Skip to main content
ವಿಡಿಯೋ
1/3
cinema

'ನಮಗೆ ನ್ಯಾಯ ಕೊಡಿಸುವವರ್‍ಯಾರೂ ಇಲ್ಲವೇ? ಕಣ್ಣೀರಿಟ್ಟ ನಟಿ ಸ್ವರ್ಣ...ಕೊತ್ತಲವಾಡಿ ತಂಡ ಮಾಡಿದ್ದೇನು ಗೊತ್ತಾ?

By Ram Chethan
'ನಮಗೆ ನ್ಯಾಯ ಕೊಡಿಸುವವರ್‍ಯಾರೂ ಇಲ್ಲವೇ? ಕಣ್ಣೀರಿಟ್ಟ ನಟಿ ಸ್ವರ್ಣ...ಕೊತ್ತಲವಾಡಿ ತಂಡ ಮಾಡಿದ್ದೇನು ಗೊತ್ತಾ?

ನಟಿಯರು ಸಂಭಾವನೆ ಸಿಕ್ಕದೆ ತಮ್ಮ ಭವಿಷ್ಯ ಹಾಳಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋವನ್ನು ಹಂಚಿಕೊಂಡಿದ್ದಾರೆ. ‘ಕೊತ್ತಲವಾಡಿ’ ಚಿತ್ರ ಮತ್ತು ನಿರ್ಮಾಪಕರ ವಿರುದ್ಧ ತಮ್ಮ ಆರೋಪವನ್ನು ಸ್ಪಷ್ಟಪಡಿಸಿದ್ದಾರೆ.

ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಈಗ ಸಂಭಾವನೆ ವಿವಾದದಿಂದ ಸುದ್ದಿಯಲ್ಲಿದೆ. ಮೊದಲು ನಟ ಮಹೇಶ್ ಗುರು, ಇದೀಗ ನಟಿ ಸ್ವರ್ಣಾ ತಮಗೆ ಸಂಭಾವನೆ ಸಿಕ್ಕಿಲ್ಲ ಮತ್ತು ತಮ್ಮ ಭವಿಷ್ಯವನ್ನೇ ಹಾಳು ಮಾಡಿದ್ದಾರೆ ಎಂದು ಕಣ್ಣೀರಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಕೊತ್ತಲವಾಡಿ' ಸಿನಿಮಾ ಬಿಡುಗಡೆಗೂ ಮೊದಲೇ ಅನೇಕ ವಿವಾದಗಳಿಗೆ ಗುರಿಯಾಗಿದೆ. ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೆ ಸಂಭಾವನೆ ನೀಡಿಲ್ಲ ಎಂಬ ಆರೋಪದ ನಡುವೆ, ನಟಿ ಸ್ವರ್ಣಾ ಅವರು ಮತ್ತೊಂದು ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. "ಬಡವರು ಚಿತ್ರರಂಗಕ್ಕೆ ಬರುವುದು ತಪ್ಪಾ? ನನ್ನ ಬದುಕನ್ನೇ ಹಾಳು ಮಾಡಿದರು," ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಈ ಹಿಂದೆ, ನಟ ಮಹೇಶ್‌ ಗುರು ತಮಗೆ ಸಂಭಾವನೆ ಸಿಕ್ಕಿಲ್ಲ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದರು. ಇದರ ಬೆನ್ನಲ್ಲೇ, ನಟಿ ಸ್ವರ್ಣಾ ಅವರ ತಾಯಿ ಸಂಭಾವನೆಗಾಗಿ ನಿರ್ದೇಶಕರ ಬಳಿ ಗೋಗರೆದ ಆಡಿಯೋ ಕೂಡ ವೈರಲ್‌ ಆಗಿತ್ತು. "ನನ್ನ ಮಗಳಿಗೆ ಅಪ್ಪ ಇಲ್ಲ, ನಾನೇ ಅವಳನ್ನು ನೋಡಿಕೊಳ್ಳಬೇಕು," ಎಂದು ಅವರು ಅಳುತ್ತಾ ಮನವಿ ಮಾಡಿಕೊಂಡಿದ್ದರು.U.S. POLO ASSN. Men's Cotton Tailored Fit Solid Oxford Button Down Casual Shirt

ಇದೀಗ ಸ್ವತಃ ನಟಿ ಸ್ವರ್ಣಾ ವಿಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಶ್ರೀರಾಜ್‌ ಅವರು ಈ ಹಿಂದೆ, "ಅವರಿಗೆ ಪಬ್ಲಿಸಿಟಿ ಬೇಕು, ಅದಕ್ಕೆ ಹೀಗೆ ಮಾಡುತ್ತಿದ್ದಾರೆ," ಎಂದು ಹೇಳಿದ್ದರು. "ನಾವು ಹಣ ಕೊಟ್ಟಿದ್ದಕ್ಕೆ ಪುಷ್ಪಾ ಅವರಿಗೂ ಮಾಹಿತಿ ಕೊಟ್ಟಿದ್ದೇವೆ. ಇದರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುತ್ತೇವೆ," ಎಂದು ಸಹ ಹೇಳಿದ್ದರು.

ಆದರೆ ಸ್ವರ್ಣಾ, "ಅದೆಲ್ಲಾ ಸುಳ್ಳು, ಅವರು ನನ್ನ ಬದುಕನ್ನೇ ಹಾಳು ಮಾಡಿದರು. ಸಂಭಾವನೆ ಸಮಸ್ಯೆ ಬಗ್ಗೆ ನಾನು ದೂರು ನೀಡಿರಲಿಲ್ಲ. ಉಳಿದ ಪಾವತಿ ಕೊಡುವುದಿಲ್ಲ ಎಂದು ಗಲಾಟೆ ಮಾಡಿದಾಗ, ಸಹವಾಸ ಬೇಡ ಎಂದು ಸುಮ್ಮನಾಗಿದ್ದೆ. ನನ್ನ ಭವಿಷ್ಯಕ್ಕೆ ಸಮಸ್ಯೆಯಾಗಬಹುದು ಎಂದು ನಾನು ಮೌನವಾಗಿದ್ದೆ. ಈಗ ಅವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿರುವುದು ನೋವುಂಟು ಮಾಡಿದೆ," ಎಂದು ಸ್ಪಷ್ಟಪಡಿಸಿದ್ದಾರೆ.ಪ್ರೇಕ್ಷಕರೇ..ನೀವೂ ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ ಮಾಡಬೇಕಾ? ಇಲ್ಲಿದೆ ನೋಡಿ ರಿಷಬ್ ಶೆಟ್ಟಿ ಮಾಸ್ಟರ್ ಪ್ಲಾನ್

"ನಾವು ಅಷ್ಟು ನಿಯತ್ತಾಗಿ ದುಡಿದು, ಮೋಸ ಹೋಗಿ ಮನೆಯಲ್ಲಿ ಸುಮ್ಮನೆ ಕುಳಿತರೂ ನೀವು ಹೀಗೆ ಮಾಡುವುದು ಸರಿಯೇ? ನಿಮ್ಮ ಒಂದು ಕೆಲಸದಿಂದ ನನ್ನ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ," ಎಂದು ಸ್ವರ್ಣಾ ಮನವಿ ಮಾಡಿದ್ದಾರೆ. "ನನ್ನ ವಿಡಿಯೋದಿಂದ ನ್ಯಾಯ ಸಿಗುತ್ತದೆ ಎಂದು ನಂಬಿದ್ದೆ. ಆದರೆ ಈಗ ನನ್ನ ವಿರುದ್ಧವೇ ಮಾತನಾಡುವುದು ನೋವಾಗುತ್ತಿದೆ," ಎಂದಿದ್ದಾರೆ.

"ನಮಗೆ ನ್ಯಾಯ ಕೊಡಿಸುವವರು ಯಾರೂ ಇಲ್ಲವೇ? ಸುಳ್ಳು ಹೇಳಿ ನಮಗೆ ಏನಾಗಬೇಕು? ಅವರು ಕೊಡುವ ಹಣದಿಂದ ಜೀವನಪರ್ಯಂತ ಸುಖವಾಗಿ ಬದುಕಲು ಸಾಧ್ಯವೇ? ಹೀಗೆ ಮಾಡಿದರೆ ಮುಂದಿನ ಪ್ರಾಜೆಕ್ಟ್‌ಗಳಿಗೆ ಹೊಡೆತ ಬೀಳುತ್ತದೆ. ಸ್ಪಷ್ಟೀಕರಣ ನೀಡಲು ವಿಡಿಯೋ ಮಾಡಿದ್ದೇನೆ ಅಷ್ಟೆ. ಇಷ್ಟಾದರೂ ಅವರು ಏನನ್ನೂ ಕೇಳಿಲ್ಲ. ಅವರ ಉದ್ದೇಶ ನಮ್ಮ ಹೆಸರು ಹಾಳು ಮಾಡುವುದಾ? ಬಡವರು ಚಿತ್ರರಂಗಕ್ಕೆ ಬರುವುದು ತಪ್ಪಾ?" ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಅವರ ಮೋಸದಿಂದ ತಮ್ಮ ಜೀವನ ಹಾಳಾಗಿದೆ ಎಂದು ಸಹ ಸ್ವರ್ಣಾ ಹೇಳಿಕೊಂಡಿದ್ದಾರೆ.