ್ದರು ಪತಿಯ ಸಾವಿನ ಸುದ್ದಿ ತಿಳಿದು ಕಲಬುರಗಿಗೆ ಬಂದಿದ್ದಾರೆ.  ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.