ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆ ಜಾರಿ ನಿರ್ದೇಶನಾಲಯ (ED) ತನಿಖೆಗೆ ಇಂದು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa) ಹಾಜರಾಗಿದ್ದಾರೆ.
ದೆಹಲಿಯ (Delhi) ಇ.ಡಿ ಕಚೇರಿಗೆ ವಕೀಲರೊಂದಿಗೆ ರಾಬಿನ್ ಉತ್ತಪ್ಪ ಹಾಜರಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ವಿಚಾರ: ರಾಜಪುತ್ ಸಮಾಜದ ಎಲ್ಲರೂ ಕೆಳಕಂಡಂತೆ ಭಾಗವಹಿಸುವಂತೆ ಶಿವಮೊಗ್ಗ ನಗರ JDS ಅಧ್ಯಕ್ಷರಾದ ದೀಪಕ್ ಸಿಂಗ್ ಮನವಿ
ಇದೇ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಹಾಗೂ ನಟ ಸೋನು ಸೂದ್‌ಗೆ (Sonu Sood) ಸಹ ವಿಚಾರಣೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಲಾಗಿತ್ತು. ಅದರ ಸಂಬಂಧ ಸೆಪ್ಟೆಂಬರ್ 23 ರಂದು ಯುವರಾಜ್ ಸಿಂಗ್ ಹಾಗೂ ಸೆಪ್ಟೆಂಬರ್ 24 ರಂದು ನಟ ಸೋನು ಸೂದ್ ವಿಚಾರಣೆಗೆ ಒಳಪಡುವಂತೆ ಜಾರಿ ನಿರ್ದೇಶನಾಲಯ ತಿಳಿಸಿದೆ.ಇದನ್ನೂ ಓದಿ: ವಿಕಸಿತ ಭಾರತಕ್ಕಾಗಿ ಒಗ್ಗಟ್ಟಿನ ಸಂಕಲ್ಪ: ಪ್ರಧಾನಿ ಮೋದಿಯ ಕರೆ..!
ಈ ಹಿಂದೆ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜ್ರಾ, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ ಈ ಪ್ರಕರಣದ ಇ.ಡಿ ತನಿಖೆಯನ್ನು ಎದುರಿಸಿದ್ದರು.Veirdo® 100% Pure Cotton Regular Fit Half Sleeve Solid Core Round Neck Multicolor T-Shirt Combo for Men (Pack of 3)