Skip to main content
ವಿಡಿಯೋ
1/2
science

ವರ್ಷದ ಕೊನೆಯ ಸೂರ್ಯಗ್ರಹಣ ಇಂದು: ಭಾರತದಲ್ಲಿ ಗೋಚರಿಸದ ಅಪೂರ್ವ ಕ್ಷಣ

By Shravanthi R
ವರ್ಷದ ಕೊನೆಯ ಸೂರ್ಯಗ್ರಹಣ ಇಂದು: ಭಾರತದಲ್ಲಿ ಗೋಚರಿಸದ ಅಪೂರ್ವ ಕ್ಷಣ

ಭಾರತೀಯ ಕಾಲಮಾನದ ಅನುಸಾರ, ರಾತ್ರಿ ಸಮಯ 10.59 ಕ್ಕೆ ಗ್ರಹಣ ಶುರುವಾಗಲಿದ್ದು, ಮಧ್ಯರಾತ್ರಿಯ ಸಮಯದಲ್ಲಿ ಗರಿಷ್ಠ ಗ್ರಹಣ ಗೋಚರಿಸಲಿದೆ ಹಾಗೂ ಸೆ. 22 ರ ಮುಂಜಾನೆ 3 ರಷ್ಟೊತ್ತಿಗೆ ಗ್ರಹಣ ಮುಕ್ತಾಯಗೊಳ್ಳಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ

ಇಂದು ವರ್ಷದ ಕೊನೆಯ ಸೂರ್ಯಗ್ರಹಣ ಎನ್ನಲಾಗಿದೆ. ಈ ಪ್ರಾಕೃತಿಕ ಸೃಷ್ಟಿದರ್ಶನವನ್ನು ವೀಕ್ಷಿಸಲು ವಿಶ್ವದಾದ್ಯಂತ ಸ್ಕೈವಾಚರ್ಸ್‌ ಕಾತುರರಾಗಿದ್ದಾರೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದ ಸಂದರ್ಭದಲ್ಲಿ ಸೂರ್ಯನ ಬೆಳಕು ಭೂಮಿ ಮೇಲೆ ಬೀಳದಂತೆ ತಡೆವ ಪ್ರಕ್ರಿಯೆಯೇ ಸೂರ್ಯಗ್ರಹಣವಾಗಿದೆ.

ಇಂದು ಯಾವೆಲ್ಲಾ ಕಡೆ ಸೂರ್ಯಗ್ರಹಣ ಗೋಚರಿಸಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಇದು ಸೂರ್ಯನ ಪ್ರಖರ ಚಕ್ರವನ್ನು ಮರೆಮಾಚಲಿದ್ದು, ಚಂದ್ರನು ಸೂರ್ಯನನ್ನು ಭಾಗಶಃ ಮರೆಮಾಚುವ ಅಪೂರ್ವ ದೃಶ್ಯವಿದಾಗಿದೆ. ಖಗ್ರಾಸ ಅಥವಾ ಖಂಡಗ್ರಾಸ ಸೂರ್ಯಗ್ರಹಣವೆಂದು ಗುರುತಿಸಿಕೊಂಡಿದೆ ಎನ್ನಲಾಗಿದೆ. 

ಶತಮಾನಗಳ ಕಾಲ ಈ ವಿದ್ಯಮಾನವು ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳ ಸಂಕೇತವೆನ್ನಲಾಗಿದೆ. ಈ ಬಾರಿಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ, ಭಾರತೀಯ ಕಾಲಮಾನದ ಅನುಸಾರ, ರಾತ್ರಿ ಸಮಯ 10.59 ಕ್ಕೆ ಗ್ರಹಣ ಶುರುವಾಗಲಿದ್ದು, ಮಧ್ಯರಾತ್ರಿಯ ಸಮಯದಲ್ಲಿ ಗರಿಷ್ಠ ಗ್ರಹಣ ಗೋಚರಿಸಲಿದೆ ಹಾಗೂ ಸೆ. 22 ರ ಮುಂಜಾನೆ 3 ರಷ್ಟೊತ್ತಿಗೆ ಗ್ರಹಣ ಮುಕ್ತಾಯಗೊಳ್ಳಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. TheGiftKart Hybrid Shockproof Back Cover Case for OnePlus Nord 5 5G | Hard Back Cover Case for OnePlus Nord 5 5G (PC & TPU, Translucent Smoke Matte Back, Black Sides)

ಈ ಬಾರಿ ಪಿತೃಪಕ್ಷ ಅಮಾವಾಸ್ಯೆದಿನದಂದು ಈ ಖಗೋಳ ವಿಸ್ಮಯ ಉಂಟಾಗಲಿದೆ. ಗ್ರಹಣವನ್ನು ಭಾರತವಲ್ಲದೇ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಅಂಟಾರ್ಟಿಕಾ, ಫೆಸಿಫಿಕ್‌ ಹಾಗೂ ಅಂಟ್ಲಾಂಟಿಕ್‌ ಮಹಾಸಾಗರ ಪ್ರದೇಶದ ಜನರು ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು. ಬರಿಗಣ್ಣಿನಲ್ಲಿ ವೀಕ್ಷಿಸದೇ ಇದ್ದರೆ ಸೂಕ್ತ. ಸೂರ್ಯಕಿರಣಗಳ ಪ್ರಖರ ಬೆಳಕು ದೃಷ್ಟಿಹಾನಿಗೆ ಕಾರಣವಾಗಬಹುದು ಆದ್ದರಿಂದ ಗ್ರಹಣ ವೀಕ್ಷಣಾ ಉಪಕರಣ ಅಥವಾ ಅಪಾಯಕಾರಿ ಅತಿನೇರಳೆ ಕಿರಣ ಮತ್ತು ಇನ್‍ಫ್ರಾ ರೆಡ್ ವಿಕಿರಣವನ್ನು ತಡೆಯುವ ಐಎಸ್‍ಓ 12312-2 ಗ್ರಹಣ ವೀಕ್ಷಣಾ ಗಾಜನ್ನು ನಾಜೂಕಿನಿಂದ ಬಳಸುವುದು ಸೂಕ್ತವಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ದಸರಾ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ 2300 ಹೆಚ್ಚುವರಿ ಬಸ್‌ಗಳು: ರಾಜ್ಯದಾದ್ಯಂತ ಸೇವೆ