Skip to main content
ವಿಡಿಯೋ
1/2
general

ಧರ್ಮಸ್ಥಳ ಕೇಸ್: ಚಿನ್ನಯ್ಯನ 3ನೇ ವಿಡಿಯೋ ವೈರಲ್...ತಿಮರೋಡಿ ತಂಡದ ವಿರುದ್ಧ ಹೊಸ ದೂರು!

By Vinutha U
 ಧರ್ಮಸ್ಥಳ ಕೇಸ್: ಚಿನ್ನಯ್ಯನ 3ನೇ ವಿಡಿಯೋ ವೈರಲ್...ತಿಮರೋಡಿ ತಂಡದ ವಿರುದ್ಧ ಹೊಸ ದೂರು!

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಚಿನ್ನಯ್ಯನ ಹಳೆಯ ವಿಡಿಯೋಗಳು ವೈರಲ್ ಆಗಿದ್ದು, ತಿಮರೋಡಿ ತಂಡದ ವಿರುದ್ಧ ಕೋಕಾ, ಗೂಂಡಾ ಕಾಯ್ದೆಯಡಿ ಕೇಸು ಆಗ್ರಹಿಸಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳಾಗಿವೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ತಲೆಮರೆಸಿರುವ ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಹಳೆಯ ಭೇಟಿಯ ವಿಡಿಯೋಗಳು ವೈರಲ್ ಆಗಿವೆ. ಮೊದಲ ವಿಡಿಯೋ ಶುಕ್ರವಾರ ಹರಿದಾಡಿದ್ದು, ಶನಿವಾರ ಮತ್ತಷ್ಟು ಎರಡು ಮತ್ತು ಮೂರನೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವಿಡಿಯೋಗಳಲ್ಲಿ ಚಿನ್ನಯ್ಯ, ಧರ್ಮಸ್ಥಳ ಗ್ರಾಮದಲ್ಲಿ ಹಲವು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡಿದ್ದಾನೆ. ನಾನು ಹೂಳಿದ ಶವಗಳಿಗೆ ಲೆಕ್ಕವಿಲ್ಲ. ಎಲ್ಲವೂ ಅನಾಥ ಶವಗಳು. ತರಕಾರಿ ಗಾಡಿಯಲ್ಲೂ ತಂದು ಹೂಳಿದ್ದೇನೆ, ಎಂದು ಆತ ಹೇಳಿದ್ದಾನೆ. 1 ರಿಂದ 17 ಪಾಯಿಂಟ್‌ಗಳವರೆಗೆ ಶವಗಳ ಬಗ್ಗೆ ಚಿನ್ನಯ್ಯ ಮಾತನಾಡಿರುವುದು ವಿಡಿಯೋದಲ್ಲಿದೆ. ವಿಡಿಯೋಗಳ ಅಸಲಿಯತ್ತು ಸ್ಪಷ್ಟವಾಗಿಲ್ಲ. ಇವು ಎರಡು ವರ್ಷ ಹಳೆಯವು ಎಂದು ಹೇಳಲಾಗಿದ್ದರೂ, ವಿಡಿಯೋದಲ್ಲಿ ಕಾಣಿಸುವ ಹ್ಯಾಂಡ್‌ವಾಶ್ ಬಾಟಲ್ 2025ರ ಜೂನ್ ತಿಂಗಳನ್ನು ತೋರಿಸುತ್ತಿದೆ. ಇದನ್ನು ಯಾರೋ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅದು ಸಹ ವೈರಲ್ ಆಗಿದೆ.JYESHTA Women's American Crepe Wrao Floral Printed Skirt with Ruffle Hem and Elastic Waistband Closure | Skirts for Woman

ಚಿನ್ನಯ್ಯನ ಹೇಳಿಕೆಗಳು:

ಎರಡನೇ ವಿಡಿಯೋದಲ್ಲಿ, ಚಿನ್ನಯ್ಯ ಧರ್ಮಸ್ಥಳ ಗ್ರಾಮದಲ್ಲಿ ರಾಶಿ ರಾಶಿ ಶವಗಳನ್ನು ತರಕಾರಿ ತಳ್ಳುವ ಗಾಡಿಯಲ್ಲಿ ಸಾಗಿಸಿ ಹೂತಿದ್ದೇನೆ. ಸ್ನಾನ ಘಟ್ಟದ ಬಳಿ ಹೂತ ಶವಗಳ ಸಂಖ್ಯೆಗೆ ಲೆಕ್ಕವಿಲ್ಲ, ಎಂದು ಹೇಳಿದ್ದಾನೆ. ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳ ಶವವನ್ನು ಶಾಲೆಯ ಹಿಂದೆ, ಮನೆಯ ಬಳಿ ಹೂತು ಹಾಕಿದ್ದಾಗಿ ಆತ ತಿಳಿಸಿದ್ದಾನೆ. ಆಕೆಯ ಸಾವಿಗೆ ಕುಟುಂಬದವರು ಯಾರೂ ಅಳುತ್ತಿರಲಿಲ್ಲ ಎಂದು ಚಿನ್ನಯ್ಯ ವಿವರಿಸಿದ್ದಾನೆ. ಇದೇ ವಿಡಿಯೋದಲ್ಲಿ ಅನಾಥ ಶವಗಳ ಬಗ್ಗೆ ಕಾಡಿನಲ್ಲಿ ಗುರುತಿಸಿದ ಸ್ಪಾಟ್ ನಂ.13ರ ಬಗ್ಗೆಯೂ ಉಲ್ಲೇಖವಿದೆ.

ಮೂರನೇ ವಿಡಿಯೋದಲ್ಲಿ, ಧರ್ಮಸ್ಥಳ ಗ್ರಾಮದ ತಿರುವೊಂದರಲ್ಲಿ 70ಕ್ಕೂ ಹೆಚ್ಚು ಶವಗಳನ್ನು ಹೂತು ಹಾಕಿದ್ದಾಗಿ ಚಿನ್ನಯ್ಯ ಹೇಳಿದ್ದಾನೆ. ಕೇರಳ ಮೂಲದ ಹೆಂಗಸಿನ ಶವವನ್ನೂ ಹೂತಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಅದು ಸ್ಮಶಾನವಲ್ಲ, ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ. ಪೊಲೀಸರು ಭದ್ರತೆ ನೀಡಿದರೆ ಹೂತಿಟ್ಟ ಜಾಗ ತೋರಿಸುತ್ತೇನೆ," ಎಂದು ಚಿನ್ನಯ್ಯ ಹೇಳಿದ್ದಾನೆ. ಅದಕ್ಕೆ ತಿಮರೋಡಿ, ಕೋರ್ಟ್‌ನಿಂದ ನಿಮ್ಮ ಇಡೀ ಕುಟುಂಬಕ್ಕೆ ಭದ್ರತೆ ಕೊಡಿಸುತ್ತೇನೆ, ಎಂದು ಪ್ರತಿಕ್ರಿಯಿಸಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಹೋಟೆಲ್ ಬಳಿ 12 ರಿಂದ 14 ವರ್ಷ ವಯಸ್ಸಿನ ಹುಡುಗಿಯ ಶವ, ಬಂಗ್ಲೆಗುಡ್ಡದ ಬುಡದಲ್ಲಿ (ಪಾಯಿಂಟ್ ನಂ.8) 8 ರಿಂದ 9 ಶವಗಳನ್ನು ಹೂತು ಹಾಕಿದ್ದಾಗಿ ಚಿನ್ನಯ್ಯ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸೌಜನ್ಯ ತಂದೆಗೆ ವಿಷಪ್ರಾಶನ ಆರೋಪ:

ಶವ ಹೂತಿಟ್ಟ ಪ್ರಕರಣದಲ್ಲಿ ಧರ್ಮಸ್ಥಳದ ಮೂವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಎ.ಸಿ. ಚಂದ್ರ ಎಸ್‌ಐಟಿಗೆ ದೂರು ನೀಡಿದ್ದಾರೆ. ಸೌಜನ್ಯ ಸಾವಿನ ನಂತರ ಧರ್ಮಸ್ಥಳದ ಮೂವರ ವಿರುದ್ಧ ಆರೋಪ ಮಾಡಲಾಗಿತ್ತು. ಅವರೂ ತನಿಖೆಗೆ ಒಳಪಟ್ಟು ಕ್ಲೀನ್‌ಚಿಟ್ ಪಡೆದಿದ್ದಾರೆ.

ಆದರೂ, ಈಗಲೂ ಅವರನ್ನು ಅವಮಾನಿಸಲಾಗುತ್ತಿದೆ. ಇದಲ್ಲದೆ, ಸೌಜನ್ಯ ತಾಯಿ ಕುಸುಮಾವತಿ ಅವರ ಪತಿ ಚಂದಪ್ಪ ಅವರನ್ನು ಧರ್ಮಸ್ಥಳ ಭಾಗದವರು ಸ್ಲೋ ಪಾಯಿಸನ್ ನೀಡಿ ಕೊಂದಿದ್ದಾರೆ ಎಂದು ಚಂದ್ರ ಆರೋಪಿಸಿದ್ದಾರೆ. ಆದರೆ, ಇದು ಸುಳ್ಳು ಆರೋಪವಾಗಿದ್ದು, ಚಂದಪ್ಪ ಅವರು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ಇದನ್ನು ಸರಿಯಾಗಿ ತನಿಖೆ ಮಾಡಬೇಕು ಎಂದು ದೂರು ನೀಡಲಾಗಿದೆ ಎಂದು ಚಂದ್ರ ತಿಳಿಸಿದ್ದಾರೆ. ದೂರಿಗೆ ಪೂರಕ ದಾಖಲೆಗಳನ್ನು ಒದಗಿಸಲಾಗಿದೆ. ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ..ಕಿಡಿಗೇಡಿಗಳ ಬಂಧನಕ್ಕೆ ಸ್ಥಳೀಯರು ಆಗ್ರಹ..!

ತಿಮರೋಡಿ ತಂಡದ ವಿರುದ್ಧ ದೂರು: ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಬುರುಡೇ ತಂಡದ ವಿರುದ್ಧ ಕೋಲಾರ ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ನಾಗರಾಜ್ ಅವರ ತಂಡವು ಶನಿವಾರ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ದೂರು ನೀಡಿದೆ. ತಿಮರೋಡಿ ತಂಡದ ವಿರುದ್ಧ ಕೋಕಾ, ಗೂಂಡಾ ಕಾಯ್ದೆ ಮತ್ತು ಗಡಿಪಾರು ಅಡಿಯಲ್ಲಿ ಕೇಸು ದಾಖಲಿಸುವಂತೆ ಆಗ್ರಹಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಯೂಟ್ಯೂಬರ್ ಸಮೀರ್, ಜಯಂತ್ ಸೇರಿ ಬುರುಡೇ ತಂಡವು ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿ ಷಡ್ಯಂತ್ರ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.