ಮಾಜಿ ಶಾಸಕ ಹರತಾಳು ಹಾಲಪ್ಪ ಮಾತೃ ವಿಯೋಗ: ಬೆಂಗಳೂರಿನ ನಿವಾಸದಲ್ಲಿ ವಯೋಸಹಜ ನಿಧನ
ಬೆಂಗಳೂರು: ಹರತಾಳು ಹಾಲಪ್ಪ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಅವರು ಸಾಗರ ಕ್ಷೇತ್ರದಿಂದ 2 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಮತ್ತೊಂದೆಡೆ, ಅವರು ಜುಲೈ 28, 2020 ರಂದು MSIL ನ ಅಧ್ಯಕ್ಷರಾದರು. ಹಾಲಪ್ಪ ಅವರನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಸ್ಥಾನಕ್ಕೆ ಆಯ್ಕೆಮಾಡಲಾಯಿತು. 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಹಾಲಪ್ಪ ಮತ್ತೆ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದರು ಆದರೆ INC(ಕಾಂಗ್ರೆಸ್) ಅಭ್ಯರ್ಥಿ ಗೋಪಾಲಕೃಷ್ಣ ಬೂಳೂರು ವಿರುದ್ಧ ಸೋತರು.ಇದನ್ನು ಓದಿ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಸದ ಶಶಿಕಾಂತ್ ಸೆಂಥಿಲ್ ಹೂಡಿರುವ ಮಾನಹಾನಿ ದಾವೆ ವಿಚಾರ: ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್
ಈಗ ಹರತಾಳು ಹಾಲಪ್ಪನವರ ತಾಯಿ ಮಂಜಮ್ಮ ಹೀರೆ ನಾಯ್ಕ್ (91-ವರ್ಷ ) ನಿಧನರಾಗಿದ್ದಾರೆ. ಹರತಾಳು ಹಾಲಪ್ಪ ಸೇರಿದಂತೆ 12 ಮಕ್ಕಳನ್ನು ಹೊಂದಿದ್ದ ಮಂಜಮ್ಮನವರು. 9 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳನ್ನು ಹೊಂದಿದ್ದ ಮಂಜಮ್ಮನವರು. ಬೆಂಗಳೂರಿನ ನಿವಾಸದಲ್ಲಿ ವಯೋ ಸಹಜವಾಗಿ ನಿಧನ ಹೊಂದಿದ್ದಾರೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಭಾನುವಾರ ಮಧ್ಯಾನ 2 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಈ ಕುರಿತು ಮಾಹಿತಿ ಲಭ್ಯವಾಗಿದೆ.
ಹರತಾಳು ಹಾಲಪ್ಪ ಅವರ ಮಾತೃ ವಿಯೋಗದ ನಿಮಿತ್ತ ಹಲವಾರು ರಾಜಕಾರಣಿಗಳು ಮತ್ತು ಬಂಧುಬಾಂಧವರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.