ಬೆಂಗಳೂರು: ಇತ್ತೀಚೆಗೆ ಅಕ್ರಮವಾಗಿ ಹಣ ಗಳಿಸಲು ಖದೀಮರು ಸ್ಟ್ಯಾಂಡರ್ಡ್ ಪ್ಲಾನ್ ಗಳನ್ನು ರೂಪಿಸುತ್ತಿದ್ದಾರೆ. ಇದರಿಂದ ತಕ್ಷಣವೇ ಶ್ರೀಮಂತರಾಗಬಹುದು ಎಂಬುದು ಅವರ ಆಲೋಚನೆಯಾಗಿದೆ. ಹೀಗಾಗಿ ಕೆಲವರು ಕಳ್ಳತನ, ದರೋಡೆ, ವಂಚನೆಗಳನ್ನು ಮಾಡುತ್ತಿದ್ದರೆ ಇಲ್ಲೊಬ್ಬರು ಸರ್ಕಾರಿ ಅಧಿಕಾರಿಗಳ ರೂಪದಲ್ಲಿ ಬಂದು ಕೋಟ್ಯಾಂತರ ರೂಪಾಯಿ ಹಗಲು ದರೋಡೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆಧಿಕಾರಿಗಳ ಸೋಗಿನಲ್ಲಿ ರಾಬರಿ ಮಾಡಿದ್ದಾರೆ. ಮನೆಗೆ ನುಗ್ಗಿ ಬರೋಬ್ಬರಿ 1.5 ಕೋಟಿ ರೂಪಾಯಿಗಳನ್ನು ಹಗಲು ರಾಬರಿ ಮಾಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಈ ಘಟನೆ ನಡೆದಿದೆ. 4 ಜನರ ತಂಡದಿಂದ ಈ ಕೆಲಸ ನಡೆದಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
-ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು. ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದ ನಾಲ್ವರು.
-ನಾವು ಡಿಪಾರ್ಟ್ಮೆಂಟ್‌ನವರು ಎಂದು ಹೇಳಿ ಮನೆಗೆ ನುಗ್ಗಿದ್ದ ನಾಲ್ವರು. ಗಿರಿರಾಜು ಎಂಬುವವರ ಮನೆಯಲ್ಲಿ ನಡೆದಿರುವ ರಾಬರಿ. ಮನೆಗೆ ಬಂದು ನಿಮ್ಮ ಮನೆಯಲ್ಲಿ ಹಣ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ನಂತರ ನಿಮ್ಮ ಮನೆಯಲ್ಲಿ ಹಣ ಎಲ್ಲಿಂದ ಬಂತು ಎಂದು ಕೇಳಿದ್ದಾರೆ.ಇದನ್ನು ಓದಿ:ಪೋಕ್ಸೊ ಪ್ರಕರಣ ವಿಚಾರ: ಆದೇಶವನ್ನು ಪ್ರಶ್ನಿಸಿ BS. ಯಡಿಯೂರಪ್ಪ ಅವರ ಅರ್ಜಿ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ
-ಅಡುಗೆ ಮನೆಯಲ್ಲಿ ಬ್ಯಾಗ್‌ನಲ್ಲಿ ಹಣವನ್ನು ಮನೆಯವರು ಇಟ್ಟಿದ್ದರು ಎಂದು ಮಾಹಿತಿ ತಿಳಿದುಕೊಂಡಿದ್ದಾರೆ.
-ಈ ವೇಳೆ ಜಮೀನು ಖರೀದಿಗಾಗಿ ಹಣ ತಂದು ಇಟ್ಟುಕೊಂಡಿದ್ದ ಗಿರಿರಾಜು. ನಂತರ ಮನೆ ಮಾಲೀಕ ಗಿರಿರಾಜು ಎಲ್ಲಿದ್ದಾರೆ ಎಂದಿದ್ದಾರೆ. ಅವರು ಇಲ್ಲಾ ಎಂದಾಗ ಹಣದ ಬ್ಯಾಗ್‌ಅನ್ನು ತೆಗೆದುಕೊಂಡು ಹೋಗಿರುವ ಆರೋಪಿಗಳು. ಒಟ್ಟು 1.5 ಕೋಟಿ ನಗದು 50 ಗ್ರಾಂ. ಚಿನ್ನದ ಆಭರಣ ದೋಚಿರುವ ಗ್ಯಾಂಗ್. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.