ಸರಿ ಇರುವ ತೀರ್ಪುಗಳನ್ನೂ ಪ್ರಶ್ನಿಸುವ ಸರ್ಕಾರಿ ಇಲಾಖೆಗಳ ರೂಢಿ ತಪ್ಪಬೇಕು: ಕಾನೂನು ಸಚಿವ ಮೇಘವಾಲ್ ಹೇಳಿಕೆ
ನ್ಯಾಯಾಲಯ & ನ್ಯಾಯಮಂಡಳಿಗಳು ನೀಡಿದ್ದ ಆದೇಶ ಕಾನೂನುಬದ್ಧವಾಗಿ ಸರಿಯಾಗಿದ್ದರೂ, ಸರ್ಕಾರಿ ಇಲಾಖೆಗಳು ವಾಡಿಕೆಯಂತೆ ಪೂರ್ವನಿಯೋಜಿತವಾಗಿ ಮೇಲ್ಮನವಿ ಸಲ್ಲಿಸುತ್ತಿವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಶನಿವಾರ ಟೀಕಿಸಿದ್ದಾರೆ. 2025ರ ಕೇಂದ್ರ ಆಡಳಿತ ನ್ಯಾಯಮಂಡಳಿಯ 10 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಇದನ್ನು ಓದಿ: “ನಮೋ ಯುವ ರನ್”: 75 ನಗರಗಳ ರಸ್ತೆಗಳಲ್ಲಿ ಮ್ಯಾರಥಾನ್ ಓಟ: ಸಂಸದ ತೇಜಸ್ವಿ ಸೂರ್ಯ, ಮಹಾರಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಬಾಗಿ
ಇಲಾಖೆಗಳು ಮತ್ತು ಸೇವೆಯಲ್ಲಿರುವ ಅಧಿಕಾರಿಗಳು ಪ್ರತಿಯೊಂದು ಆದೇಶವನ್ನು ನಿಯಮಿತ ವಿಷಯವಾಗಿ ಪ್ರಶ್ನಿಸುತ್ತಾ ಬಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿ ನಿವೃತ್ತರಾದ ಬಳಿಕ ಆ ಸ್ಥಾನಕ್ಕೆ ಬರುವ ಮತ್ತೊಬ್ಬ ಅಧಿಕಾರಿ, ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸುತ್ತಾರೆ ಎಂದು ಮೇಘವಾಲ್ ಹೇಳಿದರು. ಈ ರೂಢಿಯನ್ನು ಸರಿಪಡಿಸಿಕೊಳ್ಳಬೇಕಿದೆ ಮತ್ತು ಯಾಂತ್ರಿಕವಾಗಿ ಮನವಿ ಸಲ್ಲಿಸುವ ಪ್ರವೃತ್ತಿಯನ್ನು ಮರುಪರಿಶೀಲಿಸಬೇಕಿದೆ ಎಂದು ಅವರು ಹೇಳಿದರು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಈ ಸಮಯದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಕೂಡ ಸಭೆಯಲ್ಲಿ ಮಾತನಾಡಿದರು.