ತಿರುಪತಿ: ಸಪ್ತಗಿರಿ ಶ್ರೀನಿವಾಸನ ಸನ್ನಿದಿಯಲ್ಲಿ ಬರೋಬ್ಬರಿ ಹಣ ಲೂಟಿಯಾಗಿದೆ. ವೈಎಸ್ ಜಗನ್‌ಮೋಹನ್ ಅವರ ಅಧಿಕಾರವಧಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ದೈವಭಕ್ತರಿಗೆ ಪಂಗನಾಮ ಬಿದ್ದಿದೆ. ಈ ಬಗ್ಗೆ ಬಿಜೆಪಿ ನಾಯಕ ಭಾನುಪ್ರಕಾಶ್ ರೆಡ್ಡಿ ಅವರು ದೂರಿದ್ದಾರೆ. ಸಿಸಿಟಿವಿಯಲ್ಲಿನ ದೃಶ್ಯಾವಳಿಯು ಅಲ್ಲಿನ ರಾಜಕೀಯ ಪಾಳಯದಲ್ಲಿ ಚರ್ಚೆಗೀಡು ಮಾಡಿದೆ ಎನ್ನಲಾಗಿದೆ.
ಖಜಾನೆಯನ್ನು ರಕ್ಷಿಸಬೇಕಾದವರೇ ಭಕ್ಷಕರಾಗಿದ್ದಾರೆಂದು ದೂರಿರುವ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಸದಸ್ಯರು, ದೇವಾಲಯ ಸಿಬ್ಬಂದಿ ರವಿಕುಮಾರ್ ಅವರು ಹಣವನ್ನು ಕದ್ದಿದ್ದಾರೆ. ಕದ್ದ ಹಣವನ್ನು ರಿಯಲ್ ಎಸ್ಟೇಟ್‌ಗೆ ಹೂಡಿದ್ದು, ಜಗನ್ ಮೋಹನ್‌ರ ಮನೆ ಹಾಗೂ ತಾಡೆಪಲ್ಲಿ ಪ್ಯಾಲೆಸ್‌ಗೆ ಅಕ್ರಮ ಹಣವನ್ನು ವರ್ಗಾಯಿಸಲಾಗಿದೆ ಎನ್ನಲಾಗಿದೆ.
ಟಿಟಿಡಿಯ ಇತಿಹಾಸದಲ್ಲಿ ಇಲ್ಲಿವರೆಗೂ ನೂರಾರು ಕೋಟಿಗೂ ಅಧಿಕ ಹಣವನ್ನು ಪರಕಾಮಣಿ(ಹುಂಡಿ ಹಣ) ದಿಂದ ಎಗರಿಸಲಾಗಿದೆ ಎನ್ನಲಾಗಿದೆ. 2019 ರಿಂದಲೂ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಆಡಳಿತದಲ್ಲಿ ಭಕ್ತರು ಕಾಣಿಕೆಯಾಗಿ ಹುಂಡಿಗೆ ಹಾಕಿದ್ದ ಹಣವನ್ನು ಲೂಟಿ ಮಾಡಲಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿರುವ ಟಿಡಿಪಿ ನಾಯಕ ನಾರಾ ಲೋಕೇಶ್ , ತಮ್ಮ ಎಕ್ಸ್ ಖಾತೆಯಲ್ಲಿ ಕಳ್ಳತನ ಮಾಡುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. Amazon Basics Back Cover for Oneplus Nord 5 5G | Crystal Clear Transparent Back | Ultra Hyrbid | Full Camera Protection | Raised Edge | Bumper Cover (Black)
ಪ್ರಕರಣವನ್ನು ಹೈಕೋರ್ಟ್‌ನಿಂದ ಸಿಐಡಿಗೆ ವರ್ಗಾಯಿಸಿದ್ದು, ದೇವಸ್ಥಾನ ಮಂಡಳಿಯಿಂದ ದಾಖಲೆಗಳು ಹಾಗೂ ಸಂಬಂಧಿತ ನಿರ್ಧಾರಗಳನ್ನು ತಿಳಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಇದರೊಟ್ಟಿಗೆ ಒಂದು ತಿಂಗಳೊಳಗೆ ಮುಚ್ಚಿದ ಕವರ್ ವರದಿ ಹಾಗೂ ತನಿಖೆಗೆ ಆದೇಶಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ತುಮಕೂರು ದಸರಾ 2025: ನಂದಿ ಧ್ವಜ ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಿದ ಗೃಹ ಸಚಿವ ಪರಮೇಶ್ವರ್..