ಬೆಂಗಳೂರು: ನಿನ್ನೆ ಒಕ್ಕಲಿಗ ಸಮುದಾಯದ ವತಿಯಿಂದ ನಡೆದ ಸಭೆಯ ಕುರಿತು ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಕೆ ಶಿವಕುಮಾರ್ (DK Shivakumar)ಅಭಿಪ್ರಾಯ ಪಟ್ಟರು. ನಾನು ಸಹ ಸರ್ಕಾರದಲ್ಲಿದ್ದೇನೆ. ನಾನು ಸರ್ಕಾರದ ಭಾಗವಾಗಿದ್ದೇನೆ ಹಾಗಿದ್ದುಕೊಂಡು ಅವರವರ ಸಮುದಾಯದ ಕುರಿತು ಹೇಳಿಕೆ ಕೊಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು. ಜೊತೆಗೆ ಸಮಾಜದವರ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಏಕೆಂದರೆ ಅದು ಅವರ ಅಭಿಪ್ರಾಯ ಎಂದರು.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!
ದೆಹಲಿಗೆ (Delhi) ತೆರಳುವ ಮುನ್ನ ನಿನ್ನೆ ಆದಿಚುಂಚನಗಿರಿ ಮಠದಲ್ಲಿ ನಡೆದ ಒಕ್ಕಲಿಗ ಸಭೆಯ ಕುರಿತು ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲಎಂದು ತಿಳಿಸಿದರು. ಅದು ಅವರವರ ಸಮುದಾಯದ ಅಭಿಪ್ರಾಯ ಅದನ್ನು ನಾವು ಗೌರವಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಜಿಎಸ್‌ಟಿ ಸುಧಾರಣೆ: ಆರ್ಥಿಕ ಬೆಳವಣಿಗೆಗೆ ಚಾಲನೆ - ನಿರ್ಮಲಾ ಸೀತಾರಾಮನ್..!
ದೆಹಲಿ ಭೇಟಿಯ ಕುರಿತು ವಿಚಾರಿಸಿದಾಗ, ಕಾವೇರಿ ನೀರಿನ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ವಕೀಲರ ಬಳಿ ಚರ್ಚಿಸಲು ಹಾಗೂ ಒಂದಷ್ಟು ಕೆಲಸಗಳ ಕಾರಣಕ್ಕೆ ತೆರಳುತ್ತಿರುವೆ ಎಂದು ತಿಳಿಸಿದರು.The Indian Garage Co Men's Cotton Regular Fit Checkered Full Sleeves Cutaway Collar Casual Shirt