Skip to main content
ವಿಡಿಯೋ
1/3
cinema

ಫೇಮಸ್ ಆಗಿದ್ದು 'ಮುಕಳೆಪ್ಪ'ನಾಗಿ..ನಿಜ ಹೆಸರು 'ಮಹಮದ್ ಹನೀಫ್'! ಮಾಡಿದ್ದು ಲವ್ ಜಿಹಾದ್, ಹುಡುಗಿ ತಾಯಿ ಕಣ್ಣೀರು!

By Ram Chethan
ಫೇಮಸ್ ಆಗಿದ್ದು 'ಮುಕಳೆಪ್ಪ'ನಾಗಿ..ನಿಜ ಹೆಸರು 'ಮಹಮದ್ ಹನೀಫ್'! ಮಾಡಿದ್ದು ಲವ್ ಜಿಹಾದ್, ಹುಡುಗಿ ತಾಯಿ ಕಣ್ಣೀರು!

24 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಜನಪ್ರಿಯ ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಹಿಂದೂ ಯುವತಿ ಗಾಯತ್ರಿ ಜಾಲಿಹಾಳ ಜೊತೆ ನಕಲಿ ದಾಖಲೆಗಳ ಮೂಲಕ ಮದುವೆಯಾದರೆಂದು ಬಜರಂಗದಳ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಅನೇಕರು ಯೂಟ್ಯೂಬ್ ಮೂಲಕ ಬದುಕು ಕಟ್ಟಿಕೊಂಡಿದ್ದು, ಅವರಲ್ಲಿ 'ಮುಕಳೆಪ್ಪ' ಕೂಡ ಒಬ್ಬರು. ಇವರು 'ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್' ಎಂಬ ಅಲಿಯಾಸ್ ಹೊಂದಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ತಮ್ಮ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿ, 24 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಈಗ ಇವರ ಸುತ್ತ ಲವ್ ಜಿಹಾದ್ ಆರೋಪದ ವಿವಾದ ಸುತ್ತಿಕೊಂಡಿದೆ.

ಬಜರಂಗದಳ ಕಾರ್ಯಕರ್ತರು ಮುಕಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 5ರಂದು ಮುಕಳೆಪ್ಪ, ಹಿಂದೂ ಯುವತಿ ಗಾಯತ್ರಿ ಯಲ್ಲಪ್ಪ ಜಾಲಿಹಾಳ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಈ ಮದುವೆ ಬೆದರಿಕೆ ಹಾಗೂ ನಕಲಿ ದಾಖಲೆಗಳ ಮೂಲಕ ನಡೆದಿದೆ ಎಂದು ಬಜರಂಗದಳ ಆರೋಪಿಸಿದೆ.Titan Analog Men Automatic Silver Dial Black Leather Strap Watch

ದೂರು ದಾಖಲಾದ ನಂತರ, ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ ಅವರು ವಿಡಿಯೋ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. "ಮುಕಳೆಪ್ಪ ನನ್ನ ಮಗಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ. ನಾವು ಹಳ್ಳಿಯವರು, ಎಲ್ಲೂ ಹೋಗುವುದಿಲ್ಲ. ಆದರೆ, ನನ್ನ ಮಗಳು ದೊಡ್ಡ ಹೆಸರು ಮಾಡಬಹುದು ಎಂದುಕೊಂಡು ಮುಕಳೆಪ್ಪನ ಜೊತೆ ವಿಡಿಯೋ ಮಾಡಲು ಹೋಗುತ್ತಿದ್ದಳು," ಎಂದು ಶಿವಕ್ಕ ಹೇಳಿದ್ದಾರೆ.

ಮಗಳ ಒತ್ತಾಸೆಗೆ ಮಣಿದು, ವಿಡಿಯೋ ಮಾಡಲು ನಾವು ಕಳುಹಿಸುತ್ತಿದ್ದೆವು. "ನಾವು ಮಾಡುತ್ತಿರುವುದು ದೊಡ್ಡ ತಪ್ಪು ಎನ್ನುವುದು ನಮಗೆ ಅರಿವಾಗಲಿಲ್ಲ. ನಮ್ಮ ಮಗಳನ್ನು ಪುಸಲಾಯಿಸಿ ಮುಕುಳೆಪ್ಪ ಮದುವೆಯಾಗಿದ್ದಾನೆ. ನಮ್ಮ ಮಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ ಎಂದು ನಾವು ಮುಕುಳೆಪ್ಪ ಜೊತೆ ವಿಡಿಯೋ ಮಾಡಲು ಅನುಮತಿ ನೀಡಿದ್ದೆವು. ಅದೇ ನಾವು ಮಾಡಿದ ದೊಡ್ಡ ತಪ್ಪು," ಎಂದು ಗಾಯತ್ರಿ ತಾಯಿ ಕಣ್ಣೀರು ಹಾಕಿದ್ದಾರೆ.ಈ ಸ್ಟಾರ್ ಗೆ ಶಾರುಖ್ ಖಾನ್ ಮಗ ಕೊಟ್ಟ ಪಾತ್ರ ನಿಜಕ್ಕೂ ಅಚ್ಚರಿ...ಬಾಲಿವುಡ್ ಬಿಟ್ಟು ಬೇರೆ ಕಡೆಯಾದ್ರಾ ಇಮ್ರಾನ್ ಹಶ್ಮಿ?

ಶಿವಕ್ಕ, "ಚಿತ್ರೀಕರಣದ ನೆಪದಲ್ಲಿ ನಮ್ಮ ಮಗಳನ್ನು ಮೂರು-ನಾಲ್ಕು ದಿನ ಹೊರಗಡೆ ಕರೆದುಕೊಂಡು ಹೋಗುತ್ತಿದ್ದ. ಆ ಕ್ಷಣಕ್ಕೆ ಆತ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಾಗಲಿಲ್ಲ. ನಮ್ಮಿಂದ ತಪ್ಪಾಗಿದೆ. ಹಿಂದೂ ಸಮಾಜ ನಮಗೆ ಬೇಕಾದ ಶಿಕ್ಷೆಯನ್ನು ನೀಡಲಿ," ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.