ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಈ ವರ್ಷದ ಆರಂಭದಲ್ಲಿ ವ್ಯಾಪಾರದ ಮೂಲಕ ಪರಿಹರಿಸಿದ್ದೇನೆ ಎಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ. ಅಲ್ಲದೇ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಹಾಗೆಯೇ ಜಾಗತಿಕ ವೇದಿಕೆಯಲ್ಲಿ, ನಾವು ಹಿಂದೆಂದೂ ಕಾಣದ ಗೌರವವನ್ನು ಪಡೆಯುತ್ತಿದ್ದೇವೆ. ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದೇವೆ ಮತ್ತು ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಗಳನ್ನು ನಾವು ನಿಲ್ಲಿಸಿದ್ದೇವೆ ಎಂದು ಟ್ರಂಪ್ ಶನಿವಾರ ಅಮೆರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರ ಭೋಜನಕೂಟದಲ್ಲಿ ಹೇಳಿದರು. JYESHTA Women's American Crepe Wrao Floral Printed Skirt with Ruffle Hem and Elastic Waistband Closure | Skirts for Woman
ಇನ್ನು ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಕಾಂಬೋಡಿಯಾ, ಅರ್ಮೇನಿಯಾ, ಅಜೆರ್‌ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ. ಇವೆಲ್ಲವನ್ನೂ ನಾವು ನಿಲ್ಲಿಸಿದ್ದೇವೆ. ಮತ್ತು ಇವುಗಳಲ್ಲಿ ಶೇಕಡಾ 60ರಷ್ಟು ಯುದ್ಧಗಳನ್ನು ವ್ಯಾಪಾರದ ಕಾರಣದಿಂದ ನಿಲ್ಲಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿಕೊಂಡಿದ್ದಾರೆ.
ಭಾರತದ ವಿಷಯದಲ್ಲಿ, ನಾನು ಹೀಗೆ ಹೇಳಿದೆ, 'ನೋಡಿ, ನೀವು ಹೋರಾಡುತ್ತಿದ್ದರೆ ನಾವು ಯಾವುದೇ ವ್ಯಾಪಾರ ಮಾಡುವುದಿಲ್ಲ, ಮತ್ತು ಅವರು ಅಣ್ವಸ್ತ್ರಗಳನ್ನು ಹೊಂದಿದ್ದಾರೆ. ಅವರು ನಿಲ್ಲಿಸಿದರು ಎಂದು ಟ್ರಂಪ್ ಸೇರಿಸಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ನಿಲ್ಲಿಸಲು ಸಾಧ್ಯವಾದರೆ, ತಮಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ತಮಗೆ ಹೇಳಲಾಯಿತು ಎಂದರು. ಶೀಘ್ರವೇ 20 ಸಾವಿರ ಶಿಕ್ಷಕರ ನೇಮಕ, ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆ: ಸಚಿವ ಮಧು ಬಂಗಾರಪ್ಪ
ನಾನು, ಬೇರೆ ಏಳು ಯುದ್ಧಗಳ ಬಗ್ಗೆ ಏನು? ನನಗೆ ಪ್ರತಿಯೊಂದಕ್ಕೂ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಕೇಳಿದೆ. ಆಗ ಅವರು, ನೀವು ರಷ್ಯಾ ಮತ್ತು ಉಕ್ರೇನ್ ಅನ್ನು ನಿಲ್ಲಿಸಿದರೆ, ಸರ್, ನಿಮಗೆ ನೊಬೆಲ್ ಸಿಗಬೇಕು ಎಂದು ಹೇಳಿದರು. ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದು ಒಂದು ಯುದ್ಧ, ಮತ್ತು ಅದು ದೊಡ್ಡದು ಎಂದು ಟ್ರಂಪ್ ತಿಳಿಸಿದರು.