ದಸರಾ ಹಬ್ಬ ಸಮೀಪಿಸುತ್ತಿದ್ದರೂ ಗದಗ ಜಿಲ್ಲೆಯ ರೈತರಿಗೆ ಹೂವಿನ ಬೆಲೆ ಕುಸಿತದ ಆಘಾತ ಎದುರಾಗಿದೆ. ಸೇವಂತಿ, ಗುಲಾಬಿ, ಚೆಂಡು ಹೂವುಗಳ ದರದಲ್ಲಿ ತೀವ್ರ ಕುಸಿತವಾಗಿದ್ದು, ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಹೂವಿನಂತೆ ಅರಳಬೇಕಿದ್ದ ಅವರ ಬದುಕು ಈಗ ಬಾಡಿದೆ. ನಾಡಹಬ್ಬಕ್ಕೆ ಉತ್ತಮ ಬೆಲೆ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಗದಗ ರೈತರು, ಹೂವಿನ ಮಾರುಕಟ್ಟೆಗೆ ಆಗಮಿಸಿ ನಿರಾಸೆಗೊಂಡಿದ್ದಾರೆ. ಅತಿವೃಷ್ಟಿಯಿಂದ ಹೂವುಗಳ ಗುಣಮಟ್ಟ ಕಡಿಮೆಯಾಗಿದ್ದು, ಇದು ರಫ್ತಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ ಪಾತಾಳಕ್ಕಿಳಿದಿದೆ.
ಗದಗ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ ಆಘಾತಕಾರಿಯಾಗಿದೆ. ಸೇವಂತಿ ಕೆ.ಜಿ.ಗೆ ₹20-₹30, ಚೆಂಡು ಹೂವು ಕೆ.ಜಿ.ಗೆ ₹10-₹20, ಗುಲಾಬಿ ₹100-₹120, ಮಲ್ಲಿಗೆ ಕೆ.ಜಿ.ಗೆ ₹300 ಹಾಗೂ ಸುಗಂಧಿ ರಾಜಾ ಕೆ.ಜಿ.ಗೆ ₹80ಕ್ಕೆ ಮಾರಾಟವಾಗುತ್ತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಇದೇ ಹೂವುಗಳು ಕೆ.ಜಿ.ಗೆ ₹300-₹400ರವರೆಗೆ ಮಾರಾಟವಾಗಿದ್ದವು. ನಾಡಹಬ್ಬಕ್ಕೂ ಇದೇ ರೀತಿಯ ದರ ಸಿಗುವ ನಿರೀಕ್ಷೆಯಲ್ಲಿದ್ದ ರೈತರು ಈಗ ಕಣ್ಣೀರು ಹಾಕುವಂತಾಗಿದೆ. ಭಾನುವಾರದ ಮಹಾಲಯ ಅಮಾವಾಸ್ಯೆಗೂ ಉತ್ತಮ ಬೆಲೆ ಸಿಗಲಿಲ್ಲ. Zeneme Traditional Brass 18 K Gold Plated Wedding Jewellery Bahubali Inspired Long Chain Jhumki Earrings for Women and Girl
ಗದಗ ತಾಲೂಕಿನ ಲಕ್ಕುಂಡಿ, ಕದಂಪೂರ, ಶಿರುಂಜ್, ಪಾಪನಾಶಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೂವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅತಿ ಮಳೆಯಿಂದಾಗಿ ಹೂವುಗಳು ತಮ್ಮ ಗುಣಮಟ್ಟ ಕಳೆದುಕೊಂಡಿದ್ದು, ಹೊರ ರಾಜ್ಯಗಳಿಗೆ ರಫ್ತು ಅಸಾಧ್ಯವಾಗಿದೆ. ಇದರಿಂದ ಗದಗ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ ತೀವ್ರ ಕುಸಿತ ಕಂಡಿದೆ. ಒಂದು ಎಕರೆ ಹೂವಿನ ಬೆಳೆ ಬೆಳೆಯಲು ₹1 ಲಕ್ಷದಿಂದ ₹1.50 ಲಕ್ಷದವರೆಗೆ ಖರ್ಚು ಮಾಡಿದ್ದೇವೆ.
ಆದರೆ ಲಾಭ ಹೋಗಲಿ, ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇತರ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿದ್ದು, ಈಗ ಹೂವಿನ ಬೆಲೆಯೂ ಕುಸಿದಿದೆ. ದೇಶದಲ್ಲಿ ರೈತರ ಸಂಕಷ್ಟಕ್ಕೆ ಯಾರೂ ಕಿವಿಕೊಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಹೊಸ GST ದರಗಳು...ತೆರಿಗೆದಾರರು ತಿಳಿಯಲೇಬೇಕಾದ 10 ಪ್ರಮುಖ ಅಂಶಗಳು!
ಗದಗ ಜಿಲ್ಲೆಯ ಹಲವು ರೈತರು ತಲಾ ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಹೂವು ಬೆಳೆದಿದ್ದಾರೆ. ಕೆಲವರು ₹5 ಲಕ್ಷದಿಂದ ₹7 ಲಕ್ಷದವರೆಗೆ ಹಣ ಖರ್ಚು ಮಾಡಿದ್ದಾರೆ. ಹೂವಿನ ತೋಟಗಳು ಒಣಗುತ್ತಿರುವುದನ್ನು ಕಂಡು ರೈತರು ಮಾನಸಿಕವಾಗಿ ನಲುಗಿ ಹೋಗಿದ್ದಾರೆ. ಹೂವಿನೊಂದಿಗೆ ಅವರ ಬದುಕೂ ಬಾಡುತ್ತಿದೆ. ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.