ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ಸುಖೇಶ್ ಚಂದ್ರಶೇಖರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮನವಿಯನ್ನು ವಜಾಗೊಳಿಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶದಿಂದ ನಿರಾಶೆಗೊಂಡಿರುವ ನಟಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದಲ್ಲಿ ಜಾಕ್ಲಿನ್ ಹೆಸರು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ.Woodland Men Khaki Casual Shoes
ಪೂರ್ವದಲ್ಲಿ ನಡೆದಿದ್ದ ನ್ಯಾಯಾಲಯದ ವಿಚಾರಣೆಯಲ್ಲಿ, ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು ವಿಶೇಷ ನ್ಯಾಯಾಲಯವು ಈಗಾಗಲೇ ಪರಿಗಣಿಸಿತ್ತು. ಹೀಗಾಗಿ ಜಾಕ್ಲಿನ್ ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು ಎಂದು ಮೂಲಗಳು ತಿಳಿಸಿವೆ.ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ಒಲಿದ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್..ಮನದುಂಬಿ ಮೋದಿ ಹೇಳಿದ್ದೇನು?
ಸುಖೇಶ್ ಅವರಿಂದ ಜಾಕ್ವೆಲಿನ್ ಫರ್ನಾಂಡಿಸ್ ಪಡೆದ ಉಡುಗೊರೆಗಳನ್ನು ಅಪರಾಧದ ಹಣದಿಂದ ಖರೀದಿಸಲಾಗಿದೆ ಎಂದು ಜಾಕ್ವೆಲಿನ್ ವಕೀಲರು ವಾದಿಸಿದ್ದಾರೆ. ಹಣ ವರ್ಗಾವಣೆ ಅಥವಾ ವಂಚನೆಯೊಂದಿಗೆ ನಟಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದಿಂದ ಹೊರಬಂದು, ತಮ್ಮ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ತಮ್ಮ ವರ್ಚಸ್ಸನ್ನು ಶುದ್ಧೀಕರಿಸಲು ನಟಿ ಬಯಸಿದ್ದಾರೆ. ಹಲವಾರು ಉದ್ಯಮಿಗಳು ಸುಖೇಶ್ ವಿರುದ್ಧ ವಂಚನೆಯ ಆರೋಪ ಮಾಡಿದ್ದಾರೆ.
ಪ್ರಮುಖ ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ವಂಚನೆ ಮಾಡಿದ ಆರೋಪ ಸುಖೇಶ್ ಚಂದ್ರಶೇಖರ್ ಮೇಲಿದೆ. ತನಿಖೆಯ ವೇಳೆ, ಸುಖೇಶ್ ಜಾಕ್ವೆಲಿನ್ ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ಕಾರುಗಳು, ಆಭರಣಗಳು ಮತ್ತು ಡಿಸೈನರ್ ಬ್ರ್ಯಾಂಡ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಇಡಿ ಪತ್ತೆಹಚ್ಚಿತ್ತು.