Skip to main content
ವಿಡಿಯೋ
1/2
crime

ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರಿಂದ ಲೈಂಗಿಕ ಕಿರು**ಕುಳ - ಎಫ್‌ಐಆರ್‌ ದಾಖಲು

By Shravanthi R
ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರಿಂದ ಲೈಂಗಿಕ ಕಿರು**ಕುಳ - ಎಫ್‌ಐಆರ್‌ ದಾಖಲು

ಉನ್ನತ ಶಿಕ್ಷಣ ಪಡೆವ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರಿಂದಲೇ ಅಸಭ್ಯ ವರ್ತನೆ ಬಗ್ಗೆ ಸುದ್ದಿಯಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದು ಅಪರಾಧಿಗಳಿಗೆ ಸಂದುವ ಪಾಠವೆನ್ನಬಹುದು.

ಬೆಂಗಳೂರು - ಸಹ ಅತಿಥಿ ಉಪನ್ಯಾಸಕಿ ಮೇಲೆ ಲೈಂಗಿಕ ಕಿರುಕುಳದ ಆರೋಪದಡಿ, ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಜ್ಞಾನಭಾರತಿಯ ಬೆಂ. ವಿವಿಯ ಸ್ನಾತಕೋತ್ತರ ಕೇಂದ್ರ, ರಾಮನಗರ ವಿಭಾಗದ ಲೆಕ್ಷರರ್ಸ್‌ಗಳಾದ ರಾಮಾಂಜನೇಯ, ಜಗನ್ನಾಥ, ರಂಗಸ್ವಾಮಿ, ಸ್ವರೂಪ್‌ ಕುಮಾರ್‌ ಹಾಗೂ ಶಿವರಾಮ್‌ ಎಂಬುವವರ ವಿರುದ್ದ ಜ್ಞಾನಭಾರತಿ ಪೋಲಿಸ್‌ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣವು ರಾಮನಗರದ ಐಜೂರು ಪೋಲಿಸ್‌ ಠಾಣೆಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಉಪನ್ಯಾಸಕಿ ನೀಡಿರುವ ದೂರಿನ ಪ್ರಕಾರ, ಅವರು ಬಹುದಿನಗಳಿಂದ ಮಾನಸಿಕ ಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದರು. ಈ ಹಿಂದೆಯೂ ದೂರು ನೀಡಿದ್ದಾದರೂ, ಇಲ್ಲಸಲ್ಲದ ಆರೋಪದಿಂದ ಕೆಲಸದಿಂದ ತೆಗೆಸಿದ್ದರು. ಅವ್ಯಾಚ ಶಬ್ದಗಳಿಂದ ನಿಂದಿಸಿ, ಲೈಂಗಿಕವಾಗಿ ಬಳಸಿಕೊಳ್ಳುವುದರ ಬಗ್ಗೆ ಸಹಕರಿಸಬೇಕು; ಇಲ್ಲವಾದಲ್ಲಿ ಅಪಹರಣ ಬೆದರಿಕೆಗಳನ್ನು ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.  XTRENGTH Advanced HD+ Gorilla Tempered Glass Screen Protector Designed for OnePlus Nord 5 5G - Edge to Edge Full Screen Coverage with Easy Installation Kit (Anti-Scratch)


ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಉಪನ್ಯಾಸಕರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವರು ಅನುಚಿತವಾಗಿ ನಡೆದುಕೊಂಡಿರುವ, ಮೋಜು- ಮಸ್ತಿಯಿಂದ ಕುಪ್ಪಳಿಸುವ ದೃಶ್ಯಾವಳಿಗಳು ಟೀಕೆಗೊಳಗಾಗಿದೆ. ವಿವಿಯ ಅಂಬೇಡ್ಕರ್‌ ಜಯಂತಿಯ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿ, ಬಟ್ಟೆ ಬಿಚ್ಚಿ ಹುಚ್ಚಾಟ ಮೆರೆದಿರುವ ವಿಡಿಯೋಗಳೂ ವೈರಲ್‌ ಆಗಿದೆ. ಇದನ್ನೂ ಓದಿ: ಮತಕಳವು ಪ್ರಕರಣ - ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ ಬುಲಾವ್‌