Skip to main content
ವಿಡಿಯೋ
1/2
politics

ಮುಲ್ಲಾದಿಂದ ಪಾದ್ರಿ ತನಕ: ಸಿದ್ದರಾಮಯ್ಯನವರ ಕುರಿತು ಶಾಸಕ ಸುನೀಲ್ ಕುಮಾರ್ ವ್ಯಂಗ್ಯ.!

By Shravanthi R
ಮುಲ್ಲಾದಿಂದ ಪಾದ್ರಿ ತನಕ: ಸಿದ್ದರಾಮಯ್ಯನವರ ಕುರಿತು ಶಾಸಕ ಸುನೀಲ್ ಕುಮಾರ್ ವ್ಯಂಗ್ಯ.!

ಉಡುಪಿಯಲ್ಲಿ ಮಾತನಾಡಿದ ಶಾಸಕರು, 47 ಹಿಂದೂ ಉಪಜಾತಿಗಳನ್ನು ಕ್ರಿಶ್ಚಿಯನ್‌ ಜೊತೆಗೆ ಸೇರಿಸಲಾಗಿದೆ. ಅದನ್ನು ಕೈಬಿಡದಿದ್ದರೆ ಹೋರಾಟ ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿಗಣತಿ ವಿಚಾರವಾಗಿ ಕರ್ನಾಟಕದ ಪೋಪ್‌ ಆಗಲು ಹೊರಟಿದ್ದಾರೆ ಎಂದು ವ್ಯಂಗೀಕರಿಸಿ, ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಇಂದು ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿವಸ ಮುಲ್ಲಾ ಆಗಿದ್ದ ಸಿಎಂ ಇದೀಗ ಫಾದರ್‌ ಆಗುವಂತಿದ್ದಾರೆ. ಸಿಎಂ ಕಚೇರಿ ಕ್ರೈಸ್ತ ಮಿಷನರಿಗಳ ಅಡಿಯಲ್ಲಿ ಕೆಲಸ ಮಾಡುವಂತಿದೆ. ಕಾಂಗ್ರೆಸ್‌ ಯಾವಾಗಲೂ ಗೊಂದಲದಲ್ಲೇ ಇರುವುದು, ಸಚಿವ ಸಂಪುಟದಲ್ಲಿ ಸಿಎಂ ಏಕಾಂಗಿಯಾಗಿದ್ದಾರೆ ಉಳಿದವರು ಒಳಪಂಗಡಗಳಾಗಿದ್ದಾರೆ ಎಂದು ಎನ್ನುವ ಮೂಲಕ ಅವರನ್ನು ಟೀಕೆ ಮಾಡಿದ್ದಾರೆ ಎನ್ನಲಾಗಿದೆ. 

ನಗರದಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರು, ಟಿಪ್ಪು ಪೋಷಾಕು ತೊಟ್ಟಿದ್ದಾಯಿತು ಇದೀಗ ಪಾದ್ರಿ ರೂಪ ತಾಳಿದ್ದಾರೆ. ಕ್ರಿಶ್ಚಿಯನ್‌ ಗರ್ಭಗುಡಿಯಲ್ಲಿ ರಾಜಕೀಯ ಮಾಡಹೊರಟು, ಕರ್ನಾಟಕದ ಪೋಪ್‌ ಆಗ ಬಯಸಿದ್ದಾರೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ತರಾತುರಿಯಲ್ಲಿ ಇದೀಗ ಪೂರ್ವಸಿದ್ದತೆ ನಡೆಸದೆ, ಗಣತಿ ಮಾಡಲಾಗುತ್ತಿದೆ. 47 ಹಿಂದೂ ಉಪಜಾತಿಗಳನ್ನು ಕ್ರಿಶ್ಚಿಯನ್‌ ಜೊತೆಗೆ ಸೇರಿಸಲಾಗಿದೆ. ಅದನ್ನು ಕೈಬಿಡದಿದ್ದರೆ ಹೋರಾಟ ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

ಅವರು ಸಂವಿಧಾನವನ್ನು ಅರ್ಥ ಮಾಡಿಕೊಂಡಿದ್ದಾರೆ, ಆದರೆ ಸರ್ಕಾರ ಎಲ್ಲಾ ಮುಲ್ಲಾ, ಪಾದ್ರಿಗಳ ಕೈಗೊಂಬೆಯಂತಾಗಿದೆ. ಅವರು ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಸಾಮಾಜಿಕ ನ್ಯಾಯದ ಆಶಯದಲ್ಲಿ ಶಿಲುಬೆಯೇರಿ, ದಲಿತ, ಒಬಿಸಿ ಮತಾಂತರಕ್ಕೆ ಕೈಹಾಕಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕ್ರಿಶ್ಚಿಯನ್‌ 75 + ಉಪಜಾತಿಗಳ ಅಧಿಕೃತ ಪ್ರಕಟಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. TheGiftKart Crystal Clear Back Cover Case for OnePlus Nord 5 5G | 360 Degree Protection | Shock Proof Design | Transparent Back Cover Case for OnePlus Nord 5 5G (PC & TPU, Transparent Bumper)

ಕಾಂಗ್ರೆಸ್‌ ಒಳಗೆ ಒಳಪಂಗಡಗಳಾಗಿವೆ - 

ಸಿದ್ದರಾಮಯ್ಯ ನಮಗೆ ಮರೆತು ಹೋಗಿದ್ದಾರೆ. ಅವರು ಏಕಾಂಗಿಯಾಗಿದ್ದಾರೆ. ಸಚಿವ ಸಂಪುಟವು ಒಡೆದು ಹೋಗಿದೆ. ಕಾಂಗ್ರೆಸ್‌ ಪಕ್ಷದೊಳಗೆ ಗೊಂದಲಗಳಿವೆ. ಸಿದ್ದರಾಮಯ್ಯ, ಡಿಕೆಶಿ, ಜಾರಕಿಹೊಳಿ, ಪರಮೇಶ್ವರ್‌, ಸುರ್ಜೆವಾಲ ಹೀಗೆ ಪಂಗಡಗಳಾಗಿದೆ. ನವೆಂಬರ್‌ ಡಿಸೆಂಬರ್‌ ಬೆಳವಣಿಗೆಯಿಂದ ಕಾಂಗ್ರೆಸ್‌ ಒಳಗೆ ಐದು ಒಳಪಂಡಗಗಳಾಗಿದೆ ಎಂದವರು ನುಡಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಯಿರಿ: ಅರವಿಂದ ಬೆಲ್ಲದ..!