ಸಾಮಾಜಿಕ ಜಾಲತಾಣಗಳ ಯುಗದಲ್ಲಿ, ರೀಲ್ಸ್ ವೈರಲ್ ಆಗಲೆಂದು ಜನರು ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ ಎಂದರೆ, ತಮ್ಮ ಜೀವಕ್ಕೆ ಅಪಾಯವನ್ನೇ ತಂದುಕೊಳ್ಳುತ್ತಾರೆ. ರೈಲ್ವೆ ಹಳಿಯ ಮೇಲೆ ನಿಂತು, ಅಡುಗೆ ಮಾಡುವ ಸಮಯದಲ್ಲಿ, ಇನ್ನು ಕೆಲವು ಮುಕ್ತವಾಗಿರಬೇಕಿದ್ದ ಸಂದರ್ಭವನ್ನೆಲ್ಲಾ ಜಗತ್ತಿಗೆ ತೋರಿಸಿ, ಲೈಕ್, ಕಾಮೆಂಟ್ ಗಳಿಗಾಗಿ ತಮ್ಮ ಮಾನ-ಮರ್ಯಾದೆ ಮತ್ತು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ.
ವೈರಲ್ ಆದ ರೀಲ್ಸ್ ಅನಿವಾರ್ಯ ಕಾರಣಕ್ಕೆ ಡಿಲೀಟ್ ಮಾಡಬೇಕಾದ ಸಂದರ್ಭ ಬಂದರೆ, ಇನ್‌ಫ್ಲುಯೆನ್ಸರ್‌ಗಳು ತೀವ್ರ ಬೇಸರಗೊಳ್ಳುತ್ತಾರೆ. "ಎಷ್ಟು ಕಷ್ಟಪಟ್ಟೆವು, ಎಷ್ಟು ಚೆನ್ನಾಗಿ ಓಡಿತ್ತು, ಆ ರೀಲ್ಸ್ ಡಿಲೀಟ್ ಆಯಿತು!" ಎಂದು ದುಃಖಿಸುವವರಿದ್ದಾರೆ.
ಇದೇ ರೀತಿಯ ಒಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಯುವತಿಯೊಬ್ಬಳ ರೀಲ್ಸ್ ಲಕ್ಷಾಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿತ್ತು. ಆದರೆ, ಆ ರೀಲ್ಸ್‌ನಲ್ಲಿ ಪೊಲೀಸ್ ಠಾಣೆಯ ದೃಶ್ಯ ಇದ್ದ ಕಾರಣ, ಪೊಲೀಸರು ಅದನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಆ ಯುವತಿ, "ಪ್ರಾಣ ಬೇಕಾದರೆ ಬಿಡುತ್ತೇನೆ, ಆದರೆ ರೀಲ್ಸ್ ಡಿಲೀಟ್ ಮಾಡಲ್ಲ!" ಎಂದು ಪೊಲೀಸರಿಗೇ ಧಮ್ಕಿ ಹಾಕಿದ್ದಾಳೆ. ಈ ಯುವತಿ, ರೂಹಿ, zoyakhan.9513 ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ರೀಲ್ಸ್ ಪೋಸ್ಟ್ ಮಾಡಿದ್ದಾಳೆ. Zeneme Traditional Brass 18 K Gold Plated Wedding Jewellery Bahubali Inspired Long Chain Jhumki Earrings for Women and Girl
ವೀಡಿಯೋದಲ್ಲಿ ಭೋಜ್‌ಪುರಿ ಹಾಡೊಂದು ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ಆರಂಭದಲ್ಲಿ ಇದು ಸಾಮಾನ್ಯ ರೀಲ್ಸ್ ಆಗಿತ್ತು, ಆದರೆ ಪೊಲೀಸ್ ಠಾಣೆಯ ದೃಶ್ಯ ಗಮನಕ್ಕೆ ಬಂದ ಕಾರಣ, ಪೊಲೀಸರು ರೂಹಿಯ ಮನೆಗೆ ಭೇಟಿ ನೀಡಿ, ವೀಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, "ಈ ವೀಡಿಯೋ ಮಿಲಿಯನ್‌ಗಟ್ಟಲೆ ಜನ ವೀಕ್ಷಿಸಿದ್ದಾರೆ, ಡಿಲೀಟ್ ಮಾಡಲ್ಲ!" ಎಂದು ರೂಹಿ ತಿರಸ್ಕರಿಸಿದ್ದಾಳೆ. ಇದಾದ ನಂತರ, ಆಕೆ ಚಾಕು ತೋರಿಸಿ ಸಾಯುವುದಾಗಿ ಧಮ್ಕಿ ಹಾಕಿದ್ದಾಳೆ.
ಇಷ್ಟಕ್ಕೆ ಸಮಸ್ಯೆ ಮುಗಿಯಲಿಲ್ಲ. ರೂಹಿ ಮತ್ತೊಂದು ವೀಡಿಯೋ ಮಾಡಿ, ಪೊಲೀಸ್ ಠಾಣೆಯ ಹೊರಗೆ ರೆಕಾರ್ಡ್ ಮಾಡಿದ್ದಾಳೆ. ಈ ವೀಡಿಯೋದಲ್ಲಿ ಹೊಸದಾಗಿ ಬಿಡುಗಡೆಯಾದ ಭೋಜ್‌ಪುರಿ ಹಾಡನ್ನು ಬಳಸಲಾಗಿದೆ. "ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ, ಯಾಕೆ ವೀಡಿಯೋ ಡಿಲೀಟ್ ಮಾಡಬೇಕು?" ಎಂದು ಆಕೆ ಪ್ರಶ್ನಿಸಿದ್ದಾಳೆ. ಜೊತೆಗೆ, ಈ ರೀಲ್ಸ್ ಕೂಡ ವೈರಲ್ ಆಗಬೇಕೆಂದು ಆಕೆ ಮನವಿ ಮಾಡಿದ್ದಾಳೆ. ಈ ಘಟನೆಯಿಂದ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ರೂಹಿಯ ರೀಲ್ಸ್ ಕ್ರೇಜ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.