Skip to main content
ವಿಡಿಯೋ
1/2
general

ಧರ್ಮಸ್ಥಳದಲ್ಲಿ ನವರಾತ್ರಿ ಸಂಭ್ರಮ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ!

By Shravanthi R
 ಧರ್ಮಸ್ಥಳದಲ್ಲಿ ನವರಾತ್ರಿ ಸಂಭ್ರಮ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ!

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ವಿವಿಧ ಭಕ್ತಿ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರವಚನ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

  • ಸೆಪ್ಟೆಂಬರ್ 22 ರಂದು ಮಾಸ್ಟರ್ ಅಶ್ಮಿತ್ ಮಂಗಳೂರು ಅವರಿಂದ ಭಕ್ತಿ ಸಂಗೀತ

  • ಸೆಪ್ಟೆಂಬರ್ 23 ರಂದು ವಿದ್ಯಾ ಎಸ್. ರಾವ್ ಬಳಗ ಉಡುಪಿ ಅವರಿಂದ ಶಾಸ್ತ್ರೀಯ ಸಂಗೀತ ಸೆಪ್ಟೆಂಬರ್ 24 ರಂದು ಅನಘಾ ಅವಧೂತ್ ಬೆಳಗಾವಿ ಅವರಿಂದ ಸಿತಾರ್ ವಾದನ ಕಾರ್ಯಕ್ರಮಗಳು ಇವೆ.

  • ಸೆಪ್ಟೆಂಬರ್ 25 ರಂದು ಶ್ರೀವಿದ್ಯಾ ಉಜಿರೆ ಅವರಿಂದ ಶಾಸ್ತ್ರೀಯ ಸಂಗೀತ

  • ಸೆಪ್ಟೆಂಬರ್ 26 ರಂದು ಸಿಂಚನಾ ಎಂ. ಗೌಡ ಬಳಗ ಪುತ್ತೂರು ಅವರಿಂದ ಭಕ್ತಿ ರಸಮಂಜರಿ ಸೆಪ್ಟೆಂಬರ್ 27 ರಂದು ಚಂದ್ರಿಕಾ ರಾಜಾರಾಮ್ ಬೆಂಗಳೂರು ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

  • ಸೆಪ್ಟೆಂಬರ್ 28 ರಂದು ಅನುರಾಧ ಭಟ್ ಅಡ್ವಸ್ಥಳ, ಕೇಪು, ವಿಟ್ಲ ಅವರಿಂದ ಶಾಸ್ತ್ರೀಯ ಸಂಗೀತ

  • ಸೆಪ್ಟೆಂಬರ್ 29 ರಂದು ಶ್ರೀಲಕ್ಷ್ಮಿ ಬೆಳ್ಳಣ್ಣು, ಬೆಂಗಳೂರು ಅವರಿಂದ ಶಾಸ್ತ್ರೀಯ ಸಂಗೀತ ಸೆಪ್ಟೆಂಬರ್ 30 ರಂದು ನವ್ಯ ಎಂ. ಆರ್. ಹಾಗೂ ಬಳಗ ಪುತ್ತೂರು ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಆಯೋಜಿತವಾಗಿವೆ.

  • ಅಕ್ಟೋಬರ್ 1 ರಂದು ಸಂಜೆ 6:30 ರಿಂದ 8:30 ರವರೆಗೆ ಆರಾಧ್ಯ ರಾವ್ ಬೆಂಗಳೂರು ಅವರಿಂದ ಭಕ್ತಿ ರಸಮಂಜರಿ ಹಾಗೂ ರಾತ್ರಿ 9 ರಿಂದ 11:30 ರವರೆಗೆ ಕ್ಷಿತಿ ರೈ ಧರ್ಮಸ್ಥಳ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಜಿರೆಯ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರಕ್ಕೆ ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸೆಪ್ಟೆಂಬರ್ 21 ರಂದು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕೀರ್ತಿಶೇಷ ಕಿನ್ನಮ್ಮ ಯಾನೆ ಗುಣವತಿ ಅಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ 700 ವಿದ್ಯಾರ್ಥಿಗಳಿಗೆ ಒಟ್ಟು 25 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. Pikkme OnePlus Nord (2020) Back Cover | D5 Tough Armor Bumper | 360 Protection Case | Ring Holder Stand Case for OnePlus Nord (2020) (Black)

ಬಸದಿಯ ಅನುವಂಶಿಕ ಆಡಳಿತ ಮೊಕೇಸರ ಕೆ. ಜಯವರ್ಮರಾಜ್ ಬಳ್ಳಾಳ್ ಈ ಮಾಹಿತಿ ನೀಡಿದ್ದು, ಅಂದು ಬೆಳಗ್ಗೆ 7 ಗಂಟೆಯಿಂದ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಕಲಶಾಭಿಷೇಕ ನೆರವೇರಲಿದೆ. ಬಸದಿ ಆಡಳಿತ ಮೊಕ್ತಸರರಾಗಿದ್ದ ಕೆಲ್ಲಗುತ್ತು ಸಬ್ರಬೈಲು ಕಿನ್ನಮ್ಮ ಯಾನೆ ಗುಣವತಿ ಅಮ್ಮ ಅವರ ವಾರ್ಷಿಕ ಸ್ಮರಣಾರ್ಥ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೂರು ಬಸದಿಗಳಲ್ಲಿ ನವಕಲಶಾಭಿಷೇಕ, ಮಹಾಪೂಜೆ ಮತ್ತು ಪದ್ಮಾವತಿ ಅಮ್ಮನವರಿಗೆ ಅಲಂಕಾರಪೂಜೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸ್ವಾಮೀಜಿ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮಾಡಲಿದ್ದು, ಬಸದಿಯ ಅನುವಂಶಿಕ ಆಡಳಿತ ಮೊಕ್ತಸರ ಕೆ. ಜಯವರ್ಮರಾಜ್ ಬಳ್ಳಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದನ್ನೂ ಓದಿ: “ನಮೋ ಯುವ ರನ್‌”: 75 ನಗರಗಳ ರಸ್ತೆಗಳಲ್ಲಿ ಮ್ಯಾರಥಾನ್‌ ಓಟ: ಸಂಸದ ತೇಜಸ್ವಿ ಸೂರ್ಯ, ಮಹಾರಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಭಾಗಿ